ಶೌಚಾಲಯ ನಿರ್ಮಾಣಕ್ಕೆ ಒತ್ತಾಯಿಸಿ ತಾ.ಪಂ.ಗೆ ಮುತ್ತಿಗೆ
4-5 ವರ್ಷಗಳ ಬೇಡಿಕೆಗೆ ಸ್ಪಂದಿಸದ ಬೂದಗುಂಪಾ ಪಿಡಿಒ; ಹಾಲಸಮುದ್ರ ಗ್ರಾಮದ ಮಹಿಳೆಯರ ಪ್ರತಿಭಟನೆ
Team Udayavani, Jul 21, 2022, 3:23 PM IST
ಕಾರಟಗಿ: ಗ್ರಾಮದ ಮಹಿಳೆಯರಿಗೆ ಸಾರ್ವಜನಿಕ ಸುಲಭ ಅಥವಾ ಹೈಟೆಕ್ ಶೌಚಾಲಯ ನಿರ್ಮಿಸಿಕೊಡುವಂತೆ ಐದು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಸ್ಪಂದಿಸದೇ ನಿರ್ಲಕ್ಷ್ಯ ತೋರುತ್ತಿರುವ ಬೂದಗುಂಪಾ ಗ್ರಾಪಂ ಪಿಡಿಒ ಜುಬೇರ್ ನಾಯಕ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ತಾಲೂಕಿನ ಹಾಲಸಮುದ್ರ ಗ್ರಾಮದ ಮಹಿಳೆಯರು ಪಟ್ಟಣದ ಹೊರವಲಯದ ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಬುಧವಾರ ನಡೆದಿದೆ.
ತಾಲೂಕಿನ ಬೂದಗುಂಪಾ ಗ್ರಾಪಂ ವ್ಯಾಪ್ತಿಯ ಹಾಲಸಮುದ್ರ-ತಿಮ್ಮಾಪುರ ಗ್ರಾಮದಲ್ಲಿನ ಐದನೇ ವಾರ್ಡ್‌ನಲ್ಲಿನ ಸುಮಾರು ಒಂದೂವರೆ ಎಕರೆಗೆ ಹೆಚ್ಚಿನ ಸರ್ಕಾರಿ ಜಾಗೆಯಲ್ಲಿ ಒಂದು ಸುಸಜ್ಜಿತವಾದ ಸಾರ್ವಜನಿಕ ಸುಲಭ ಶೌಚಾಲಯವನ್ನಾಗಲಿ ಅಥವಾ ಹೈಟೆಕ್ ಶೌಚಾಲಯ ನಿರ್ಮಿಸಿಕೊಡುವಂತೆ ಆಗ್ರಹಿಸಿ ಮಹಿಳೆಯರು ಕಳೆದ 2017ರಿಂದ ಸತತವಾಗಿ ಮನವಿ ಸಲ್ಲಿಸುತ್ತಾ ಬಂದರೂ ಗ್ರಾಪಂ ಪಿಡಿಒ ಜುಬೇರ್ ನಾಯಕ್ ನಿರ್ಲಕ್ಷ್ಯ ವಹಿಸುತ್ತಾ ಬಂದಿದ್ದಾರೆ. ಬರೀ ಮನವಿ ಅಷ್ಟೇ ಅಲ್ಲ ಎಷ್ಟೋ ಬಾರಿ ಪಂಚಾಯತ್ ಕಾರ್ಯಾಲಯಕ್ಕೂ ಮುತ್ತಿಗೆ ಹಾಕಿದರು ಕೂಡ ಎಚ್ಚೆತ್ತುಕೊಳ್ಳದ ಪಿಡಿಒ ನಮಗೆಲ್ಲ ಹಾರಿಕೆ ಉತ್ತರ ನೀಡಿ ಬಾಯಿ ಮುಚ್ಚಿಸುತ್ತಾ ಬಂದಿದ್ದಾರೆ ಎಂದು ಮಹಿಳೆಯರು ದೂರಿದರು.
ಗ್ರಾಮದ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಮಾತು ಕೇಳಿ ಪಿಡಿಒ ನಮ್ಮ ಮನವಿಗಳನ್ನು ಕಸದ ಬುಟ್ಟಿಗೆ ಹಾಕುತ್ತಿದ್ದಾರೆ. ಅದಕ್ಕೆ ನಮ್ಮ ಅಳಲನ್ನು ತೋಡಿಕೊಳ್ಳಲು ನೇರವಾಗಿ ತಾಪಂಗೆ ಬಂದಿದ್ದೇವೆ. ಅಲ್ಲದೇ ತಾಪಂಗೂ ಈ ಮುಂಚೆ ಮನವಿ ಸಲ್ಲಿಸಿದ್ದೇವೆ. ಆದರೂ ಗ್ರಾಮಸ್ಥರ ಮನವಿಗೆ ಯಾವ ಸ್ಪಂದನೆ ಇಲ್ಲವಾಗಿದೆ ಎಂದರು.
ಬರೀ ಮನವಿ ನೀಡಿದ್ದಲ್ಲದೇ ಹಲವಾರು ಬಾರಿ ಗ್ರಾಪಂ ಕಾರ್ಯಾಲಯಕ್ಕೂ ಮುತ್ತಿಗೆ ಹಾಕಿ ಎಚ್ಚರಿಸಿದರೂ ಎಚ್ಚೆತ್ತುಕೊಳ್ಳದ ಪಿಡಿಒ ದುರ್ನಡತೆಗೆ ಬೇಸತ್ತು ಕೊನೆಗೆ ಇವತ್ತು ತಾಪಂಗೆ ಮುತ್ತಿಗೆ ಹಾಕುವ ಪರಿಸ್ಥಿತಿ ತಲೆದೋರಿದೆ ಎಂದರು ಪ್ರತಿಭನಟನಾ ನಿರತರು.
ಮೂರು ದಿನಗಳ ಹಿಂದೆ ಬೂದಗುಂಪಾ ಗ್ರಾಪಂ ಗ್ರಾಮಸ್ಥರು ಮುತ್ತಿಗೆ ಹಾಕಿದಾಗಲೇ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಆ ಕಾರಣಕ್ಕೆ ಗುರುವಾರ ಬೂದಗುಂಪಾ ಗ್ರಾಪಂಗೆ ಖುದ್ದು ಭೇಟಿ ನೀಡಿ ನಂತರ ಹಾಲಸಮುದ್ರ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಲಾಗುವುದು. –ಡಾ| ಆರ್. ಮೋಹನ್, ತಾಪಂ ಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.