ಚೆಂಡು ಹೂವು ಇಳುವರಿ ಕುಂಠಿತ
Team Udayavani, Oct 23, 2020, 6:34 PM IST
ಕುಷ್ಟಗಿ: ಕೀಟಬಾಧೆಯಿಂದ ಪಪ್ಪಾಯ ಬೆಳೆಗೆ ರಕ್ಷಿಸಿಸುವ ನಿಟ್ಟಿನಲ್ಲಿ ಬೆಳೆದ ಚೆಂಡು ಹೂವು ಇಳುವರಿ ಮಳೆಯಿಂದ ಕುಂಠಿತಗೊಂಡಿದೆ. ದಸರಾ, ದೀಪಾವಳಿ ಹಬ್ಬಕ್ಕೆ ಬಹುಬೇಡಿಕೆ ಚೆಂಡು ಹೂವು ಅಲ್ಪಾವಧಿಯಲ್ಲಿ ಗರಿಷ್ಠ ಆದಾಯ ತಂದುಕೊಡುವ ಬೆಳೆಯಾಗಿದೆ.
ಕಳೆದ ವರ್ಷ ಚೆಂಡು ಹೂವು ಪ್ರತಿ ಕೆಜಿಗೆ 50ರಿಂದ 60 ರೂ. ಬೆಲೆ ಇತ್ತು. ಇದೀಗ ಆರಂಭದಲ್ಲಿ ಅರ್ಧದಷ್ಟು ಕುಸಿದಿರುವುದಕ್ಕೆ ಬೆಳೆದವರಿಗೆ ಚಿಂತೆ ಇಲ್ಲ. ಬೆಳೆಕಟಾವು ಸಂದರ್ಭದಲ್ಲಿ ಮಳೆ ಶುರುವಿಟ್ಟುಕೊಂಡರೆ ಆದಾಯ ನಿರೀಕ್ಷೆಯಲ್ಲಿ ಬೆಳೆದ ಹೂವು ಇಳುವರಿ ಇದ್ದರೂ ಮಣ್ಣಿಗೆ ಸೇರಿಸಬೇಕಾದೀತು ಎನ್ನುವ ಆತಂಕದಲ್ಲಿದ್ದಾರೆ ರೈತರು. ಸದ್ಯ ಪ್ರತಿ ಕೆಜಿಗೆ 20ರಿಂದ 30 ರೂ. ಇದ್ದು, ಮಳೆಯ ಹೊಡೆತಕ್ಕೆ ಸಿಲುಕದಂತೆ ತ್ವರಿತಗತಿಯಲ್ಲಿ ಕಟಾವು ಮಾಡಿ
ಮಾರುಕಟ್ಟೆಗೆ ಸಾಗಿಸುವ ಯೋಚನೆಯಲ್ಲಿದ್ದಾರೆ ರೈತರು. ಕುಷ್ಟಗಿಯ ಕೃಷಿಕ ಚಿರಂಜೀವಿ ಹಿರೇಮಠ ಅವರು ತಮ್ಮ 4 ಎಕರೆ ಪ್ರದೇಶದಲ್ಲಿ ಬಹು ವಾರ್ಷಿಕ ಬೆಳೆಯಾಗಿ 600 ಮಹಾಗನಿ, 550 ಮಾವು, ಸೀಜನ್ ಇಳುವರಿಯಾಗಿ 2,200 ದಾಳಿಂಬೆ, 2,800 ಪಪ್ಪಾಯ. 10 ಸೀತಾಫಲ, 50 ಲಿಂಬೆ ನಾಟಿ ಮಾಡಿದ್ದಾರೆ. ಈ ಗಿಡಗಳ ಅಂತರದಲ್ಲಿ ಪಪ್ಪಾಯ ಬೆಳೆಗೆ ಕೀಟಬಾಧೆ ನಿಯಂತ್ರಿಸುವ ಹಿನ್ನೆಲೆಯಲ್ಲಿ 12 ಸಾವಿರಕ್ಕೂ ಅಧಿಕ ಚೆಂಡು ಹೂವು ಬೆಳೆಸಿದ್ದಾರೆ.
