ನಿಷೇಧವಿದ್ದರೂ ಭಾರೀ ವಾಹನ ಸಂಚಾರ! ಲಾರಿ, ಟ್ರಕ್ ಸಂಚಾರದಿಂದ ಹದಗೆಟ್ಟ ರಸ್ತೆ
ಪ್ರವಾಸಿಗರು ಮತ್ತು ವಾಹನಗಳ ಚಾಲಕರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಶಾಪ ಹಾಕುತ್ತಿದ್ದಾರೆ.
Team Udayavani, Aug 5, 2023, 5:23 PM IST
ಗಂಗಾವತಿ: ಗಂಗಾವತಿ, ಕಡೆಬಾಗಿಲು ಸೇತುವೆ ಮೇಲೆ ಮತ್ತು ಹೊಸಪೇಟೆ 130 ರಾಜ್ಯ ಹೆದ್ದಾರಿಯಲ್ಲಿ ಭಾರೀ ಗಾತ್ರದ ಲಾರಿಗಳ ಸಂಚಾರಕ್ಕೆ ನಿಷೇಧವಿದ್ದರೂ ಕಳೆದ ಆರು ತಿಂಗಳಿಂದ ಮೈನ್ಸ್ ಮತ್ತು ಅಕ್ರಮ ಮರಳು ತುಂಬಿದ ಲಾರಿಗಳ ಸಂಚಾರದಿಂದ ರಸ್ತೆ ಸಂಪೂರ್ಣ ಹದಗೆಟ್ಟು ತಗ್ಗು ಗುಂಡಿ ಬಿದ್ದಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಈ ರಸ್ತೆಯಲ್ಲಿ ಭಾರೀ ಗಾತ್ರದ ಲಾರಿ ಮತ್ತು ಟ್ರಕ್‌ಗಳ ಸಂಚಾರಕ್ಕೆ ನಿಷೇಧವನ್ನು ಜಿಲ್ಲಾಡಳಿತ ಹೇರಿದ್ದರೂ ಚಾಲಕರು ಕಳೆದ ಆರು ತಿಂಗಳಿಂದ ಹಗಲು ರಾತ್ರಿ ಎನ್ನದೇ ಜಿಲ್ಲಾಡತದ ಆದೇಶ ಗಾಳಿಗೆ ತೂರಿ ಬೃಹತ್ ಗಾತ್ರದ ಲಾರಿಗಳನ್ನು ಓಡಿಸುತ್ತಿದ್ದರೂ
ತಾಲೂಕು ಆಡಳಿತ ಹಾಗೂ ಗ್ರಾಮೀಣ ಪೊಲೀಸರ ಮೌನ ಹಲವು ಅನುಮಾನ ಹುಟ್ಟಿಸಿದೆ. 70-80 ಟನ್ ಭಾರ ತುಂಬಿದ ಮೈನ್ಸ್ ಮತ್ತು ಅಕ್ರಮ ಮರಳು ಲಾರಿ ಮತ್ತು ಟ್ರಕ್ ಗಳ ಓಡಾಟದಿಂದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳು ಬಿದ್ದಿವೆ. ಕಿಷ್ಕಿಂಧಾ ಅಂಜನಾದ್ರಿಗೆ ದೇಶವಿದೇಶದ ಪ್ರವಾಸಿಗರು ಮತ್ತು ಆನೆಗೊಂದಿ ಮತ್ತು ಮುನಿರಾಬಾದ್,
ಹುಲಿಗಿಯ ಶ್ರೀಹುಲಿಗೆಮ್ಮದೇವಿಯ ಕ್ಷೇತ್ರಕ್ಕೆ ಹುಣ್ಣಿಮೆ, ಅಮಾವಾಸ್ಯೆ, ಮಂಗಳವಾರ, ಶುಕ್ರಮವಾರ ಸಾವಿರಾರು ಭಕ್ತರು-ಪ್ರವಾಸಿಗರು ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದು, ಪ್ರವಾಸಿಗರು ಮತ್ತು ವಾಹನಗಳ ಚಾಲಕರು ಜಿಲ್ಲಾಡಳಿತ
ಮತ್ತು ಪೊಲೀಸ್ ಇಲಾಖೆಗೆ ಶಾಪ ಹಾಕುತ್ತಿದ್ದಾರೆ.
