ಶಾಸಕ ಪರಣ್ಣರಿಂದ ಪ್ರಗತಿಯ ಪರ್ವ
Team Udayavani, Sep 1, 2022, 2:44 PM IST
ಗಂಗಾವತಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸಿನೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜಯಿಶಾಲಿಯಾದ ಜನಪ್ರಿಯ ಶಾಸಕ ಪರಣ್ಣ ಮುನವಳ್ಳಿ ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ, ರಸ್ತೆ, ಪ್ರವಾಸೋದ್ಯಮ ಮತ್ತು ಶೈಕ್ಷಣಿಕ ಸೇರಿ ಹಲವು ಸೌಕರ್ಯ ಕಲ್ಪಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.
ಗಂಗಾವತಿ ಸೇರಿ ಸುತ್ತಲಿರುವ ಐತಿಹಾಸಿಕ ಮತ್ತು ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಿ ಇಡೀ ಕ್ಷೇತ್ರವನ್ನು ಪ್ರವಾಸೋದ್ಯಮವಾಗಿಸುವ ನಿಟ್ಟಿನಲ್ಲಿ ಅವರು ಕಾರ್ಯಯೋಜನೆ ರೂಪಿಸಿದ್ದಾರೆ.
ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ, ಪಂಪಾ ಸರೋವರ, ಋಷಿಮುಖ ಪರ್ವತ, ವಾಲೀಕಿಲ್ಲಾ ಆದಿಶಕ್ತಿ ದೇಗುಲ, ಚಿಂತಾಮಣಿ, ನವವೃಂದಾವನಗಡ್ಡಿ, ವಾಣಿಭದ್ರೇಶ್ವರ ಬೆಟ್ಟ, ಹಿರೇಬೆಣಕಲ್ ಮೊರ್ಯರ ಬೆಟ್ಟ(ಶಿಲಾಸಮಾಧಿ ಅಥವಾ ಮನೆಗಳು), ಜಬ್ಬಲಗುಡ್ಡ ಗಂಡುಗಲಿ ಕುಮಾರರಾಮನ ಬೆಟ್ಟ, ವೆಂಕಟಗಿರಿ ಶ್ರೀ ವೆಂಕಟೇಶ್ವರ ದೇಗುಲ, ಹಿರೇಜಂತಗಲ್ ಶ್ರೀ ಪ್ರಸನ್ನಪಂಪಾ ವಿರೂಪಾಕ್ಷೇಶ್ವರ ದೇಗುಲ, ಅಯ್ಯಪ್ಪಸ್ವಾಮಿ ಗಿರಿ ಹೀಗೆ ಹಲವು ಐತಿಹಾಸಿಕ, ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ ದೇಶ-ವಿದೇಶದ ಜನರಿಗೆ ಈ ಕ್ಷೇತ್ರಗಳನ್ನು ಪರಿಚಯಿಸುವ ಕಾರ್ಯ ಮಾಡಲು ಯೋಜನೆ ರೂಪಿಸಿ ಸರಕಾರದ ಮಟ್ಟದಲ್ಲಿ ಅನುಷ್ಠಾನ ಮಾಡುತ್ತಿದ್ದಾರೆ ಶಾಸಕ ಪರಣ್ಣ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಂಜನಾದ್ರಿಗೆ ಭೇಟಿ ನೀಡಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಲ್ಲಿ ಶಾಸಕ ಪರಣ್ಣ ಶ್ರಮ ವಹಿಸಿದ್ದಾರೆ. ಅಂಜನಾದ್ರಿಗೆ ರೂಪ್ ವೇ ಅಗತ್ಯ ಸೌಕರ್ಯಕ್ಕೆ 120 ಕೋಟಿ, ಹಿಟ್ನಾಳ-ಗಂಗಾವತಿ ಚತುಷ್ಪಥ ರಸ್ತೆ ಕಾಮಗಾರಿಗಾಗಿ 349 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಅಂಜನಾದ್ರಿ ಸುತ್ತಲಿನ ರೈತರ 61 ಎಕರೆ ಭೂಮಿ ಸರಕಾರ ವಶಕ್ಕೆ ಪಡೆದು ವಸತಿ ಸಮುತ್ಛಯಗಳು, ಸ್ನಾನಘಟ್ಟ, ರಸ್ತೆ, ವಾಣಿಜ್ಯ ಸಂಕೀರ್ಣ ನಿರ್ಮಿಲು ಯೋಜನೆ ರೂಪಿಸಲಾಗಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸಂಗಾಪೂರ, ಆನೆಗೊಂದಿ, ಬಸಾಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು 13 ಕೋಟಿ ರೂ.ಗಳ ಮಂಜೂರಾತಿ., ಜೆಜೆಎಂ ಯೋಜನೆ ಮೂಲಕ ಮನೆ ಮನೆಗೆ ಕುಡಿಯುವ ನೀರು ಪೂರೈಸಲು 40 ಕೋಟಿ ರೂ. ಯೋಜನೆ ಅನುಷ್ಠಾನ ಮಾಡಲಾಗಿದೆ.
