ಕಾರಟಗಿಯಲ್ಲಿ ಕರ್ಫ್ಯೂಗೆ ಕ್ಯಾರೆ ಎನ್ನದ ಜನ
Team Udayavani, May 4, 2021, 7:54 PM IST
ಕಾರಟಗಿ: ಪಟ್ಟಣದಲ್ಲಿ ಜನತಾ ಕರ್ಫ್ಯೂ ಜಾರಿಗೊಳಿಸಿದ್ದರೂ ಸಾರ್ವಜನಿಕರ ಸಂಚರಿಸುವುದು ಮಾತ್ರ ಸಾಮಾನ್ಯವಾಗಿದೆ. ರಾಜ್ಯ ಸರಕಾರ ಜನತಾ ಕರ್ಫ್ಯೂ ವಿಧಿಸಿ ಸೋಮವಾರಕ್ಕೆ 6 ದಿನಗಳಾಗಿವೆ.
ಅಗತ್ಯ ಮುಂಜಾಗ್ರತೆ ಪಾಲಿಸಿ ಎಂದು ತಾಲೂಕಾಡಳಿತ, ಪೊಲೀಸ್, ಪುರಸಭೆ ಧ್ವನಿವರ್ದಕದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿವೆ ಆದರೂ ಜನರು ಓಡಾಡುವುದನ್ನು ನಿಲ್ಲಿಸಿಲ್ಲ. ದಿನಸಿ, ತರಕಾರಿ ಮಾರಾಟಕ್ಕೆ ಕಾಲಾವಕಾಶ ಹೆಚ್ಚಿಸಿದಂತೆ ಸಾರ್ವಜನಿಕರ ಅನಗತ್ಯ ಓಡಾಟ ಹೆಚ್ಚಾಗಿದೆಯೇ ಹೊರತು ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಜೋರಾಗಿಲ್ಲ. ವ್ಯಾಪಾರಿಗಳು ಸರಿಯಾಗಿ ಕೊರೊನಾ ನಿಯಮಗಳನ್ನು ಪಾಲಿಸದೇ ನಿರ್ಲಕ್ಷ್ಯ ತೋರುತ್ತಿದ್ದು, ಇದರಿಂದಾಗಿ ಕೊರೊನಾ ಇನ್ನಷ್ಟು ಹರಡುವ ಸಾಧ್ಯತೆ ಹೆಚ್ಚು. ಸಂಬಂಧಿಸಿದ ಜಿಲ್ಲಾಡಳಿತ ಕೂಡಲೇ ಅಗತ್ಯ ಕ್ರಮಕ್ಕೆ ಮುಂದಾಗುವಂತೆ ತಾಲೂಕಾಡಳಿತಕ್ಕೆ ಸೂಚಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ತಾಲೂಕಿನಾದ್ಯಂತ ದಿನಗಳೆದಂತೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದರೂ ತಾಲೂಕಿನ ಜನತೆ ಮಾತ್ರ ಕೊಂಚವೂ ಭಯಪಡುತ್ತಿಲ್ಲ. ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಅದರೊಂದಿಗೆ ನಿತ್ಯ ಕೊರೊನಾ ತಪಾಸಣೆಗೆ ಒಳಪಡುವವರು ಸಂಖ್ಯೆಯೂ ಹೆಚ್ಚುತ್ತಿದೆ. ಪೊಲೀಸರು ಪಟ್ಟಣದೆಲ್ಲೆಡೆ ಸಂಚರಿಸಿ ಲಾಠಿ ರುಚಿ ತೋರಿಸಿದರು ಕೂಡ ಜನತೆ ಕುಂಟು ನೆಪ ಹೇಳಿ ಒಡಾಡುತ್ತಾರೆ. ಮಧ್ಯಾಹ್ನ ಬಿಸಿಲಿನ ಪ್ರಖರತೆ ಹೆಚ್ಚಾದಾಗ ಜನ ಸಂಚಾರ ಕಡಿಮೆ ಇರುತ್ತದೆ. ಸಂಜೆ ಆಗುತ್ತಿದ್ದಂತೆ ಯಥಾ ಪ್ರಕಾರ ಸಂಚರಿಸುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.