ಗಂಗಾವತಿ: ಸಾಣಾಪುರ್ ಲೇಕ್ ಮೇಲೆ ಮೊಸಳೆಗಳ ಹಾವಳಿ; ಆತಂಕದಲ್ಲಿ ಸ್ಥಳೀಯರು
Team Udayavani, Mar 7, 2022, 11:47 AM IST
ಗಂಗಾವತಿ: ತಾಲ್ಲೂಕಿನ ಸಣಾಪುರ ತುಂಗಭದ್ರಾ ಎಡದಂಡೆ ಕಾಲುವೆಯ ಲೇಕ್ (ಕೆರೆ) ಮೇಲಿನ ರಸ್ತೆಗೆ ರಾತ್ರಿ ಸಂದರ್ಭದಲ್ಲಿ ಮೊಸಳೆಗಳು ಸಂಚಾರ ನಡೆಸುತ್ತಿರುವುದರಿಂದ ಹೊಲ ಗದ್ದೆಗಳಿಗೆ ನೀರನ್ನು ಹರಿಸಲು ಮತ್ತು ಬೆಳಗಿನ ಜಾವ ಮೇವು ತರಲು ಹೋಗುವ ಸ್ಥಳೀಯರಿಗೆ ಇದರಿಂದ ಆತಂಕ ಉಂಟಾಗಿದೆ.
ಸುಮಾರು 4 ರಿಂದ 5ಮೊಸಳೆಗಳು ಕಳೆದ ತಿಂಗಳಿನಿಂದ ರಸ್ತೆ ಮೇಲೆ ಮೊಸಳೆಗಳು ಪ್ರತ್ಯಕ್ಷವಾಗುತ್ತಿವೆ. ಸಣಾಪುರ ಕೆರೆಯ ಕೆರೆಯೂ ಪ್ರವಾಸೋದ್ಯಮದ ಕ್ಷೇತ್ರವಾಗಿದ್ದು ಇಲ್ಲಿಗೆ ದೂರದ ಊರುಗಳಿಂದ ಜನರು ಆಗಮಿಸುತ್ತಾರೆ ಜತೆಗೆ ಸ್ಥಳೀಯರು ಸುತ್ತಮುತ್ತಲಿರುವ ಗದ್ದೆಗಳಿಗೆ ನೀರನ್ನು ಹರಿಸಲು ಮತ್ತು ಮೇವನ್ನು ತರಲು ಹೋಗುವ ಸಂದರ್ಭದಲ್ಲಿ ಈ ಮೊಸಳೆಗಳು ಪ್ರತ್ಯಕ್ಷವಾಗುತ್ತಿರುವುದರಿಂದ ಆತಂಕಗೊಂಡಿದ್ದಾರೆ .
ಹಲವು ಬಾರಿ ಅರಣ್ಯ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ . ತುಂಗಭದ್ರಾ ಎಡದಂಡೆ ಕಾಲುವೆ ಇಲ್ಲಿ ಹರಿಯುತ್ತಿರುವುದರಿಂದ ಗುಡ್ಡಪ್ರದೇಶದಲ್ಲಿ 2 ಕಡೆ ನೈಸರ್ಗಿಕವಾಗಿ ಕೆರೆಗಳ ನಿರ್ಮಾಣ ವಾಗಿದೆ . ವರ್ಷದ 12 ತಿಂಗಳು ಈ ಕೆರೆಯಲ್ಲಿ ನೀರು ಲಭ್ಯವಿರುತ್ತವೆ.
ಬೋಟಿಂಗ್ ಪ್ರವಾಸೋದ್ಯಮ : ವೀಕೆಂಡ್ ಮತ್ತು ವಿಶೇಷ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸುವ ಪ್ರವಾಸಿಗರನ್ನು ದೇಸೀಯ ಹರಿಗೋಲ್ ನಲ್ಲಿ ಬೋಟಿಂಗ್ ಮಾಡಿಸಲಾಗುತ್ತದೆ . ಪ್ರಸ್ತುತ ಮೊಸಳೆಗಳು ಪ್ರತ್ಯಕ್ಷವಾಗಿರುವುದರಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೂ ಆತಂಕ ಉಂಟಾಗಿದೆ ಕೂಡಲೇ ಅರಣ್ಯ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆ ಯವರು ಮೊಸಳೆಗಳನ್ನು ಹಿಡಿದು ಬೇರೆ ಕಡೆ ಬಿಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.