ಅಮೃತಸಿಟಿ ಯೋಜನೆ: ಗಂಗಾವತಿ ನಗರದಲ್ಲಿ ಅನುಷ್ಠಾನವಾಗುತ್ತಿರುವ ಅಮೃತಸಿಟಿ ಯೋಜನೆಯಡಿ 109 ಕೋಟಿ ರೂ.ಗಳ ಯೋಜನೆಯಡಿ 4.50 ಕೋಟಿ ರೂ.ಗಳ ರಸ್ತೆ, ಚರಂಡಿ ಹಾಗೂ ದುರುಗಮ್ಮನಹಳ್ಳದ ಹೂಳೆತ್ತುವ ಕಾಮಗಾರಿಗೆ 10 ಕೋಟಿ ರೂ.ಖರ್ಚು ಮಾಡಲಾಗಿದೆ. ನಗರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ ಸುಮಾರು 6 ಕೋಟಿ ಹಣ ಮಂಜೂರು ಮಾಡಲಾಗಿದೆ.
ಆರೋಗ್ಯಸೇವೆ: ಗಂಗಾವತಿಯಲ್ಲಿರುವ ಸರಕಾರಿ ಆಸ್ಪತ್ರೆಗೆ ಸರಕಾರ ವಿಶೇಷ ಅನುದಾನದ ಮೂಲಕ ಸಿಟಿ ಸ್ಕ್ಯಾನಿಂಗ್ ಮಷಿನ್, ಆಕ್ಸಿಜನ್ ಮಿಷನ್ ಸೇರಿ ಹಲವು ಸೌಕರ್ಯ ಕಲ್ಪಿಸಲಾಗಿದೆ. ಶಾಸಕರ ಅನುದಾನದಲ್ಲಿ ಆಂಬ್ಯುಲೆನ್ಸ್ ವಿತರಿಸಲಾಗಿದೆ.
ಶೈಕ್ಷಣಿಕ ಪ್ರಗತಿ: ಗಂಗಾವತಿಯಲ್ಲಿ 2008 ರಿಂದ ವೃತ್ತಿಪರ ಕೋರ್ಸ್‌ಗಳ ಕಾಲೇಜು ಆರಂಭವಾಗಿವೆ. ಸರಕಾರಿ ಇಂಜಿನಿಯರಿಂಗ್ ಕಾಲೇಜು, ಶ್ರೀಕೊಲ್ಲಿನಾಗೇಶ್ವರರಾವ್ ಸರಕಾರಿ ಕಾಲೇಜ್‌ನಲ್ಲಿ ಹತ್ತು ಹಲವು ಸ್ನಾತಕೋತ್ತರ ಕೋರ್ಸ್‌ಗಳ ಜತೆಗೆ ಕೋಟ್ಯಂತರ ರೂ.ಗಳನ್ನು ಖರ್ಚು ಮಾಡಿ ಪ್ರಯೋಗಾಲಯ, ತರಗತಿ ಕೊಠಡಿ, ಸಭಾಂಗಣ, ಗ್ರಂಥಾಲಯ, ಮೈದಾನ ನಿರ್ಮಿಸಲಾಗಿದೆ. ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಪ್ರಾಪರ್ ಶಾಲೆ ನೂತನ ಕೊಠಡಿಗಳ ನಿರ್ಮಾಣಕ್ಕೆ 16 ಲಕ್ಷ ರೂ. ಖರ್ಚು ಮಾಡಲಾಗಿದೆ. ಕೃಷಿ ಮಹಾವಿದ್ಯಾಲಯ ಕಾರ್ಯಾರಂಭ ಮಾಡಿದ್ದು ಶಾಸಕರ ವಿಶೇಷ ನಿಧಿಯಿಂದ 5.5 ಕೋಟಿ ಖರ್ಚು ಮಾಡಿ ವಿದ್ಯಾರ್ಥಿ ನಿಲಯ, ಎರಡು ಬಿಸಿಎಂ ಕಾಲೇಜು ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ 3.30 ಕೋಟಿ, ಎಸ್ಸಿ, ಎಸ್ಟಿ ಹಾಸ್ಟೇಲ್ ನಿರ್ಮಾಣಕ್ಕೆ 3.50 ಕೋಟಿ, ಅಬ್ದುಲ್ ಕಲಾಂ ಆಜಾದ್ ಆದರ್ಶ ಶಾಲೆ ನಿರ್ಮಾಣಕ್ಕೆ 1.80 ಕೋಟಿ, ಅರಳಿಹಳ್ಳಿಯಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆ ನಿರ್ಮಾಣಕ್ಕೆ 9 ಕೋಟಿ ರೂ., ಶಾಲಾಕಾಲೇಜು ಕೊಠಡಿಗಳ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 2 ಕೋಟಿ ರೂ. ಖರ್ಚು ಮಾಡಲಾಗಿದೆ.
