ನಿಡಶೇಸಿ ಕಲ್ಲಂಗಡಿಗೆ ದುಬೈನಲ್ಲಿ ಬೇಡಿಕೆ!
Team Udayavani, Feb 24, 2020, 3:48 PM IST
ಸಾಂದರ್ಭಿಕ ಚಿತ್ರ
ಕುಷ್ಟಗಿ: ತಾಲೂಕಿನ ನಿಡಶೇಸಿಯ ಇಸ್ರೇಲ್ ಮಾದರಿ ತೋಟಗಾರಿಕೆ ಕ್ಷೇತ್ರದಲ್ಲಿ ಬೆಳೆದ 100 ಟನ್ ಕಲ್ಲಂಗಡಿ ದೂರದ ದುಬೈ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.
ನಿಡಶೇಸಿ ಗ್ರಾಮದ ಹೊರವಲಯದಲ್ಲಿರುವ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿ (ಕೆಎಸ್ ಎಚ್‌ಡಿಎ)ಯ ಇಸ್ರೇಲ್ ಮಾದರಿ ತೋಟಗಾರಿಕೆ ಕ್ಷೇತ್ರದ 15 ಎಕರೆ ಪ್ರದೇಶದಲ್ಲಿ ಭೀಮ್, ಸುಫರಿತ್ ತಳಿಯ ಕಲ್ಲಂಗಡಿ ಬೆಳೆಯಲಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಪ್ಲಾಸ್ಟಿಕ್ ಮಲ್ಡಿಂಗ್ ತಂತ್ರಜ್ಞಾನದಲ್ಲಿ ಬೆಳೆಯಲಾಗಿದೆ. ಸದ್ಯ ಕಟಾವಿನ ಹಂತದಲ್ಲಿದ್ದು, ಪ್ರತಿ ಕಲ್ಲಂಗಡಿ ಬಳ್ಳಿಗೆ ಮೂರು ಟಿಸಿಲಿಗೆ ತಲಾ ಒಂದರಂತೆ ಕಾಯಿ ಇವೆ. ಪ್ರತಿ ಕಲ್ಲಂಗಡಿ ಹಣ್ಣು 10ರಿಂದ 11 ಕೆಜಿ ತೂಕವಿದೆ. ಈ ಕಲ್ಲಂಗಡಿ ಹಣ್ಣು ವೈಜ್ಞಾನಿಕವಾಗಿ ಹಾಗೂ ಸಾವಯವ ಪದ್ಧತಿಯಲ್ಲಿ ಬೆಳೆದ ಕಾರಣ ಉತ್ತಮ ಗುಣಮಟ್ಟದ ಮಾನ್ಯತೆ ಹಿನ್ನೆಲೆಯಲ್ಲಿ ದುಬೈ ದೇಶದಿಂದ ಇದೇ ಮೊದಲ ಬಾರಿಗೆ 100 ಟನ್ ಬೇಡಿಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಕಟಾವು ನಂತರ ಮುಂಬೈ ಮೂಲಕ ದುಬೈ ಜಾಗತಿಕ ಮಾರುಕಟ್ಟೆ ಪ್ರವೇಶಿಸಲಿದೆ. ದುಬೈಗೆ ಪ್ರತಿ ಕೆಜಿಗೆ 14 ರೂ. ದರ ಒಪ್ಪಂದದನ್ವಯ 1.40 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.
