ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

Team Udayavani, May 1, 2024, 3:04 PM IST

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಕೊಪ್ಪಳ: ಈ ಬರಿ ಲೋಕ ಸಭಾ ಚುನಾವಣೆಯಲ್ಲಿ ಜನರು ಮೋದಿ ಪರವಾಗಿ ಇರುವುದನ್ನು ಕಂಡು ಕಾಂಗ್ರೆಸ್ ಹೊಟ್ಟೆಕಿಚ್ಚು ಪಡುತ್ತಿದೆ, ಒಂದೆಡೆ ಜನರು ಮೋದಿ ಮೋದಿ ಎಂದು ಹೇಳಿದರೆ ಕಾಂಗ್ರೆಸ್ ಗೆ ಬೇದಿ ಜಾಸ್ತಿ ಆಗುತ್ತೆ ಹಾಗಾಗಿ ಅವರು ಚೆಂಬು ಕೈಯಲ್ಲಿ ಬಿಡುತ್ತಿಲ್ಲ ಎಂದು ಮಾಜಿ‌ ಸಚಿವ ಸಿ.ಟಿ‌. ರವಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾರ್ಮಿಕರ ದುಡಿಮೆಯಲ್ಲಿ ದೇಶದ ಭವಿಷ್ಯವಿದೆ ಪ್ರಧಾನಿ ತಮ್ಮನ್ನ ಪ್ರಧಾನ ಸೇವಕ ಎಂದು ಕರೆದಿದ್ದಾರೆ ಅವರು ನಾಡಿನ ಪ್ರಧಾನ ಸೇವಕ ಅವರ ಉದ್ದೇಶ ರಾಜಕಾರಣ ನಾಡಿನ ಸೇವೆಗೆ ಇರಬೇಕು ಎಂದವರು, ಪ್ರಧಾನಿ ಮೋದಿ ಅವರು ಒಂದು ದಿನವೂ ರಜೆ ಪಡೆಯದೇ ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟಿದ್ದಾರೆ ಹಾಗಾಗಿ ಈ ಚುನಾವಣೆಯಲ್ಲಿ ಮತ್ತೊಮ್ಮೆ‌ ಮೋದಿ ಪ್ರಧಾನಿಯಾಗಿ ಮುಂದುವರೆಯಬೇಕು ಎಂದು ವಿಕಸಿತ ಭಾರತದ ಸಂಕಲ್ಪ ಪತ್ರ ಜನರ‌ ಮುಂದಿಟ್ಟು ಮತಯಾಚನೆ ಮಾಡಿದೆ ಎಂದು ಹೇಳಿದರು.

10 ವರ್ಷದಲ್ಲಿ ಆಡಳಿತಾತ್ಮಕ ಸುಧಾರಣೆಯಾಗಿದೆ ದೇಶದ ಜನರನ್ನು ದೇಶದ ಹೊರ ಹಾಗೂ ಒಳಗೆ ಸಂರಕ್ಷಣೆ ಮಾಡಲಾಗಿದೆ ದೇಶದ ಅಭಿವೃದ್ಧಿ, ಅಂತ್ಯೋದಯದ ಮೂಲಕ ಸರ್ವೋದಯವಾಗಿದೆ, ಸುಧಾರಣೆ ಡಿಬಿಟಿ ಹಾಗೂ ಜಿಎಸ್ಟಿ ಮೂಲಕ ಆಗಿದೆ ಹಲವು ಪಾಲಸಿಗಳ ಮೂಲಕ ಸುಧಾರಣೆ ತಂದಿದೆ, ಭಯೋತ್ಪಾದನೆಯಿಂದ ಸಂರಕ್ಷಣೆ ಮಾಡಿದೆ ಉಕ್ರೇನ್, ಸುಡಾನ್ , ಇರಾನ್, ಇಸ್ರೇಲ್, ಅಪಘಾನಿಸ್ತಾನದಲ್ಲಿ ಸಿಲುಕಿದ ಜನರ ಸಂರಕ್ಷಣೆ ಮಾಡಿದೆ, ಭಾರತ ದೊಡ್ಡ ಆರ್ಥಿಕ ಶಕ್ತಿಯಾಗಿ ಬದಲಾಗಿದೆ. ಈಗ ಉದ್ಯೋಗ ಸೃಷ್ಟಿಯಾಗಿ ಗೋಚರ ಆಗುತ್ತಿದೆ ದೇಶದಿಂದ ರಪ್ತು ಹೆಚ್ಚಾಗುತ್ತಿದೆ ಎಂದರು.