ಜೀವಾಮೃತ ಸಿಂಪರಣೆಯಿಂದ ಚಂಡು ಹೂವಿನ ಬೆಳೆ ಉತ್ತಮವಾಗಿದ್ದು, ದಸರಾದಿಂದ ದೀಪಾವಳಿವರೆಗೆ ಇಳುವರಿ ಪಡೆಯಬಹುದಾಗಿದೆ. ಅಲ್ಲಿಯವರೆಗೂ ಮಳೆರಾಯ ಕಾಯಬೇಕು. ಈ ಇಳುವರಿಯಿಂದ4ರಿಂದ 5 ಟನ್ ಇಳುವರಿ ನಿರೀಕ್ಷೆಯಲ್ಲಿದ್ದು, ಗದಗ ಹೂವು ಮಾರಾಟಗಾರರು ಪ್ರತಿ ಕೆ.ಜಿ.ಗೆ 30 ರೂ.ಗೆ ಖರೀ ದಿಸಿದ್ದು, ಕಟಾವು ಕಾರ್ಯ ಗುರುವಾರದಿಂದ ಆರಂಭಿಸಲಾಗಿದೆ ಎಂದು ಪುಷ್ಪ ಕೃಷಿಕ ಚಿರಂಜೀವಿ ಹಿರೇಮಠ ಹೇಳಿದರು.
ಪಪ್ಪಾಯ ಬೆಳೆಗೆ ಕಾಡುವ ಕೀಟ ನಿಯಂತ್ರಿಸಲು ಚೆಂಡು ಹೂವು ಬೆಳೆಯಲಾಗಿದ್ದು, ದೀಪಾವಳಿ ಹಬ್ಬದವರೆಗೂ ಇಳುವರಿ ನಿರೀಕ್ಷಿಸಬಹುದಾಗಿದೆ. ಮಳೆಯಾದರೆ ಅರಳಿದ ಹೂವಿನಲ್ಲಿ ಮಳೆ ಹನಿ ಹಿಡಿಟ್ಟುಕೊಳ್ಳುವುದರಿಂದ ಹೂವು ಕೊಳೆಯಲಾರಂಭಿಸುತ್ತದೆ. ಅಲ್ಲದೇ ಹನಿಯ ಭಾರಕ್ಕೆ ಹೂವು ನೆಲಕಚ್ಚಿ ಹಾಳಾಗುತ್ತಿದೆ. ಈ ಹೂವಿನ ಸೀಜನ್ ಮುಗಿಯುತ್ತಿದ್ದಂತೆ ಗಿಡಗನ್ನು ಕಿತ್ತು ಹಾಕದೇ ಅಲ್ಲಿಯೇ ಮಲ್ಚಿಂಗ್ ಮಾಡುವ ಉದ್ದೇಶವಿದೆ. – ಚಿರಂಜೀವಿ ಹಿರೇಮಠ, ಕೃಷಿಕ
ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ ರೈತರು :
ತಾವರಗೇರಾ: ಸಮೀಪದ ಸಂಗನಾಳ ಗ್ರಾಮದಿಂದ ಯತ್ನಟ್ಟಿ, ಬುನ್ನಟ್ಟಿ ಕಡೆ ಸಂಚರಿಸುವ ಜನರನ್ನು ಕನ್ನಾಳ ಗ್ರಾಮದ ರೈತ ಮಹೇಶ ಪಾಟೀಲ್