ಎಕರೆಗೆ 10 ಟನ್: 70 ದಿನಗಳಲ್ಲಿ ಉತ್ಕೃಷ್ಟ ಫಸಲು ನೀಡುವ ಕಲ್ಲಂಗಡಿಯನ್ನು ಪ್ರತ್ಯೇಕ 12 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದು, ಅಂಜೂರ ತೋಟದಲ್ಲೂ ಅಂತರ ಬೆಳೆಯಾಗಿ 3 ಎಕರೆಯಲ್ಲಿ ಬೆಳೆಯಲಾಗಿದೆ. ಬೀಜ, ಲಘು ಪೋಷಕಾಂಶ, ಮಲಿcಂಗ್, ಹನಿ ನೀರಾವರಿ ನಿಯಮಿತ ನೀರು ನಿರ್ವಹಣೆ ಸೇರಿದಂತೆ ಎಕರೆಗೆ 10ರಿಂದ 12 ಸಾವಿರ ರೂ. ಖರ್ಚು ಬರುತ್ತಿದ್ದು, 75 ಸಾವಿರ ರೂ. ಆದಾಯ ಖಾತ್ರಿಯೆನಿಸಿದೆ. 15 ಎಕರೆ ಪ್ರದೇಶದಲ್ಲಿ 150 ಟನ್ ಇಳುವರಿ ನಿರೀಕ್ಷಿಸಲಾಗಿದೆ. ಪ್ರತಿ ಎಕರೆಗೆ ಸರಾಸರಿ 10 ಟನ್ ಇಳುವರಿ ನಿಶ್ಚಿತವಾಗಿದ್ದು, ವೈಜ್ಞಾನಿಕವಾಗಿ ಕಡಿಮೆ ಅವಧಿ , ಅಲ್ಪ ನೀರು, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ತೂಕದ ಉತ್ಕೃಷ್ಟ ಗುಣಮಟ್ಟದ ಕಲ್ಲಂಗಡಿ ಬೆಳೆಯಲು ಸಾಧ್ಯವಾಗಿದೆ. ಇದೇ ಮಾದರಿಯಲ್ಲಿ ರೈತರು ಬೆಳೆದರೆ ನಿರೀಕ್ಷಿತ ಲಾಭಗಳಿಸಲು ಸಾಧ್ಯವಿದೆ ಎನ್ನುತ್ತಾರೆ ತೋಟಗಾರಿಕೆ ಸಹಾಯಕ ಆಂಜನೇಯ ದಾಸರ್.
ನರಿ-ಕೋತಿ ಕಾಟ: ಇಲ್ಲಿ ಬೆಳೆದಿರುವ ಕಲ್ಲಂಗಡಿಗೆ ಹಗಲಿನಲ್ಲಿ ಕೋತಿ ಕಾಟ, ರಾತ್ರಿ ನರಿ ಕಾಟ ಶುರುವಾಗಿದೆ. ನರಿಗಳು ಕಲ್ಲಂಗಡಿ ಹಣ್ಣನ್ನು ಅರೆ ಬರೆ ತಿಂದು ಹಾಳುಗೆಡುತ್ತಿರುವ ಹಿನ್ನೆಲೆಯಲ್ಲಿ ಹಗಲು ರಾತ್ರಿ ಕಾವಲಿಡಲಾಗಿದೆ. ಅಂಜೂರ, ಪೇರಲ, ಕಲ್ಲಂಗಡಿ ಹಣ್ಣಿಗೆ ಕೋತಿಗಳ ಹಾವಳಿ ನಿಯಂತ್ರಿಸಲು ಶಬ್ಧದಿಂದ ಬೆದರಿಸಿ ಬೆಳೆಗಳನ್ನು ಸಂರಕ್ಷಿಸಿಸುವ ಕ್ರಮ ಕೈಗೊಳ್ಳಲಾಗಿದೆ. ಕಲ್ಲಂಗಡಿ ಬೆಳೆಯನ್ನು ಬೇಸಿಗೆಯಲ್ಲಿ ಒಂದೇ ಬೆಳೆ ಇಳುವರಿ ಸಾಮಾನ್ಯ. ಆದರೆ ನಿಡಶೇಸಿಯ ತೋಟಗಾರಿಕಾ ಕ್ಷೇತ್ರದಲ್ಲಿ ಬೇಸಿಗೆಯಲ್ಲಿ ಎರಡು ಬೆಳೆಗೆ ಇಳುವರಿ ತೆಗೆಯಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಳೆದ ಡಿಸೆಂಬರ್ ನಲ್ಲಿ 70 ದಿನಗಳ ಕಡು ಹಸಿರಿನ ಕಲ್ಲಂಗಡಿ ಬೆಳೆಯಲಾಗಿದ್ದು, ಈ ಬೆಳೆ ಕಟಾವು ನಂತರ 45 ದಿನ ಇಳುವರಿ ಬರುವ ಕಪ್ಪು ಕಲ್ಲಂಗಡಿಯನ್ನು ಇದೇ ಮಲ್ಟಿಂಗ್ ನಲ್ಲಿ ಬೆಳೆಯಲಾಗುತ್ತಿದೆ. ಈ ಕ್ರಮದಿಂದ ಮಲ್ಟಿಂಗ್, ಹನಿ ನೀರಾವರಿ ಪೈಪ್ ಲೈನ್ ಉಳಿತಾಯವಲ್ಲದೇ, ಮೊದಲ ಕಲ್ಲಂಗಡಿ ಬಳ್ಳಿಯಿಂದ ಉತ್ತಮ ಕಾಂಪೋಸ್ಟ್ ಗೊಬ್ಬರಕ್ಕೆ ಬಳಕೆಯಾಗಲಿದೆ. ಮುಂದಿನ ಏಪ್ರಿಲ್ ಅಂತ್ಯ ಹಾಗೂ ಮೇ ತಿಂಗಳಲ್ಲಿ ಇಳುವರಿ ನಿರೀಕ್ಷಿಸಬಹುದಾಗಿದೆ ಎನ್ನುತ್ತಾರೆ ಆಂಜನೇಯ ದಾಸರ.
