Ganesha ವಿಸರ್ಜನೆ: ಹಿಂದೂ ಯುವಕರ ಮೇಲಿನ ಕೇಸ್ ಕೈ ಬಿಡುವಂತೆ ಸಂಸದ ಕರಡಿ ಸಂಗಣ್ಣ ಆಗ್ರಹ
Team Udayavani, Oct 7, 2023, 7:50 PM IST
ಗಂಗಾವತಿ: ಗಣೇಶನ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಪೊಲೀಸರು ಹಿಂದೂ ಮಹಾಮಂಡಳಿಯ ಐವರು ಕಾರ್ಯಕರ್ತರ ಮೇಲೆ ಕಾಣದ ಕೈಗಳ ಒತ್ತಡ ಮಣಿದು ಕೇಸ್ ದಾಖಲಿಸಿದ್ದಾರೆ. ಕೂಡಲೇ ಕೇಸ್ ವಾಪಸ್ ಪಡೆಯುವಂತೆ ಸಂಸದ ಕರಡಿ ಸಂಗಣ್ಣ ಹಾಗೂ ಮಾಜಿ ಶಾಸಕ ಪರಣ್ಣ ಮುನವಳ್ಳಿ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಅವರು ಶನಿವಾರ ಕೇಸ್ ದಾಖಲಾಗಿರುವ ಹಿಂದೂ ಕಾರ್ಯಕರ್ತರ ಮನೆ ತೆರಳಿ ಕುಟುಂಬದವರಿಗೆ ಧೈರ್ಯ ತುಂಬಿ ಮಾತನಾಡಿದರು.
ಘಟನೆ ಸತ್ಯಾಸತ್ಯತೆಯನ್ನು ಪರಿಶೀಲಿಸದೇ ಪೊಲೀಸರು ಯುವಕರ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನೀಯವಾಗಿದ್ದು, ತಕ್ಷಣ ಈ ಪ್ರಕರಣವನ್ನು ಹಿಂದಕ್ಕೆ ಪಡೆಯುಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮತ್ತು ಡಿವೈಎಸ್‌ಪಿ ಅವರಿಗೆ ಒತ್ತಾಯಿಸಲಾಗುತ್ತದೆ. ಗಂಗಾವತಿಯಲ್ಲಿ ಅನವಶ್ಯಕವಾಗಿ ಈ ರೀತಿ ಪ್ರಕರಣ ದಾಖಲು ಮಾಡಿ ಭಯ, ಭೀತಿ ಸೃಷ್ಟಿ ಮಾಡಬಾರದು ಎಂದು ಸರಕಾರದ ಗಮನಕ್ಕೂ ತರಲಾಗುವುದು ಎಂದರು.
ಗಂಗಾವತಿಯಲ್ಲಿ ಕಳೆದ ಎಂಟತ್ತು ವರ್ಷಗಳಿಂದ ಸೌಹಾರ್ದತೆಯಿಂದ ಗಣೇಶ ಹಬ್ಬ ಆಚರಿಸುತ್ತಾ ಬರಲಾಗುತ್ತಿದೆ. ಪ್ರತಿ ವರ್ಷವು ಗಣೇಶ ಮೆರವಣಿಗೆಯಲ್ಲಿ ಆರತಿ ಮಾಡಿ ವಿವಿಧ ರೀತಿಯಲ್ಲಿ ನೃತ್ಯ ಮಾಡುವುದು ವಾಡಿಕೆಯಾಗಿದೆ. ಆದರೆ ಇಷ್ಟು ವರ್ಷ ಯಾವುದೇ ಪ್ರಕರಣ ದಾಖಲಿಸದ ಪೊಲೀಸರು ಈ ವರ್ಷ ಹಿಂದು ಸಂಘಟನೆ ಐದು ಜನ ಕಾರ್ಯಕರ್ತರು ಮತ್ತು ಗಣೇಶ ಸಮಿತಿಯ ಒಂಬತ್ತು ಯುವಕರ ವಿರುದ್ಧ ಪ್ರಚೋದನಕಾರಿ ಘಟನೆ ನಡೆಸಿದ್ದಾರೆ ಎಂಬ ಕಾರಣ ನೀಡಿ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ತಕ್ಷಣ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು. ಮುಂದೆ ನಡೆಯುವ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಸೂಕ್ತ ಬಂದೋಬಸ್ತ್ ನೀಡಿ ಸುಸೂತ್ರವಾಗಿ ಮೆರವಣಿಗೆ ನಡೆಸಲು ಪೊಲೀಸರು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ತಿಪ್ಪೇರುದ್ರಸ್ವಾಮಿ ವಕೀಲರು,ˌ ಚನ್ನಪ್ಪ ಮಳಗಿ, ಕಾಶಿನಾಥ ಚಿತ್ರಗಾರ, ಶಿವು ಹರಿಕೇರಿˌ ಮಹಾಲಿಂಗಪ್ಪˌ ಹಿಂದು ಮುಖಂಡರಾದˌಅಯ್ಶನಗೌಡ ˌ ನೀಲಕಂಕ ನಾಗಶೆಟ್ಟಿˌ ಶ್ರೀಕಾಂತ ಹೊಸ್ಕೇರಿˌˌಹೆಚ್. ಬಸಣ್ಣˌಡಾ. ಜೀಡಿˌ ವೆಂಕಟೇಶ .ಕೆ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.