ಮುಂಗಾರು ಪೂರ್ವದಲ್ಲಿ ಸಿಡಿಲಿನಿಂದ ರಕ್ಷಿಸಿಕೊಳ್ಳಲು ದಾಮಿನಿ ಆ್ಯಪ್ ಬಳಸಲು ಸಲಹೆ
Team Udayavani, Apr 12, 2022, 7:34 PM IST
ಗಂಗಾವತಿ: ಮುಂಗಾರು ಪೂರ್ವದಲ್ಲಿಗುಡುಗು-ಸಿಡಿಲು ಸಹಿತ ಮಳೆಯಾಗುತ್ತಿದ್ದು, ಇದರಿಂದ ರಾಜ್ಯದಲ್ಲಿ ಸಾವು-ನೋವುಗಳು ಕಂಡು ಬರುತ್ತಿವೆ. ಇದರ ಪ್ರಭಾವ ಕೊಪ್ಪಳ ಜಿಲ್ಲೆಯಲ್ಲೂ ಕಾಣಿತ್ತಿದ್ದು, ಇದರಿಂದ ರೈತರು ಮತ್ತು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಮಿಂಚು ಬರುವ ಮುನ್ಸೂಚನೆಯನ್ನು ತಿಳಿದುಕೊಳ್ಳಲು ದಾಮಿನಿ ಆ್ಯಪ್ ಅನ್ನುಬಳಸಿಕೊಳ್ಳುವಂತೆ ಕೃಷಿ ವಿಜ್ಞಾನಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಎಮ್. ವಿ. ರವಿ ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.
ಈ ಮಿಂಚಿನ ಎಚ್ಚರಿಕೆಯ ಆ್ಯಪ್‌ನ್ನು ಭಾರತೀಯ ಉಷ್ಣ ವಲಯದ ಹವಾಮಾನ ಸಂಸ್ಥೆಯು ಬಿಡುಗಡೆಗೊಳಿಸಿದ್ದು, ಇದುಕನಿಷ್ಠ 30-45 ನಿಮಿಷಗಳ ಮೊದಲುಜನರನ್ನು ಮಿಂಚಿನಎಚ್ಚರಿಕೆಯ ಸಂದೇಶವನ್ನು ಕೊಡುತ್ತದೆ. ಹವಾಮಾನ ವೈಪರೀತ್ಯಗಳಾದ ಪ್ರವಾಹ, ಬರ, ಮಿಂಚು, ಭಾರೀ ಮಳೆ, ಶೀತ ಅಲೆಗಳು,ಶಾಖದ ಅಲೆಗಳು ಮತ್ತು ಮಿಂಚಿನ ಹೊಡೆತಗಳು ಭಾರತದಲ್ಲಿ ಗರಿಷ್ಠ ಸಾವು ನೋವುಗಳಿಗೆ ಕಾರಣವಾಗಿವೆ.
ಹೀಗಾಗಿ ಈ ಆ್ಯಪ್‌ನ್ನು ಪ್ರತಿಯೊಬ್ಬರೈತರು ಮತ್ತು ಸಾರ್ವಜನಿಕರು ತಮ್ಮ ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು,ಅದರಲ್ಲಿ ಬಳಕೆದಾರರ ಹೆಸರು, ದೂರವಾಣಿ ಸಂಖ್ಯೆ, ವಿಳಾಸ, ಪಿನ್‌ಕೋಡ್ ಮತ್ತು ಉದ್ಯೋಗವನ್ನು ನೊಂದಾಯಿಸಬೇಕು.ಬಳಿಕ ಹೋಮ್ ಪೇಜ್‌ನಲ್ಲಿ ಒಂದು ನಕ್ಷೆ ಕಾಣುತ್ತದೆ, ಅದರ ಮೇಲ್ಬಾಗದಲ್ಲಿ ನಮಗೆ ಬೇಕಾದ ಸ್ಥಳದ ಹೆಸರು ನಮೂದಿಸಿ ಸರ್ಚ ಮಾಡಬೇಕು.ಅದರಲ್ಲಿ ಮೂರು ಬಣ್ಣದ ಸಂಕೇತಗಳಿವೆ.
ಇದರಲ್ಲಿಹಳದಿ ಬಣ್ಣದ ಸಂಕೇತವು 5 ನಿಮಿಷಗಳಲ್ಲಿ ಸಂಭವಿಸುವ ಮಿಂಚನ್ನು ಸೂಚಿಸುತ್ತದೆ; ನೀಲಿ ಸಂಕೇತವು 5 ರಿಂದ 10 ನಿಮಿಷಗಳಲ್ಲಿ ಸಂಭವಿಸುವ ಮಿಂಚಿನ ಮಾಹಿತಿಯನ್ನು ನೀಡುತ್ತದೆ ಮತ್ತು ನೇರಳೆ ಸಂಕೇತವು 10 ರಿಂದ 15 ನಿಮಿಷಗಳಲ್ಲಿ ಸಂಭವಿಸುವ ಮಿಂಚಿನ ಮಾಹಿತಿಯನ್ನು ನೀಡುತ್ತದೆ.ಜೊತೆಗೆ ರೈತರು ಅಥವಾ ಸಾರ್ವಜನಿಕರು ಎಲ್ಲಿ ಮತು ್ತಯಾವಾಗ ತಂಗಬೇಕು ಎಂಬ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತದೆ.
ಈ ಮೂಲಕ ಒಬ್ಬ ವ್ಯಕ್ತಿಯು ಘಟನೆಯ 20 ಕಿ. ಮೀ ವ್ಯಾಪ್ತಿಯಲ್ಲಿರುವಾಗ 30 ರಿಂದ 45 ನಿಮಿಷಗಳ ಮೊದಲು ಎಚ್ಚರಿಕೆ ಸಂದೇಶವನ್ನು ಕೊಡುತ್ತದೆ.ಇದರಿಂದ ರೈತರು ಮತ್ತು ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳಿ ತಮ್ಮರಕ್ಷಣೆ ಮಾಡಿಕೊಳ್ಳಲು, ಈದಾಮಿನಿ ಆ್ಯಪ್‌ವು ಸಹಾಯವಾಗಲಿದೆ ಹೆಚ್ಚಿನ ಮಾಹಿತಿಗಾಗಿ ವಿಷಯ ತಜ್ಞರಾದ ಡಾ| ಫಕೀರಪ್ಪಅರಭಾಂವಿ (8123922495) ಮತ್ತು ಹವಾಮಾನ ವೀಕ್ಷಕಿಯಾದ ಮಮತಾ ಮದ್ಲಿ (9060526493) ಸಂಪರ್ಕಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
ದೋಟಿಹಾಳ: ಅನುದಾನವಿಲ್ಲದೆ ಮುಚ್ಚುವ ಹಂತಕ್ಕೆ ತಾಂಡಾ ನಿಗಮದ ಗ್ರಂಥಾಲಯಗಳು
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
ಕೊಪ್ಪಳ: 3 ದಿನದಲ್ಲಿ 300 ಜನರ ಮೇಲೆ ಕೇಸ್53 ಪ್ರಕರಣ -4.75 ಲಕ್ಷ ರೂ. ವಶ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.