ದೌರ್ಜನ್ಯ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಸಚಿವ ಹಾಲಪ್ಪ ಆಚಾರ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
Team Udayavani, May 27, 2022, 4:50 PM IST
ಕುಕನೂರು: ಮೊರಾಜಿ ವಸತಿ ಶಾಲೆ ಉದ್ಘಾಟನೆ, ಶಂಕುಸ್ಥಾಪನೆ ವೇಳೆ ನಾಮಫಲಕ ಏಕೆ ಹಾಕಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಕೇಳಿದ್ದಕ್ಕೆ ಪೊಲೀಸ್ ಅಧಿ ಕಾರಿಗಳು ಸಚಿವರ ಸೂಚನೆಯಂತೆ ಕಾಂಗ್ರೆಸ್ ಕಾರ್ಯಕರ್ತರನ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ವೇಳೆ ಪಕ್ಷದ ಹಿರಿಯ ಮುಖಂಡ ಸಿದ್ಧಯ್ಯ ಕಳ್ಳಿಮಠ ಮಾತನಾಡಿ, ಮೇ 24ರಂದು ಯಲಬುರ್ಗಾ ತಾಲೂಕಿನ ತಾಳಕೇರಿಯಲ್ಲಿ ಮೊರಾರ್ಜಿ ವಸತಿ ಶಾಲೆಯ ಉದ್ಘಾಟನೆಯ ಸಮಾರಂಭದಲ್ಲಿ ಶಂಕು ಸ್ಥಾಪನೆ ನಾಮಫಲಕ ಏಕೆ ಹಾಕಿಲ್ಲ ಎಂದು ಕೇಳಿದ್ದಕ್ಕೆ ಸಚಿವ ಹಾಲಪ್ಪ ಆಚಾರ್ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರ ಮೂಲಕ ಬೇರೆ ಸ್ಥಳಕ್ಕೆ ಕರೆದೊಯ್ಯದು ದೌರ್ಜನ್ಯ ನಡೆಸಿದ್ದಾರೆ. ಅಭಿವೃದ್ಧಿ ಸಹಿಸದೇ ಇಂತ ಕೀಳುಮಟ್ಟದ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರ ಆಡಳಿತಾವಧಿಯಲ್ಲಿ ತಾಳಕೇರಿ ಗ್ರಾಮದಲ್ಲಿ 9.16 ಎಕರೆ ಪ್ರದೇಶದಲ್ಲಿ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡಕ್ಕಾಗಿ 15 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ಕಾಮಗಾರಿಯನ್ನು ತಾಲೂಕಿನ ಜನ ಮರೆತಿಲ್ಲ ಎಂದರು.
ಪಪಂ ಸದಸ್ಯ ಗಗನ್ ನೋಟಗಾರ ಮಾತನಾಡಿ, ಮಾಜಿ ಸಚಿವ ಬಸವರಾಜ ರಾಯರಡ್ಡಿಯವರ ಅವಧಿಯಲ್ಲಿ ಹಲವೆಡೆ ಮೊರಾರ್ಜಿ ವಸತಿ ಶಾಲೆ, ಬಸ್ ನಿಲ್ದಾಣ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಬಹುಗ್ರಾಮ ಕುಡಿವ ನೀರು, ಕೆರೆ ತುಂಬಿಸುವ ಯೋಜನೆ ಸೇರಿದಂತೆ ಎಲ್ಲಾ ಕಾಮಗಾರಿ ಮಾಡಿದ್ದಾರೆ. ಆದರೆ ಬಿಜೆಪಿ ಅವರು ಎಲ್ಲ ಕಾಮಗಾರಿಗಳನ್ನು ಹೈಜಾಕ್ ಮಾಡಿದ್ದಾರೆ. ಶಂಕು ಸ್ಥಾಪನೆ ನಾಮಫಲಕ ಹಾಕುವ ಸೌಜನ್ಯವನ್ನೂ ಮರೆತಿರುವುದು ಖೇದದ ಸಂಗತಿ. ಇದನ್ನೆಲ್ಲ ಅರಿತ ತಾಲೂಕಿನ ಜನ ಮುಂದಿನ ದಿನಗಳಲ್ಲಿ ಮತ್ತೆ ಬಸವರಾಜ ರಾಯರಡ್ಡಿಯವರನ್ನು ಆಯ್ಕೆ ಮಾಡುವದರಲ್ಲಿ ಯಾವುದೇ ಸಂದೆಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರ ಘಟಕದ ಅಧ್ಯಕ್ಷ ರೆಹಮಾನಸಾಬ್ ಮಕ್ಕಪ್ಪನವರ್, ವಕ್ತಾರ ಸಂಗಮೇಶ ಗುತ್ತಿ, ಶಿವನಗೌಡ ದಾನರಡ್ಡಿ, ಶರಣಪ್ಪ, ಸುಧಿಧೀರ್, ಈರಣ್ಣ ಹಳ್ಳಿಕೇರಿ, ಅಶೋಕ ತೋಟದ, ಮಾಂತೇಶ ಗಾಣಗೇರ್, ಅರವಿಂದ ಮುಂದಲಮನಿ, ಪಪಂ ಸದಸ್ಯರಾದ ನೂರುದ್ದೀನ್ ಸಾಬ್ ಗುಡಿಹಿಂದಲ್, ಪ್ರಶಾಂತ ಆರ್‌ಬೆರಳ್ಳಿನ್, ಗ್ರಾಪಂ ಸದಸ್ಯರಾದ ಯಮನೂರಪ್ಪ ಕಟ್ಟಿಮನಿ, ಯಮನೂರಪ್ಪ ಬೂದಗುಂಪಿ, ಮುಖಂಡರಾದ ಎಂ.ಡಿ. ಗುಡಿಹಿಂದಲ್, ದೇವಪ್ಪ ಸೋಭಾನದ್, ಮುತ್ತು ವಾಲ್ಮೀಕಿ, ಗವಿಸಿದ್ಧಪ್ಪ ಶೆಲ್ಯೂಡಿ, ರಾಘವೇಂದ್ರ ಕಾತರಕಿ, ದೇವನಗೌಡ ಹಿರೇಗೌಡರ, ಸಂತೋಷ ಬನ್ನಿಕೊಪ್ಪ, ಭೀಮಣ್ಣ ಬೂದಗುಂಪಿ, ಯಲ್ಲಪ್ಪ ಕಲ್ಮನಿ, ಮಾಂತೇಶ ಜಂಗ್ಲಿ, ಮಂಜುನಾಥ ಯಡಿಯಾಪುರ, ಶಿವರಾಜ ದೊಡ್ಡಮನಿ, ಗುರಪ್ಪ ಪಂತರ್ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.