39 ಸಾವಿರ ರೈತರ ಸಾಲ ಮನ್ನಾ
ಪ್ರತಿ ಕುಟುಂಬಕ್ಕೆ 2 ಲಕ್ಷ ಮನ್ನಾ, ಜಿಲ್ಲೆಯಲ್ಲಿ ಶೇ. 87 ಪ್ರಗತಿ
Team Udayavani, Sep 20, 2019, 2:27 PM IST
ಕೊಪ್ಪಳ: ಈ ಹಿಂದಿನ ಮೈತ್ರಿ ಸರ್ಕಾರ ರೈತರ ಹಿತ ಕಾಯಲು ಜಾರಿ ಮಾಡಿದ್ದ ಸಾಲಮನ್ನಾ ಯೋಜನೆ ಬಹುಪಾಲು ಪ್ರಗತಿಯ ಹಾದಿಯತ್ತ ಸಾಗಿದೆ. ಜಿಲ್ಲೆಯಲ್ಲಿ ಇಲ್ಲಿವರೆಗೂ 39,555 ರೈತರ 258.92 ಕೋಟಿ ರೂ. ಸಾಲ ಮನ್ನಾ ಆಗಿದ್ದು, ಶೇ. 87ರಷ್ಟು ಪ್ರಗತಿ ಸಾಧಿಸಿದೆ.
ಹೌದು.. ಕೊಪ್ಪಳ ಜಿಲ್ಲೆಯು ಪದೇ ಪದೆ ಬರಕ್ಕೆ ತುತ್ತಾಗಿ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವ ಸ್ಥಿತಿಯಲ್ಲಿದ್ದರು. ಮಳೆಯ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಯೂ ರೈತರ ಕೈ ಸೇರದಂತ ಪರಿಸ್ಥಿತಿ ಎದುರಾಗಿತ್ತು. ಅಲ್ಲದೇ, ರಾಜ್ಯದಲ್ಲೂ ಪದೇ ಪದೆ ಬರದ ಪರಿಸ್ಥಿತಿ ಎದುರಾಗಿದ್ದರಿಂದ ಸಹಕಾರಿ ಸೇರಿದಂತೆ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಮಾಡಿದ್ದ ಸಾಲ, ಬಡ್ಡಿ ಏರುತ್ತಲೇ ಇತ್ತು. ಇದರಿಂದ ದಿಕ್ಕೆ ತೋಚದಂತಾಗಿ ಆತ್ಮಹತ್ಯೆಗೆ ಮುಂದಾಗುತ್ತಿದ್ದ ರೈತರ ಹಿತ ಕಾಯಲು ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದ ಭರವಸೆಯಂತೆ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದರು. ಆದರೆ ನೂರೆಂಟುನಿಯಮ ಜಾರಿ ಮಾಡಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಕೊನೆಗೂ ನಿಯಮಗಳನ್ನು ಸರಳೀಕರಣಗೊಳಿಸಿದ್ದರ ಫಲವಾಗಿ ಸಾಲ ಮನ್ನಾದ ಹಾದಿಗೆ ಸುಗಮವಾಗಿದೆ. ರಾಜ್ಯದಲ್ಲಿ ಸರ್ಕಾರ ಬದಲಾದರೂ ಜಿಲ್ಲೆಯಲ್ಲಿನ ರೈತರ ಸಾಲ ಮನ್ನಾದ ಪ್ರಗತಿ ಉತ್ತಮ ರೀತಿಯಲ್ಲಿದೆ. 39,555 ರೈತರ ಸಾಲ ಮನ್ನಾ: ಜಿಲ್ಲೆಯ 57,157 ರೈತರು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದರು. ಈ ಪೈಕಿ 46,412 ರೈತರು ಕೃಷಿ ಸಾಲ ಮನ್ನಾ ವ್ಯಾಪ್ತಿಗೆ ಒಳಪಡಲಿದ್ದಾರೆ ಎನ್ನುವ ನಿರೀಕ್ಷೆ ಇಡಲಾಗಿತ್ತು. ಈ ಪೈಕಿ 40483 ರೈತರು ಸಾಲ ಮನ್ನಾ ಯೋಜನೆಗೆ ಅರ್ಹತೆ ಪಡೆದಿದ್ದರಿಂದ ಅವರಲ್ಲಿ ಪ್ರಸ್ತುತ 39,555 ರೈತರ ಸಾಲ ಮನ್ನಾ ಮಾಡಲಾಗಿದೆ. ವಿವಿಧ ಹಂತದಲ್ಲಿ ಸಾಲವನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದ್ದು, ರೈತರ ಖಾತೆಯಲ್ಲಿನ ಸಾಲಕ್ಕೆ ಹೊಂದಾಣಿಕೆ ಮಾಡಿದೆ.
ಕುಟುಂಬಕ್ಕೆ 2 ಲಕ್ಷದ ಮಿತಿ: ಸಾಲ ಮನ್ನಾದಡಿ ಪಡಿತರ ಚೀಟಿ ಹೊಂದಿದ ಒಂದು ರೈತ ಕುಟುಂಬಕ್ಕೆ 2 ಲಕ್ಷ ರೂ. ಮಿತಿಯಡಿ ಸಾಲ ಮನ್ನಾ ಮಾಡಲಾಗಿದೆ. ಆ ಕುಟುಂಬವು 2 ಲಕ್ಷಕ್ಕೂ ಹೆಚ್ಚಿನ ಕೃಷಿ ಸಾಲ ಮಾಡಿದ್ದರೆ ಅವರು ಉಳಿದ ಸಾಲವನ್ನು ಬ್ಯಾಂಕಿನೊಂದಿಗೆ ಮಾತುಕತೆ ನಡೆಸಿ ಮರು ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ವತಿಯಿಂದ ಪಾವತಿ ಮಾಡುವ ಸಾಲವನ್ನು ವಿವಿಧ ಕಂತು ರೂಪದಲ್ಲಿ ರೈತನ ಖಾತೆಗೆ ಜಮೆ ಮಾಡಲಾಗಿದೆ.