ಪ್ರವಾಸೋದ್ಯಮಕ್ಕೆ ಆದ್ಯತೆ: ಶಾಸಕ ಪರಣ್ಣ ಮುನವಳ್ಳಿಯವರು ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಸೇರಿ ಸುತ್ತಲಿನ ಪ್ರವಾಸಿತಾಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ವಿಶೇಷ ಅನುದಾನ ತಂದು ಮುಂದಿನ 8 ತಿಂಗಳಲ್ಲಿ ಯೋಜನೆ ಅನುಷ್ಠಾನ ಮಾಡಲು ಅಧಿಕಾರಿಗಳು ಕಾರ್ಯ ಮಾಡುತ್ತಿದ್ದಾರೆ. ಹಿರೇಜಂತಗಲ್ ಪಂಪಾಪತಿ ದೇಗುಲಕ್ಕೆ 10 ಲಕ್ಷ, ಶ್ರೀರಾಘವೇಂದ್ರಸ್ವಾಮಿ ಮಠಕ್ಕೆ 10 ಲಕ್ಷ, ವೆಂಕಟರಮಣ ದೇಗುಲಕ್ಕೆ 10 ಲಕ್ಷ ರೂ. ಮಂಜೂರು ಮಾಡಲಿದೆ. ಆದಿಶಕ್ತಿ ದೇಗುಲದ ಗೋಶಾಲೆಗೆ 25 ಲಕ್ಷ ರೂ. ಮಂಜೂರು ಮಾಡಲಾಗಿದೆ.
ಹಕ್ಕುಪತ್ರ ವಿತರಣೆ: ಗಂಗಾವತಿಯಲ್ಲಿ ಸ್ಲಂ ಪ್ರದೇಶದಲ್ಲಿರುವ 96 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ, ಅರಣ್ಯವಾಸಿಗಳ ಕಲ್ಯಾಣ ಯೋಜನೆಯಡಿ ಮುಕ್ಕುಂಪಿ, ಅರಸಿನಕೆರೆ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ವಿರೂಪಾಪೂರ ಗಡ್ಡಿಯಿಂದ ಸ್ಥಳಾಂತರಗೊಂಡ 72 ಕುಟುಂಬಗಳಿಗೆ ಕರಿಯಮ್ಮಗಡ್ಡಿ ಹತ್ತಿರ ನಿವೇಶನ ಮಾಡಿ ಹಕ್ಕುಪತ್ರ ವಿತರಣೆಗೆ ಯೋಜನೆ ರೂಪಿಸಲಾಗಿದೆ.
ನೀರಾವರಿ: 2008 ಮತ್ತು 2018-22ರ ವರೆಗಿನ ಅವಧಿಯಲ್ಲಿ ಗಂಗಾವತಿ ಕ್ಷೇತ್ರದಲ್ಲಿ ನೀರಾವರಿಗಾಗಿ ಶಾಸಕ ಪರಣ್ಣ ಮುನವಳ್ಳಿ ಕೋಟ್ಯಂತರ ರೂ.ಗಳ ಅನುದಾನ ತಂದು ಕಾಮಗಾರಿ ಅನುಷ್ಠಾನ ಮಾಡಿಸುತ್ತಿದ್ದಾರೆ. ಪುರಾತನ ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿಗೆ 460 ಕೋಟಿ, ಮುಕ್ಕುಂಪಿ ಕೆರೆ ಮತ್ತು ಸುತ್ತಲಿನ 6 ಕೆರೆಗಳನ್ನು ತುಂಗಭದ್ರಾ ನದಿಯಿಂದ ಪ್ರವಾಹದ ಸಂದರ್ಭದಲ್ಲಿ ಭರ್ತಿ ಮಾಡುವ ಕಾಮಗಾರಿಗಾಗಿ 105 ಕೋಟಿ ರೂ.,ಇರಕಲ್ ಭಾಗದ ಕೆರೆಗಳನ್ನು ಭರ್ತಿ ಮಾಡಲು ಕೃಷ್ಣಾ ಬೀ ಸ್ಕೀಂ ಯೋಜನೆ ಕಾಮಗಾರಿಗಾಗಿ 56 ಕೋಟಿ ರೂ. ಮಂಜೂರು ಮಾಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.