ಕೀಟಬಾಧೆ ನಿಯಂತ್ರಕ ಟ್ರ್ಯಾಪ್ : ಕಲ್ಲಂಗಡಿ ಬಳ್ಳಿಗೆ ಕಾಡುವ ವಿವಿಧ ಕೀಟಬಾಧೆ ನಿಯಂತ್ರಿಸಲು ಅಂಟು ದ್ರಾವಣವಿರುವ ಕೀಟ ಆಕರ್ಷಕ ಹಳದಿ, ನೀಲಿ ಬಣ್ಣದ ಟ್ರ್ಯಾಪ್ ಅಳವಡಿಸಲಾಗಿದೆ. ಕಲ್ಲಂಗಡಿ ಬಳ್ಳಿಗೆ ದಾಳಿ ಇಡುವ ಕೀಟಗಳು ಬಣ್ಣದ ಟ್ರ್ಯಾಪ್ ಸೆಳೆತಕ್ಕೆ ಅಂಟಿಕೊಂಡು ಸಾಯುತ್ತವೆ. ಇದರಿಂದ ಸಾವಿರಾರು ವ್ಯಯಿಸುವ ಕ್ರಿಮಿನಾಶಕದ ಖರ್ಚು ತಗ್ಗಿಸಿದೆ. 2 ಕೆಜಿ ಟ್ರ್ಯಾಪ್ ಗೆ 1 ಸಾವಿರ ರೂ. ಖರ್ಚು ಬರುತ್ತಿದ್ದು, 10 ಸಾವಿರ ರೂ. ಕ್ರಿಮಿನಾಶಕದ ಖರ್ಚು ಉಳಿಯುತ್ತದೆ. ಬೇಸಿಗೆಯಲ್ಲಿ ವಿಪರೀತ ಬಿಸಿಲಿಗೆ ಕಲ್ಲಂಗಡಿಗೆ ಸೀಳು ಬರದಂತೆ ಸಾವಯವ ಆಧಾರಿತ ಸಿಂಪರಣೆ ಕ್ರಮ ಕೈಗೊಂಡಿರುವುದಾಗಿ ದಾಸರ ವಿವರಿಸಿದರು.
ಬೇಸಿಗೆಯಲ್ಲಿ ಮಾವು ಹೊರತುಪಡಿಸಿದರೆ ಕಲ್ಲಂಗಡಿ ಹೆಚ್ಚು ಮಾರಾಟವಾಗುತ್ತದೆ. ಬೇಸಿಗೆಯ ತಾಪಮಾನ ಹಿನ್ನೆಲೆಯಲ್ಲಿ ಹೆಚ್ಚು ನೀರಿನಾಂಶವಿರುವ, ದೇಹವನ್ನು ತಂಪಾಗಿಸುವ ಈ ಹಣ್ಣನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಈ ಹಣ್ಣಿಗೆ ಕ್ರಮೇಣ ಬೇಡಿಕೆ ಹೆಚ್ಚಿದ್ದು, ಕಳೆದ ವರ್ಷ ಕುಷ್ಟಗಿ ತಾಲೂಕಿನಲ್ಲಿ 140ರಿಂದ 150 ಹೆಕ್ಟೇರ್ ಬೆಳೆಯಲಾಗಿದ್ದು, ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಬಾರಿ 200 ಹೆಕ್ಟೇರ್‌ಗೆ ವಿಸ್ತರಿಸಲಾಗಿದೆ. –ಕೆ.ಎಂ. ರಮೇಶ,ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ
-ಮಂಜುನಾಥ ಮಹಾಲಿಂಗಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.