ಬಾಕಿ ತೆರಿಗೆ ವಸೂಲಿಗೆ ಡಿಸಿ ಸೂಚನೆ
Team Udayavani, Nov 3, 2019, 4:12 PM IST
ಗಂಗಾವತಿ: ನಗರದಲ್ಲಿ ಬಾಕಿ ಇರುವ ಲಕ್ಷಾಂತರ ರೂ. ತೆರಿಗೆ ವಸೂಲಿ ಮಾಡಲು ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಸೂಚನೆ ನೀಡಿದ್ದಾರೆ.
ಅವರು ಶನಿವಾರ ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಹಲವು ದಶಕಗಳಿಂದ ನಗರದಲ್ಲಿ ಕೆಲವರು ನಗರಸಭೆಯ ತೆರಿಗೆ ಪಾವತಿ ಮಾಡಿಲ್ಲ. ಇದರಿಂದ ನಗರಸಭೆ ಸಂಪನ್ಮೂಲ ಇಲ್ಲದಂತಾಗಿದ್ದು ಪೌರಕಾರ್ಮಿಕರಿಗೆ ಕೊಡಬೇಕಾದ 60 ಲಕ್ಷಕ್ಕೂ ಅ ಧಿಕ ವೇತನ ಬಾಕಿ ಉಳಿದಿದೆ. ಕೂಡಲೇ ಕಠಿಣ ಕ್ರಮಕೈಗೊಂಡು ರೈಸ್ ಮಿಲ್, ಖಾಸಗಿ ಶಾಲಾ-ಕಾಲೇಜು, ಚಿತ್ರಮಂದಿರ, ಮನೆಯ ತೆರಿಗೆ ಹಾಗೂ ನಗರಸಭೆ ವಾಣಿಜ್ಯ ಮಳಿಗೆಗಳ ಬಾಕಿ ವಸೂಲಿ ಮಾಡಲು ಕ್ರಮ ಕೈಗೊಂಡು ವರದಿ ನೀಡಬೇಕು. ರೈಸ್ ಮಿಲ್ ಹಾಗೂ ಇತರ ಕೆಲವರು ಹಳೆಯ ತೆರಿಗೆ ಬಾಕಿ ಕುರಿತು ಕೋರ್ಟ್ ಮೊರೆ ಹೋಗಿದ್ದು, ಇತ್ತೀಚಿನ ವರ್ಷದ ಬಾಕಿ ತೆರಿಗೆ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಟ್ರೇಡ್ ಲೈಸೆನ್ಸ್: ವಾಣಿಜ್ಯವಾಗಿ ಬೆಳೆದಿರುವ ನಗರದಲ್ಲಿ ಕೇವಲ 1800 ಟ್ರೇಡ್ ಲೈಸೆನ್ಸ್ ನೀಡಲಾಗಿದೆ. ನಗರಸಭೆ ಲೈಸೆನ್ಸ್ ನೀಡುವ ವಿಭಾಗ ಸರಿಯಾಗಿ ಕಾರ್ಯ ಮಾಡುತ್ತಿಲ್ಲ. ಕೂಡಲೇ ನಗರದಲ್ಲಿ ವ್ಯಾಪಾರ, ವಹಿವಾಟು ಮಾಡುವ ಪ್ರತಿಯೊಬ್ಬ ವ್ಯಾಪಾರಿ ಟ್ರೇಡ್ ಲೈಸೆನ್ಸ್ ತೆಗೆದುಕೊಳ್ಳುವುದು ಕಡ್ಡಾಯ ಮಾಡಿ 10 ಸಾವಿರಕ್ಕೂ ಅಧಿಕ ಟ್ರೇಡ್ ಲೈಸೆನ್ಸ್