ಕಳೆದ ವರ್ಷ ದೇಶದಲ್ಲಿ 2.71 ಕೋಟಿ ವಾಹನಗಳ ಖರೀದಿ ಮಾರಾಟ ಆಗಿದೆ ಇದು ಸರ್ವ ಕಾಲಿಕ ಹಾಗೂ ಜಾಗತೀಕ ದಾಖಲೆ ಆಗಿದೆ. ಅಯೋಧ್ಯಾ, ಉಜ್ಜಯಿನಿ, ಸೋಮನಾಥ ಕಾರಿಡಾರ್ ಆಗಿದೆ. ಭಾರತದ‌ ಸಾಂಸ್ಕೃತಿಕ ಅಸ್ಮಿತೆಗೆ ಜಾಗತೀಕ ಗುರುತಿಸುವಿಕೆ ಭಾರತ ಮಾಡಿದೆ. ರೈಲ್ವೇ ವಿದ್ಯೂದ್ದೀಕರಣ, ವಿಮಾನ ನಿಲ್ದಾಣ, ಚತುಸ್ಪಥ ಹೆದ್ದಾರಿ ನಿರ್ಮಾಣ ಮಾಡಿದೆ.

ಬಡವರಿಗೆ ಲಾಭ ವರ್ಗಾಯಿಸುವ ಕೆಲಸ ನಾವು ಮಾಡಿದ್ದೇವೆ, ಮೋದಿ ಗ್ಯಾರಂಟಿ ಬದುಕನ್ನು ಬದಲಿಸಿದೆ, ಗೌರವದ ಜೊತೆಗೆ ಭಾರತೀಯರು ಬದುಕಬೇಕು ಎನ್ನುವುದು ಮೋದಿ ಗ್ಯಾರಂಟಿ, ಅಭಿವೃದ್ಧಿ ಹೊಂದಿದ ಸುರಕ್ಷಿತ ಭಾರತ ನಮ್ಮ‌ ಗುರಿಯಾಗಿದೆ. ಮೋದಿ ನಾಲ್ಕು ಜಾತಿಗಳ ಲೆಕ್ಕ ಹಾಕಿದ್ದಾರೆ. ಬಡವರು, ಮಹಿಳೆಯರು, ರೈತರು ಮತ್ತು ಯುವಕರ ಬಗ್ಗೆ ಮೋದಿ ವಿಶೇಷ ಕಾಳಜಿ ವಹಿಸಿದ್ದಾರೆ. ಮೋದಿ ಪರಿವಾರದಲ್ಲಿ ದೇಶದಲ್ಲಿ 140 ಕೋಟಿ ಜ‌ನ ಇದ್ದಾರೆ, ಆಡು ಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ಮುಟ್ಟದ ಭ್ರಷ್ಟಾಚಾರವಿಲ್ಲ ಎನ್ನುವುದಿತ್ತು ಮೋದಿ ಹೊಸ ಯೋಜನೆಗಳ ಮೂಲಕ ಭಾರತ ಅಭಿವೃದ್ಧಿ ಮಾಡಿದ್ದಾರೆ. ಯಾವ ಕ್ಷೇತ್ರದಲ್ಲಿ ದುರ್ಬಲ ಇದ್ದೆವೋ ಅದಕ್ಕಾಗಿ ಆತ್ಮ ನಿರ್ಭರ ಯೋಜನೆ ಜಾರಿ ತಂದಿದೆ ಮೂರು ವರ್ಷದಲ್ಲಿ 3ನೇ ಆರ್ಥಿಕ ಶಕ್ತಿ ನಾವಾಗಲಿದ್ದೇವೆ. ಜಪಾನ್,‌ಜರ್ಮನ್ ಹಿಂದೆ‌ ಹಾಕಲಿದ್ದೇವೆ ಭಾರತ ಜಗತ್ತಿನ ಎದುರು ತಲೆ ತಗ್ಗಿಸಬಾರದು ಭಾರತ ವಿದೇಶದಲ್ಲಿ ತಲೆ‌ಎತ್ತಿ ನಿಲ್ಲಬೇಕು ಕಾಂಗ್ರೆಸ್ ಗೆ ನೀತಿ ಇಲ್ಲ, ನಿಯತ್ತಿಲ್ಲ, ನೇತೃತ್ವ ಇಲ್ಲ ಕಾಂಗ್ರೆಸ್ ನಿಯೋಜಿತ ಪ್ರಧಾನಿ ಅಭ್ಯರ್ಥಿ ಹೆಸರು ಹೇಳಲು ಹೆದರುತ್ತಿದ್ದಾರೆ.