ಚೆಂಡು ಹೂವು ಬೆಳೆದ ಹೊಲ ಆಕರ್ಷಿಸದೇ ಇರಲಾರದು. ಇತ್ತೀಚಿನ ದಿನಗಳಲ್ಲಿ ರೈತರು ತೋಟಗಾರಿಕೆ ಬೆಳೆಗಳತ್ತ ಒಲವು ತೋರುತ್ತಿದ್ದಾರೆ. ಕನ್ನಾಳ ಗ್ರಾಮದ ರೈತ ಮಹೇಶ ಪಾಟೀಲ ಕೂಡ ತೋಟಗಾರಿಕೆ ಬೆಳೆಯ ಮಧ್ಯೆದಲ್ಲಿ ಚೆಂಡು ಹೂವು ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದಾರೆ. ಆಂಧ್ರಪ್ರದೇಶ ಗುತ್ತೆಗೆದಾರರೊಬ್ಬರಿಂದ ಎರಡು ತಿಂಗಳ ಹಿಂದೆ ಎಲ್-3 ತಳಿಯ 3 ಕೆಜಿ ಚೆಂಡು ಹೂವಿನ ಬೀಜ ಖರೀದಿ ಮಾಡಿ ತಂದಿದ್ದರು. ಹದವಾದ ಜಮೀನಿನಲ್ಲಿ ಬಿತ್ತನೆ ಮಾಡಿ ಸಸಿ ಮಡಿ ಮಾಡಿಕೊಂಡಿದ್ದಾರೆ. ನಂತರಬೀಜ ಬಿತ್ತಿದ 25-30 ದಿನಕ್ಕೆ ಸಸಿಗಳು ನಾಟಿಗೆ ಬರುತ್ತವೆ. ಜೂನ್ ಕೊನೆ ವಾರ ಅಥವಾ ಜುಲೈ ಮೊದಲನೆಯ ವಾರದಲ್ಲಿ ನಾಲ್ಕು ಎಕರೆ ಜಮೀನಿನ ಪೇರಲ ಸಸಿಗಳ ಮಧ್ಯೆದಲ್ಲಿ ಹೂವಿನ ಸಸಿಗಳನ್ನು ನಾಟಿ ಮಾಡಿದ್ದಾರೆ. ಸಸಿಗಳಿಗೆ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿದ್ದಾರೆ. ನಾಲ್ಕು ಎಕರೆಗೆ 8-10 ಸಾವಿರ ರೂ. ಖರ್ಚುಬರುತ್ತದೆ. ಒಂದು ಕೆಜಿ ಹೂವಿಗೆ 35-40 ರೂ. ಗೆ ಮಾರಾಟವಾಗುತ್ತಿದ್ದು, ನಾಲ್ಕು ಎಕರೆಯಲ್ಲಿ ಚೆಂಡು ಹೂವು 12-15 ಟನ್ ಆಗುವ ಸಾಧ್ಯತೆ ಇದೆ. ಇದರಿಂದ ಲಕ್ಷಾಂತರ ರೂ. ಆದಾಯದ ನಿರೀಕ್ಷೆ ಇದೆ ಎನ್ನುತ್ತಾರೆ ಮಹೇಶ ಪಾಟೀಲ್
ನಾಲ್ಕು ಎಕರೆಯಲ್ಲಿ ಪೇರಲ ಜೊತೆಗೆ ಮಿಶ್ರ ಬೆಳೆಯಾಗಿ ಚಂಡು ಹೂವು ಬೆಳೆದಿದ್ದು. 12-15 ಟನ್ ಆಗುವ ಸಾಧ್ಯತೆಇದೆ. ಕಳೆದ 10-15 ದಿನಗಳಿಂದ ಮಳೆ ಸುರಿಯುತ್ತಿದ್ದು, ಚೆಂಡು ಹೂವುಗಳಲ್ಲಿ ನೀರು ಸಂಗ್ರಹಗೊಂಡು ಕೊಳೆಯುವ ಸಾಧ್ಯತೆ ಇದೆ. ಮಹೇಶ ಪಾಟೀಲ್, ಕನ್ನಾಳ ಗ್ರಾಮದ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.