ನೀಡಿ ತೆರಿಗೆ ವಸೂಲಿ ಮಾಡಬೇಕು. ನಗರದಲ್ಲಿರುವ ನಗರಸಭೆಯ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ನೀಡಲು ಹರಾಜು ಕರೆಯಬೇಕು. ಬಾಕಿ ಇರುವ ಬಾಡಿಗೆ ವಸೂಲಿ ಮಾಡಬೇಕು ಇಲ್ಲವೇ ಖಾಲಿ ಮಾಡಲು ಕ್ರಮ ಕೈಗೊಳ್ಳಬೇಕು. 14ನೇ ಹಣಕಾಸು ಯೋಜನೆ ಕಾಮಗಾರಿ ನಡೆಯದಂತೆ ಕೋರ್ಟ್ ಮೂಲಕ ತಡೆಯಾಜ್ಞೆ ತರಲಾಗಿದ್ದರೂ ನ್ಯಾಯಾಲಯಕ್ಕೆ ಅಗತ್ಯ ಮಾಹಿತಿ ರವಾನೆ ಮಾಡಿ ಕೂಡಲೇ ಕಾಮಗಾರಿ ಆರಂಭಕ್ಕೆ ಕ್ರಮ ವಹಿಸಲಾಗುತ್ತದೆ. ಹಿಂದಿನ 14ನೇ ಹಣಕಾಸು ಯೋಜನೆಯಲ್ಲಿ ಇನ್ನೂ ಹಣ ಉಳಿದಿದ್ದು, ಅನುದಾನ ಹಂಚಿಕೆಯಾಗದ ವಾರ್ಡ್‌ಗಳಿಗೆ ಅನುದಾನ ವಿತರಣೆ ಮಾಡಲಾಗುತ್ತದೆ.
ನಗರದ ಮಹಾವೀರ ವೃತ್ತ ಸೇರಿ ಪ್ರಮುಖ ಐದು ವೃತ್ತಗಳಲ್ಲಿ ಸುಲಭ ಶೌಚಾಲಯ ನಿರ್ಮಿಸಲು ಟೆಂಡರ್ ಕರೆಯಲಾಗುತ್ತದೆ. ಒಳಚರಂಡಿ ಕಾಮಗಾರಿ ಬಹುತೇಕ ಮುಗಿದಿದ್ದು, ಮನೆಯಿಂದ ಯುಜಿಡಿ ಟ್ಯಾಂಕ್ ಗಳಿಗೆ ಸಂಪರ್ಕ ಕಲ್ಪಿಸಲು ನಗರಸಭೆ ಶೀಘ್ರ ಕಾರ್ಯಾರಂಭ ಮಾಡಲಿದೆ. ನಗರದಲ್ಲ ಬೀದಿದೀಪ ದುರಸ್ತಿ ಕಾರ್ಯವಾಗದ ಕುರಿತು ಹಲವು ದೂರುಗಳಿದ್ದು, ಹೊಸ ಟೆಂಡರ್ ಕರೆದು ಇದನ್ನು ಸರಿಪಡಿಸಲಾಗುತ್ತದೆ. ನಗರದಲ್ಲಿ ಹಾಕುವ ಫ್ಲೆಕ್ಸ್ ಹಾಗೂ ದೊಡ್ಡಮಟ್ಟದ ಜಾಹೀರಾತು ಫಲಕಗಳಿಗೆ ಶುಲ್ಕ ವಿಧಿಸಲು ನಗರಸಭೆಯ ನಿಯಮಗಳಲ್ಲಿ ಅವಕಾಶವಿದ್ದು, ನಗರಸಭೆಯವರು ಶುಲ್ಕ ಹಾಕಿ ಪರವಾನಗಿ ಕೊಡಬೇಕು. ಜನಪ್ರತಿನಿಧಿ ಗಳಿಗೆ ಮನವರಿಕೆ ಮಾಡಿಸುವಂತೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪ್ರಭಾರಿ ಪೌರಾಯುಕ್ತ ಗಂಗಧರಪ್ಪ, ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ, ಎಇಇ ಆರ್.ಆರ್. ಪಾಟೀಲ ಸೇರಿ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.