ನಿಡಶೇಸಿ ಕೆರೆಗೆ ಅಪರೂಪದ ಅತಿಥಿ
Team Udayavani, Feb 3, 2020, 3:44 PM IST
ಕುಷ್ಟಗಿ: ತಾಲೂಕಿನ ನಿಡಶೇಸಿ ಕೆರೆಗೆ ಕ್ರೌಂಚ್ ಪಕ್ಷಿಗಳ ಆಗಮನವಾಗಿದ್ದು, ಕೆರೆಯ ದಡದಲ್ಲಿ ಈ ಪಕ್ಷಿಗಳು ವಿಹರಿಸುತ್ತಿರುವುದು ಪಕ್ಷಿಪ್ರಿಯರ ಆನಂದವನ್ನು ಇಮ್ಮಡಿಸಿದೆ.
ನಿಡಶೇಸಿ ಕೆರೆಯಲ್ಲಿ ಈಚೆಗೆ ಪಟ್ಟೆ ತಲೆ ಹೆಬ್ಟಾತುಗಳು ಕಾಣಿಸಿಕೊಂಡ ಬೆನ್ನಲ್ಲೆ ಇದೀಗ ಕ್ರೌಂಚ್ ಪಕ್ಷಿಗಳ ಆಗಮನವಾಗಿದೆ. ಈ ಹಕ್ಕಿಗಳು ಕಳೆದ ಐದಾರು ವರ್ಷಗಳಿಂದ ಇಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ 20ಕ್ಕೂ ಹೆಚ್ಚು ಹಕ್ಕಿಗಳು ವಲಸೆ ಬಂದಿರುವುದನ್ನು ಪಕ್ಷಿ ಛಾಯಾಗ್ರಾಹಕ ಪಾಂಡುರಂಗ ಆಶ್ರೀತ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಮುಂಗೋಲಿಯಾ, ಚೀನಾ, ಮಧ್ಯ ಯುರೋಪ ಭಾಗದಿಂದ ಈ ಹಕ್ಕಿಗಳು ವಲಸೆ ಬಂದಿವೆ.
ಇಂಗ್ಲಿಷ್‌ನಲ್ಲಿ ಡೆಮೊಯ್ಸೆಲ್ಸಿ ಕ್ರೇನ್ ಎಂದು ಕರೆಯಲಾಗುವ ಕ್ರೌಂಚ್ ಪಕ್ಷಿಗಳು ಕೊಕ್ಕರೆ ಜಾತಿಗೆ ಸೇರಿವೆ. ಇದು ಇತರೆ ಕೊಕ್ಕರೆ ಪಕ್ಷಿಗಳಿಗಿಂತ ವಿಭಿನ್ನವಾಗಿದೆ. ಸೂಕ್ಷ್ಮ ಸಂವೇದನೆಯ ಈ ಹಕ್ಕಿಗಳು ಗುಂಪು, ಗುಂಪಾಗಿ ಕಂಡು ಬರುತ್ತವೆ. ಸಂತಾನಾಭಿವೃದ್ಧಿಗೆ ಇಲ್ಲಿಗೆ ಬರುತ್ತಿವೆ. ಕುತ್ತಿಗೆ, ಕೊಕ್ಕು ಬೂದು ಬಣ್ಣದ ಉದ್ದನೆಯ ಕಾಲು, ಬಿಳಿ ಛಾಯೆಯ ಕಂದು ಬಣ್ಣ, ಕಣ್ಣಿನಿಂದ ಆರಂಭವಾಗಿ ಕುತ್ತಿಗೆಯ ಬುಡದವರೆಗೂ ಕಾಣಬಹುದಾಗಿದೆ. ಈ ಹಕ್ಕಿ ಗುರುತಿಸುವುದು ಸುಲಭ ರೆಕ್ಕೆ ಬಡಿಯುತ್ತ ಹಾರುವುದು, ಕಚ್ಚಾಟ, ನರ್ತನ ಪಕ್ಷಿ ಪ್ರಿಯರಿಗೆ ಗಮನಾರ್ಹವೆನಿಸಿವೆ. ನಿಡಶೇಸಿ ಕೆರೆ ಹಲವು ಪ್ರಭೇದದ ಪಕ್ಷಿಗಳು ವಲಸೆ ಬರುತ್ತಿದ್ದು, ಅರಣ್ಯ ಇಲಾಖೆ ಈ ಪಕ್ಷಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಿದೆ. ಪಕ್ಷಿಗಳ ಸ್ವತ್ಛಂದ ವಿಹಾರಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವ ಅಗತ್ಯವಾಗಿದೆ ಎನ್ನುತ್ತಾರೆ ಪಕ್ಷಿಪ್ರಿಯರು.
ಅಪರೂಪವಾಗಿರುವ ಕ್ರೌಂಚ್ ಪಕ್ಷಿಗಳು ನಿಡಶೇಸಿ ಕೆರೆಗೆ ಬಂದಿರುವುದು ಸಂತಸವಾಗಿದೆ. ಒಂದೇ ದಿನ 20ಕ್ಕೂ ಅಧಿಕ ಹಕ್ಕಿಗಳು ಬಂದಿರುವುದು ಗಮನಾರ್ಹವೆನಿಸಿದ್ದು, ದಿನದಿಂದ ದಿನಕ್ಕೆ ನಿಡಶೇಸಿ ಕೆರೆ ವಿವಿಧ ಪಕ್ಷಿಗಳಿಂದ ಸೌಂದರ್ಯ ಹೆಚ್ಚಿಸಿದೆ. ಈ ಕೆರೆಗೆ ಯಾವ್ಯಾವ ಪಕ್ಷಿಗಳು ಬಂದು ಹೋಗಿವೆ ಎನ್ನುವ ಕುರಿತು ಛಾಯಾಚಿತ್ರ ಸಮೇತ ವಿವರ ದಾಖಲಾಗಬೇಕಿದೆ. – ಪಾಂಡುರಂಗ ಆಶ್ರೀತ, ವನ್ಯಜೀವಿ ಛಾಯಾಗ್ರಾಹಕ
-ಮಂಜುನಾಥ ಮಹಾಲಿಂಗಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.