ಹೆಚ್ಚಿದ ಅಪಘಾತಗಳು: ಗಂಗಾವತಿ ಕಡೆ ಬಾಗಿಲು ಹೊಸಪೇಟೆ, ಹುಲಿಗಿ ಕಡೆ ಹೋಗುವ ರಸ್ತೆಯಲ್ಲಿ ಲಾರಿ ಮತ್ತು ಅಕ್ರಮ ಮರಳು ಟ್ರಕ್‌ಗಳ ಸಂಚಾರದಿಂದ ಕಳೆದ ಆರು ತಿಂಗಳಿಂದ ಈ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಸಾವು ನೋವುಗಳು
ಸಂಭವಿಸಿದ್ದರೂ ಕ್ರಮವಾಗುತ್ತಿಲ್ಲ. ರಾಜ್ಯ ಸರ್ಕಾರ ಗಂಗಾವತಿ ಆನೆಗೊಂದಿ ಮುನಿರಾಬಾದ್ ರಸ್ತೆಯನ್ನು 130 ರಾಜ್ಯ ಹೆದ್ದಾರಿ
ಎಂದು ಘೋಷಣೆ ಮಾಡಿದ್ದರೂ ರಾಜ್ಯ ಹೆದ್ದಾರಿಗೆ ಇರಬೇಕಾದ ಸೌಕರ್ಯಗಳನ್ನು ನೀಡಿಲ್ಲ. ಇದರಿಂದಾಗಿ ಅನೇಕ ಅಪಘಾತಗಳು ನಡೆದಿವೆ. ಹೆಡ್ನಾಳ್-ಗಂಗಾವತಿ ಮಧ್ಯೆ ರಸ್ತೆ ಬಹಳ ಇಕ್ಕಟ್ಟಾಗಿದ್ದು, ಅಗಲೀಕರಣ ಮಾಡುವ ಕುರಿತು ಈಗಾಗಲೇ
ಪ್ರಸ್ತಾವನೆಗಳು ಸಲ್ಲಿಸಲಾಗಿದ್ದು, ಕಳೆದ ಎರಡು ವರ್ಷಗಳ ಹಿಂದೆ ಘೋಷಣೆ ಮಾಡಲಾಗಿದೆ.
ಗಂಗಾವತಿ ಕಡೆ ಬಾಗಿಲು ಹೊಸಪೇಟೆ ಆನೆಗೊಂದಿ ಮಾರ್ಗದಲ್ಲಿ ಭಾರೀ ಗಾತ್ರದ ಲಾರಿ ಮತ್ತು ಅಕ್ರಮ ಮರಳು ತುಂಬಿದ ಟ್ರಕ್
ಗಳ ಓಡಾಟದಿಂದ ಸಂಚಾರ ಸಂಪೂರ್ಣ ಹದಗೆಟ್ಟಿದೆ. ನಿತ್ಯವೂ ಸಾವಿರಾರು ವಾಹನಗಳು ಮತ್ತು ಪ್ರವಾಸಿಗರು ಸಂಚರಿಸುವ
ಈ ರಸ್ತೆಯಲ್ಲಿ ಭಾರೀ ಗಾತ್ರದ ವಾಹನಗಳನ್ನು ನಿಷೇಧ ಮಾಡಿದ್ದರೂ ಈ ರಸ್ತೆಯಲ್ಲಿ ಹೋಗುವುದನ್ನು ಕೂಡಲೇ ತಡೆಯುವಂತೆ ಈಗಾಗಲೇ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ರಸ್ತೆ ಅಭಿವೃದ್ಧಿ ಕುರಿತಂತೆ
ಈಗಾಗಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿದ್ದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ
ಯೋಜನೆಯಂತೆ ಈ ರಸ್ತೆಯ ಅಭಿವೃದ್ಧಿ ಮಾಡಲಾಗುತ್ತದೆ.
ಗಾಲಿ ಜನಾರ್ದನ ರೆಡ್ಡಿ ಶಾಸಕ
ಕೆ. ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್ ವೆಲ್
ಉದ್ಘಾಟನೆ ಭಾಗ್ಯ ನಿರೀಕ್ಷೆಯಲ್ಲಿ ಅಂಗನವಾಡಿ:4 ಕೇಂದ್ರಗಳು ಬಾಡಿಗೆ ಮನೆಯಲ್ಲಿ ಕಾರ್ಯನಿರ್ವಹಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.