ಮೃತಪಟ್ಟು ವಾರ್ಷಿಕ ಪುಣ್ಯ ತಿಥಿ ಸಮೀಪಿಸುತ್ತಿದ್ದರೂ, ಇನ್ನೂ ದೊರೆಯದ ಕೋವಿಡ್ ಪರಿಹಾರ ಮೊತ್ತ
Team Udayavani, Mar 21, 2022, 6:05 PM IST
ಕುಷ್ಟಗಿ: ಕೋವಿಡ್ ನಿಂದ ಮೃತರಾದವರ ವಾರ್ಷಿಕ ಪುಣ್ಯತಿಥಿ ಸಮೀಪಿಸುತ್ತಿದ್ದರೂ, ಬಹುತೇಕ ಮೃತ ಕುಟುಂಬ ವರ್ಗಕ್ಕೆ ಕೋವಿಡ್ ಪರಿಹಾರ ಬಂದಿಲ್ಲ. ಇಲ್ಲಿನ ತಹಶೀಲ್ದಾರ ಕಚೇರಿಗೆ ಅಲೆದಾಡುತ್ತಿದ್ದರೂ, ಈ ಕುಟುಂಬದವರಿಗೆ ಕೋವಿಡ್ ಪರಿಹಾರದ ಮೊತ್ತ ಕನ್ನಡಿಯೊಳಗಿನ ಗಂಟಾಗಿದೆ.
ಕಳೆದ ವರ್ಷ ಕೋವಿಡ್ ಸಂಧರ್ಭದಲ್ಲಿ ತಾಲೂಕಿನಲ್ಲಿ 112 ಜನ ಮೃತರಾಗಿದ್ದಾರೆ. ಇವರಲ್ಲಿ 49 ಜನರ ಕುಟುಂಬಕ್ಕೆ ತಲಾ 1ಲಕ್ಷ ರೂ. ಪರಿಹಾರ ಸಿಕ್ಕಿದೆ. ಇನ್ನುಳಿದ 63 ಜನ ನೊಂದ ಕುಟುಂಬಕ್ಕೆ ಕೋವಿಡ್ ಪರಿಹಾರ ಮರೀಚಿಕೆಯಾಗಿದೆ.
ಕೋವಿಡ್ ನಿಂದ ಸತ್ತವರ ಹೆಸರು ಕಡತದಲ್ಲಿ ಉಳಿದುಕೊಂಡಿದ್ದು, ಕೋವಿಡ್ ನಿಂದ ಸತ್ತವರು ಜೀವನ ಮೋಕ್ಷ ಕಂಡಿದ್ದು, ಸರ್ಕಾರದ ಕೋವಿಡ್ ಪರಿಹಾರದ ದಾಖಲೆಗಳಿಗೆ ಇನ್ನೂ ಮೋಕ್ಷ ಕಂಡಿಲ್ಲ.
ಕುಷ್ಟಗಿಯ ರೈತ ಭಾಷುಸಾಬ್ ಹೊನ್ನೂರುಸಾಬ್ ಗೈಬಣ್ಣನವರ್ ಕಳೆದ ವರ್ಷ ಮೆ. 11ರಂದು ಇಲ್ಲಿನ ತಾಲೂಕಾ ಸರ್ಕಾರಿ ಆಸ್ಪತ್ರೆಯ ಡಿಸಿಎಚ್ ಸಿಯಲ್ಲಿ ನಿಧನರಾಗಿದ್ದಾರೆ. ಕಳೆದ ಸೋಮವಾರ ಹಿರಿಯರ ಹಬ್ಬ ಮಾಡಿದ್ದು, ಇನ್ನೂ 1ಲಕ್ಷ ರೂ. ಪರಿಹಾರ ಮೊತ್ತ ಬಂದಿಲ್ಲ. ತಹಶೀಲ್ದಾರ ಕಚೇರಿಗೆ ಅಲೆದಾಡಿ ಸುಸ್ತಾಗಿರುವ ಕುಟುಂಬ ವರ್ಗಕ್ಕೆ ತಹಶೀಲ್ದಾರ ಕಚೇರಿಯ ಇಲಾಖೆಯ ಅನಗತ್ಯ ವಿಳಂಬ ಧೋರಣೆಯಿಂದಾಗಿ ಕುಟುಂಬ ವರ್ಗವೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ತಮ್ಮವರನ್ನು ಕಳೆದುಕೊಂಡವರಗಿಂತ ಹೆಚ್ಚಿನ ದುಃಖವನ್ನು ತಹಶೀಲ್ದಾರ ಕಚೇರಿಯ ವಿಳಂಬ ಧೋರಣೆ ಕಾರಣವಾಗಿದೆ.