258 ಕೋಟಿ ಸಾಲ ಮನ್ನಾ: ಜಿಲ್ಲೆಯಲ್ಲಿ 39,555 ರೈತರ 258 ಕೋಟಿ ರೂ. ಸಾಲ ಇಲ್ಲಿವರೆಗೂ ಮನ್ನಾ ಆಗಿದೆ. ಸರ್ಕಾರದ ಲೆಕ್ಕಾಚಾರದ ಪೈಕಿ 928 ರೈತರ ಸಾಲ ಮನ್ನಾ ಆಗಬೇಕಿದೆ. ಇದರಲ್ಲಿ ಕೆಲ ರೈತರ ಬ್ಯಾಂಕ್ ಖಾತೆಯಲ್ಲಿನ ದೋಷ, ಆಧಾರ್ ಸಂಖ್ಯೆ ಜೋಡಣೆ ಆಗದೇ ಇರುವುದು ಸೇರಿದಂತೆ ಹಲವು ತೊಂದರೆಗಳು ಬ್ಯಾಂಕ್ ಸೇರಿದಂತೆ ಜಿಲ್ಲಾ ಲೀಡ್ ಬ್ಯಾಂಕ್ ಅ ಧಿಕಾರಿಗಳ ಗಮನಕ್ಕೆ ಬರುತ್ತಿವೆ. ಸಂಬಂಧಿಸಿದಂತೆ ಮಾಹಿತಿ ಆಧರಿಸಿ ಸಾಲ ಮನ್ನಾ ವ್ಯಾಪ್ತಿಗೆ ಒಳ ಪಡುತ್ತಿವೆ. ಸಾಲ ಮನ್ನಾ ಯೋಜನೆಯೂ ಪ್ರಗತಿಯಲ್ಲಿದೆ. ಇಲ್ಲಿವರೆಗೂ ಜಿಲ್ಲೆಯಲ್ಲಿ ಸಾಲಮನ್ನಾ ಶೇ. 87ರಷ್ಟು ನಡೆದಿದೆ. ಇನ್ನೂ ಶೇ. 13ರಷ್ಟು
ಪ್ರಗತಿ ಸಾಧಿ ಸಿದರೆ ಬಹುಪಾಲು ಸಾಲ ಮನ್ನಾ ಯೋಜನೆ ಪೂರ್ಣಗೊಳಿಸಿದಂತಾಗಲಿದೆ.
ಸಾಲ ಮನ್ನಾ ಆಗಬೇಕಿದೆ: ಜಿಲ್ಲೆಯಲ್ಲಿನ ಹಲವು ರೈತರ ಸಾಲ ಮನ್ನಾ ಪ್ರಕ್ರಿಯೆ ನಡೆಯಬೇಕಿವೆ. ಕೆಲವೊಂದು ಬ್ಯಾಂಕ್‌ಗೆ ನೀಡಿದ ಮಾಹಿತಿ ಹಾಗೂ ಆಧಾರ್ ಜೋಡಣೆಯಾಗಿಲ್ಲ. ಹೀಗಾಗಿ ಹಲವು ಸಾಲ ಮನ್ನಾದ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ. ಅವರಿಗೆ ಇನ್ನೂ ಪರಿಪೂರ್ಣ ಮಾಹಿತಿ ಕೊರತೆಯೂ ಇದೆ. ಇನ್ನೂ ಹಲವು ರೈತರು ದಾಖಲೆಗಳ ಸಲ್ಲಿಕೆಯಲ್ಲಿ ಸ್ವಲ್ಪ ತೊಂದರೆ ಎದುರಿಸುತ್ತಿದ್ದಾರೆ. ಜೊತೆಗೆ ಸಹಕಾರಿ ಬ್ಯಾಂಕ್‌ಗಳ ಸಾಲ ಮನ್ನಾ ಪ್ರಗತಿಯೂ ಸಾಗುತ್ತಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿನ ಸಾಲ ಮನ್ನಾದ ಪ್ರಗತಿ ಅವಲೋಕಿಸಿದರೆ ಶೇ. 87ರಷ್ಟು ಪ್ರಗತಿ ಸಾಧಿ ಸಿ ರೈತರ ಖಾತೆಗೆ ನೇರವಾಗಿ ಸರ್ಕಾರದಿಂದ ಸಾಲ ಮನ್ನಾದ ಹಣ ಜಮೆ ಮಾಡಲಾಗಿದ್ದು, ಬ್ಯಾಂಕ್ ಅದನ್ನು ಸಾಲ ಮನ್ನಾ ವ್ಯಾಪ್ತಿಗೆ ಒಳಪಡಿಸಿ ಖಾತೆಯಿಂದಪಡೆದುಕೊಂಡಿ.
-ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್ ವೆಲ್
ಉದ್ಘಾಟನೆ ಭಾಗ್ಯ ನಿರೀಕ್ಷೆಯಲ್ಲಿ ಅಂಗನವಾಡಿ:4 ಕೇಂದ್ರಗಳು ಬಾಡಿಗೆ ಮನೆಯಲ್ಲಿ ಕಾರ್ಯನಿರ್ವಹಣೆ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.