ಚುನಾವಣೆಯಲ್ಲಿ ಖರ್ಗೆ ಅಳಿಯನ ಗೆಲ್ಲಿಸಲು‌ ಪ್ರಯತ್ನಗಳು ನಡೆಯುತ್ತಿವೆ ಕಾಂಗ್ರೆಸ್ ಗೆ ಸಾಧನೆಯ ಬಲ ಇಲ್ಲ , ಅವರಿಗೆ ಅಪ ಪ್ರಚಾರ, ಅಪನಂಬಿಕೆ ಮೂಲಕ ಜನರ‌ ದಿಕ್ಕು ತಪ್ಪಿಸುವ ಕೆಲಸ ಮಾಡಿದೆ ಹಾಗಾಗಿ ಜಾಹಿರಾತಿನಲ್ಲಿ ಚಂಬು ಬಳಸಿದರು. ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಬೇದಿ ಜಾಸ್ತಿ ಆದಂತೆ‌ ಕಾಣುತ್ತಿದೆ ಹಾಗಾಗಿ ನೀವು ಚೆಂಬು ಬಿಡುವಂತಿಲ್ಲ.

ಕಾಂಗ್ರೆಸ್ ತುಷ್ಟೀಕರಣದ‌ ರಾಜಕಾರಣ ಮಾಡುತ್ತಿದೆ. ಜಿನ್ನಾ ಕನಸು ನನಸು ಮಾಡುವ ರೀತಿ, ಅಂಬೇಡ್ಕರ್ ಗೆ ಅಪಮಾನ‌ ಮಾಡುವ ರೀತಿ ಅವರ‌ ಪ್ರಣಾಳಿಕೆ ಇದೆ. ನಮಗೆ ಜಾತಿ ಆಧಾರಿತ ಮೀಸಲಾತಿ ಇದೆ. ಓಬಿಸಿ ಒಳಗೆ ಮತ ಆಧಾರಿತ ಮೀಸಲಾತಿ ತುರುಕಿದೆ. ದೇಶದ ಸಂಪತ್ತಿನ ಮೊದಲ ಅಧಿಕಾರ ಮುಸ್ಲಿಂಗೆ ಎಂದು ಮನಮೋಹನ್ ಸಿಂಗ್ ಹೇಳಿದ್ದರು. ನಾವು ಬಡವರಿಗೆ ಮೊದಲ ಅಧಿಕಾರ‌ ಎಂದಿದ್ದೇವೆ, ಜನರ ಸಂಪತ್ತಿನ ಮೇಲೆ ಕಾಂಗ್ರೆಸ್ ಕಣ್ಣು ಇಟ್ಟಿದೆ ವ್ಯಕ್ತಿಗತ ಜನರ‌ ಸಂಪತ್ತು ಗಣತಿಗೆ ಕಾಂಗ್ರೆಸ್ ಮುಂದಾಗಿದೆ ಅವರಿಗೆ ಸೋಲಿನ ಭಯ ಕಾಡುತ್ತಿದೆ.

