ನವವೃಂದಾವನ ಗಡ್ಡೆಗೆ ತಾತ್ಕಾಲಿಕ ಪ್ಲಾಸ್ಟಿಕ್ ಸೇತುವೆ ನಿರ್ಮಾಣ
Team Udayavani, Mar 13, 2020, 4:43 PM IST
ಗಂಗಾವತಿ: ಇತಿಹಾಸ ಪ್ರಸಿದ್ದ ತಾಲ್ಲೂಕಿನ ಆನೆಗೊಂದಿ ನವವೃಂದಾವನ ಗಡ್ಡೆ ಮತ್ತು ಹೊಸಪೇಟೆ ತಾಲೂಕಿನ ವೆಂಕಟಾಪೂರ ಸೀಮೆಯ ದಡದ ಮಧ್ಯೆ ತುಂಗಭದ್ರಾ ನದಿಗೆ ತಾತ್ಕಾಲಿಕ ಪ್ಲಾಸ್ಟಿಕ್ ಸೇತುವೆ ನಿರ್ಮಾಣ ಮಾಡಲಾಗಿದ್ದು ಈ ಸೇತುವೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಗುರುವಾರದಂದು ಆರಂಭವಾಗಿರುವ ವ್ಯಾಸರಾಯ (ರಾಜ)ರ ಆರಾಧನಾ ಕಾರ್ಯಕ್ರಮ ಕ್ಕೆ ಹೊಸಪೇಟೆ ಕಡೆಯಿಂದ ಬರುವ ಭಕ್ತರು ಮತ್ತು ವಿವಿಧ ಮಠಾಧೀಶರಿಗೆ ಅನುಕೂಲವಾಗುವ ದೃಷ್ಟಿಯಿಂದ ವ್ಯಾಸರಾಯ ಮಠದ ವತಿಯಿಂದ ತುಂಗಭದ್ರಾ ನದಿಗೆ ಸುಮಾರು 200ಮೀಟರ್ ಉದ್ದದ ತಾತ್ಕಾಲಿಕ ಪ್ಲಾಸ್ಟಿಕ್ ಸೇತುವೆ ನಿರ್ಮಿಸಿ ಲಾಗಿದೆ.
ಮಹಾರಾಷ್ಟ್ರ ಪುಣೆಯ ಖಾಸಗಿ ಕಂಪನಿಯೊಂದು ನಿರ್ಮಾಣ ಮಾಡಿದ ಸೇತುವೆ ಈಭಾಗದಲ್ಲಿ ಹೊಸತಾಗಿದೆ. 2+2 ಅಳತೆಯ 10ಕೆಜಿ ಭಾರವಿರುವ ಪ್ಲಾಸ್ಟಿಕ್ ಡಬ್ಬಿಗಳನ್ನು ಒಂದಕ್ಕೊಂದು ಲಾಕರ್ ಮೂಲಕ ಜೋಡಿಸಲಾಗಿತ್ತೆ. ಡಬ್ಬಿಗಳು ಜಾರದಂತೆ ಹಗ್ಗದ ಮೂಲಕ ಕಟ್ಟಿ ಭದ್ರಪಡಿಸಲಾಗುತ್ತದೆ. ಈ ಸೇತುವೆಯನ್ನು ಕಡಿಮೆ ಮತ್ತು ನಿಂತ ನೀರಿನಲ್ಲಿ ಮಾತ್ರ ನಿರ್ಮಿಸಲಾಗುತ್ತದೆ.
ತಾತ್ಕಾಲಿಕ ವ್ಯವಸ್ಥೆ: ನವವೃಂದಾವನಗಡ್ಡಿಯಲ್ಲಿ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಸೇತುವೆ ನಿರ್ಮಿಸಲಾಗಿದೆ. ನಿಂತ ನೀರಿನಲ್ಲಿ ಸೇತುವೆ ನಿರ್ಮಿಸಲಾಗಿದೆ. ಸುರಕ್ಷತಾ ಕ್ರಮ ಅನುಸರಿಸಿ ಸೇತುವೆ ನಿರ್ಮಿಸಲಾಗಿದೆ. ಸೇತುವೆ ಮೇಲೆ ಜನರು ಹೋಗುವಾಗ ಒಬ್ಬಬ್ಬರಂತೆ ಹೋಗಲು ಸೂಚನೆ ನೀಡಿ ಸುರಕ್ಷತೆಯ ಎಚ್ಚರಿಕೆ ವಹಿಸಲಾಗಿದೆ. ಈ ಸೇತುವೆ ಆರಾಧನಾ ಕಾರ್ಯಕ್ರಮ ಸಂದರ್ಭದಲ್ಲಿ ಮಾತ್ರ ಬಳಕೆ ಮಾಡಲಾಗುತ್ತದೆ ಎಂದು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸ್ಥಳೀಯ ವ್ಯವಸ್ಥಾಪಕ ಸುಮಂತಕುಲಕರ್ಣಿ ಉದಯವಾಣಿ ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
MUST WATCH
ಹೊಸ ಸೇರ್ಪಡೆ
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.