ಇದನ್ನೂ ಓದಿ:ಉನ್ನತ ಶಿಕ್ಷಣ.. ಇದು ಶ್ರೀಮಂತರು, ರಾಜಕಾರಣಿಗಳು ದುಡ್ಡು ಸಂಗ್ರಹ ಮಾಡುವ ಹುಂಡಿ : HDK ಕಿಡಿ
ತಹಸೀಲ್ದಾರ ಕಚೇರಿಯಲ್ಲಿ ವಿಚಾರಿಸಿದರೆ, ಜಿಲ್ಲಾಡಳಿತಕ್ಕೆ ಕಳಿಸಿರುವುದಾಗಿ ನೆಪ ಹೇಳುತ್ತಿದ್ದು, ಜಿಲ್ಲಾಡಳಿತ ಕಚೇರಿಯ ಸಂಬಂಧಿಸಿದ ಸಿಬ್ಬಂದಿಯನ್ನು ವಿಚಾರಿಸಿದರೆ ಕುಷ್ಟಗಿ ತಹಶೀಲ್ದಾರ ಕಚೇರಿಯತ್ತ ಬೆರಳು ಮಾಡುತ್ತಿದ್ದು, ಇವರ ಅಲೆದಾಡಿಸುವಿಕೆಗೆ ಪರಿಹಾರ ಮೊತ್ತ ಯಾವಾಗ್ಲಾದರೂ ಬರಲಿ ಎಂದು ಕೇಳುವುದನ್ನೇ ಬಿಟ್ಟಿದ್ದಾರೆ.
ಇದೇ ರೀತಿ ಕುಷ್ಟಗಿ ಯ ನಾಗಪ್ಪ ಕುರಿ, ಡೊಣ್ಣೆಗುಡ್ಡ ಗ್ರಾಮದ ದುರಗಪ್ಪ ವಾಲೀಕಾರ ಅವರ ಕುಟುಂಬ ವರ್ಗದವರು ಸೇರಿದಂತೆ ಮೊದಲಾದವರು ಕೋವಿಡ್ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ತಾಂತ್ರಿಕ ಲೋಪ ಎಲ್ಲಿ?: ಕೋವಿಡ್ ನಿಂದ ಮೃತರಾದ ಕುಟುಂಬಗಳಿಂದ ಮೃತ ಆಧಾರ ಕಾರ್ಡ, ಎಸ್.ಆರ್. ಎಫ್. ಐಡಿ ಇತ್ಯಾಧಿ ಪೂರಕ ದಾಖಲೆಗಳನ್ನು ಸ್ವೀಕರಿಸಲಾಗಿದೆ. ಸ್ವೀಕೃತ ದಾಖಲೆಗಳ ಪೈಕಿ 42 ಬಿಪಿಎಲ್ ಕಾರ್ಡದಾರ ಕುಟುಂಬಗಳು, ಎಪಿಎಲ್ 7 ಕುಟುಂಬಗಳಿಗೆ 1 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಈ ಕುಟುಂಬಗಳಿಗೆ ಇನ್ನೂ ತಲಾ 50ಸಾವಿರ ರೂ. ಕೇಂದ್ರ ಸರ್ಕಾರದಿಂದ ಬರಬೇಕಿದ್ದು ಅದರ ಬಗ್ಗೆ ಯಾವೂದೇ ಮಾಹಿತಿ ಇಲ್ಲ. ಇನ್ನೂ 63 ಕುಟುಂಗಳಿಗೆ ಪರಿಹಾರ ಪರಿಚೀಕೆಯಾಗಿದ್ದು ಇಷ್ಟು ವಿಳಂಬ ಧೋರಣೆಗೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಗಮನಿಸದೇ ಇರುವುದು ವಿಪರ್ಯಸವೆನಿಸಿದೆ. ಮಾಹಿತಿ ಪ್ರಕಾರ ದಾಖಲೆಗಳನ್ನು ಆನಲೈನ್ ನಲ್ಲಿ ನೊಂದಣಿ ವೇಳೆ ಎಸ್ ಆರ್ ಎಫ್ ಐಡಿ ಸಂಖ್ಯೆಯನ್ನು ತಪ್ಪಾಗಿ ನೊಂದಾಯಿಸಿದ್ದು, ಈ ಹಿನ್ನೆಲೆಯಲ್ಲಿ ಸದರಿ ಕುಟುಂಬಗಳು ನೀಡುವ ಎಸ್ ಆರ್ ಎಫ್ ಐಡಿ ಸಂಖ್ಯೆಗೆ ಹೊಂದಾಣಿಕೆಯಾಗದೇ ಡಾಟಾ ನಾಟ್ ಪೌಂಡ್ ಎಂದು ಬರುತ್ತಿದೆ. ಇಷ್ಟು ದಿನಗಳಾದರೂ ಎಲ್ಲಿ ಲೋಪವಾಗಿದೆ ಎಂದು ಸರಿಪಡಿಸಲಾಗಿಲ್ಲ.
– ಮಂಜುನಾಥ ಮಹಾಲಿಂಗಪುರ ಕುಷ್ಟಗಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.