ಕೋವಿಡ್‌ನಿಂದ ಮೃತರ ಅಂತ್ಯಸಂಸ್ಕಾ ರ ಬೇರೆಡೆ ಮಾಡಿ
Team Udayavani, Sep 22, 2020, 6:05 PM IST
ಕೊಪ್ಪಳ: ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಕಿರಿದಾದ ಜಾಗದಲ್ಲಿ ಮಾಡುವುದನ್ನು ಬಿಟ್ಟು ಬೇರೆಡೆ ಮಾಡಬೇಕೆಂದು ಬ್ರಾಹ್ಮಣ, ಗೋಂದಳಿ, ವಿಶ್ವಕರ್ಮ ಸಮಾಜದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನಗರ ಸಮೀಪದ ಗವಿಮಠದ ಪಕ್ಕದಲ್ಲಿನ ಕುಣಿಕೇರಿ-ಹಾಲವರ್ತಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಈ ಹಿಂದಿನಿಂದಲೂ ಬ್ರಾಹ್ಮಣ, ವೈಶ್ಯ, ದೇವಾಂಗ, ವಿಶ್ವಕರ್ಮ ಮತ್ತು ಗೋಂಧಳಿ ಜನಾಂಗದವರ ಶವಗಳನ್ನು ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಆದರೆ ಇತ್ತೀಚಿಗೆ ಮಹಾಮಾರಿ ಕೋವಿಡ್ ದಿಂದ ಮೃತಪಟ್ಟವರನ್ನು ನಮ್ಮ ಜನಾಂಗದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಈ ರೋಗವು ಎಷ್ಟು ಭಯಾನಕ ಎಂಬುದು ಎಲ್ಲರಿಗೂ ತಿಳಿದ ವಿಷಯ.
ನಮ್ಮ ಸಮಾಜದಲ್ಲಿ ಸಹಜ ರೋಗಗಳಿಂದ ಮೃತರಾದ ಶವಗಳನ್ನು ಸಂಸ್ಕಾರಕ್ಕಾಗಿ ತೆಗೆದುಕೊಂಡು ಹೋದಾಗ ಕೋವಿಡ್ ದಿಂದ ಮೃತರಾದವರ ಶವಗಳು ಸಂಪೂರ್ಣ ದಹನವಾಗುವವರೆಗೂ ಹೊರಗಡೆ 2-3 ಗಂಟೆವರೆಗೂ ಇಟ್ಟು ಕಾದು ನಂತರ ಶವ ಸಂಸ್ಕಾರ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜನರು ಭಯದಿಂದ ಶವ ಸಂಸ್ಕಾರಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಇದೇ ರುದ್ರಭೂಮಿಯ ಪಶ್ಚಿಮ ಭಾಗಕ್ಕೆ ಸಾಕಷ್ಟು ಖಾಲಿ ಜಾಗವಿದ್ದು, ಅಲ್ಲಿ ಕೋವಿಡ್ ಶವಗಳನ್ನು ಅಂತ್ಯ ಸಂಸ್ಕಾರ ಮಾಡಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿ ಬ್ರಾಹ್ಮಣ, ವೈಶ್ಯ, ದೇವಾಂಗ , ಗೋಂಧುಳಿ ಮತ್ತು ವಿಶ್ವಕರ್ಮ ಸಮಾಜದ ಮುಖಂಡರು ಮನವಿ ಸಲ್ಲಿಸಿದರು. ಡಾ| ಕೆ.ಜಿ. ಕುಲಕರ್ಣಿ, ಜಗನ್ನಾಥ ಹುನಗುಂದ, ವಸಂತ ಪೂಜಾರ, ವಾದಿರಾಜ ಪಾಟೀಲ, ನಾಮದೇವ ಜಕ್ಕಲಿ, ಕನಕರಾಜ ಗೋಂಧಳಿ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.