ಸುಳ್ಳು- ಕಾಂಗ್ರೆಸ್ ಒಂದು ನಾಣ್ಯದ ಎರಡು ಮುಖಗಳು 1.42 ಲಕ್ಷ ಕೋಟಿ‌ ಕೇಂದ್ರ 2004-14ರ ವರೆಗೂ ರಾಜ್ಯಕ್ಕೆ‌ ಕೊಟ್ಟಿದೆ ಅವರು ಚೆಂಬಿನ ಜಾಹಿರಾತು ಕೊಟ್ಟಿದ್ದಾರೆ. ಅಪಪ್ರಚಾರ ಅಪನಂಬಿಕೆ ಮಾಡುತ್ತಿದೆ ಬರ‌ ನಿರ್ವಹಣೆಯಲ್ಲಿ ನಿಮ್ಮ ಖಜಾನೆಯಿಂದ ಏಷ್ಟು ಹಣ ಕೊಟ್ಡಿದ್ದಾರೆ. ಈ ಬಗ್ಗೆ ಸಿಎಂ, ಸಚಿವರು ತಲೆ‌ ಕೆಡಿಸಿಕೊಂಡಿಲ್ಲ ಕಾಂಗ್ರೆಸ್ ಅವರನ್ನು ಮಂಪರು ಪರೀಕ್ಷೆ ಮಾಡಿದರೆ‌ ಮಷಿನ್ ಸಹ ತನ್ನ ಮಿತಿ‌ ದಾಟುತ್ತೆ ಎಂದು ಗುಡುಗಿದರು.

ಯಾವುದೇ ಅನ್ಯಾಯ ಸಹಿಸಲ್ಲ, ನ್ಯಾಯ ಸಮಾನವಾಗಿರಬೇಕು ಎಸ್ಐಟಿ ತನಿಖೆ‌ ಮಾಡಲಿ ಪ್ರಜ್ವಲ್ ಪರ ಹಿಂದೆ ಸಿಎಂ ಸೇರಿ ಕಾಂಗ್ರೆಸ್ ನಾಯಕರೇ ಪ್ರಚಾರ ಮಾಡಿದ್ದರು ಉಪ್ಪು ತಿಂದವನು ನೀರು ಕುಡಿಯಬೇಕು ಇದು ಎಲ್ಲರಿಗೂ ಆಗಬೇಕು ನಾವು ಪ್ರಕರಣ ಖಂಡಿಸಿದ್ದೇವೆ ತನಿಖೆ ನಂತರ ಸತ್ಯ ಸುಳ್ಳು ಹೊರ‌ಬರಲಿದೆ. ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳಲಿ, ನೇಹಾ ಹತ್ಯೆಯಾದ ನಂತರ ಸಿಎಂ, ಗೃಹ‌ ಸಚಿವರ ಹೇಳಿಕೆ ಖಂಡಿಸುವೆ ಕಾಂಗ್ರೆಸ್ ಓಲೈಕೆ ರಾಜಕಾರಣದ ವಿರುದ್ದ ನಮ್ಮ ಧ್ವನಿ ಕಾಂಗ್ರೆಸ್ ದ್ವಂದ್ವ‌ ನಿಲುವು ಇದೆ ನಾವು ಪ್ರಜ್ವಲ್ ಪರ ವಕಾಲತ್ತು ವಹಿಸಲ್ಲ ಎಂದು ಹೇಳಿದರು.

ಗ್ಯಾರಂಟಿ ಯಿಂದ ಹಾಲಿನ ದರ‌ ಬಂದಿಲ್ಲ ಗ್ಯಾರಂಟಿಗಳಿಗೆ ಅವರ ಫಾದರ್ ಮನೆ ಆಸ್ತಿ ಮಾರಿಯಾದರೂ ಹಣ ಕೊಡಲಿ ಆದರೆ ರಾಜ್ಯ ಮಾರಬೇಡಿ ನಾವು ಕೇಂದ್ರದಿಂದ ಪರಿಹಾರ ಕೊಟ್ಟಿದ್ದೇವೆ ನೀವು ಏಷ್ಟು ಕೊಟ್ಟಿದ್ದೀರಿ ? ನಿಮ್ಮ ಚಂಬು ಖಾಲಿಯಾಗಿದೆಯಾ ? ತೂತು ಬಿದ್ದಿದೆಯಾ ? ಎಂದು ರಾಜ್ಯ ಕಾಂಗ್ರೆಸ್ ವಿರುದ್ದ ಸಿ ಟಿ ರವಿ ಗುಡುಗು.

ಇದನ್ನೂ ಓದಿ: ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ

ಟಾಪ್ ನ್ಯೂಸ್

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.