ಕಿಮ್ಸ್‌ಗೆ ಮಹಾಂತ ದೇವರು ತಾಯಿ ಮೃತದೇಹ ದಾನ!
Team Udayavani, Feb 8, 2019, 10:17 AM IST
ಕೊಪ್ಪಳ: ಈ ದೇಹ ಮಣ್ಣಲ್ಲಿ ಮಣ್ಣಾಗುವ ಬದಲು ಅಭ್ಯಾಸ ಮಾಡುವ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಲಿ ಎನ್ನುವ ತಾತ್ವಿಕತೆ ಅರಿತ ಬಾಗಲಕೋಟೆ ಜಿಲ್ಲೆಯ ಸ್ವಾಮೀಜಿ ಒಬ್ಬರು ತಮ್ಮ ತಾಯಿಯ ಮೃತದೇಹವನ್ನೇ ದಾನ ಮಾಡಿ ಸಮಾಜಕ್ಕೆ ಜಾಗೃತಿಯ ಸಂದೇಶ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬನಹಟ್ಟಿಯ ಶರಣರ ಕುಟೀರದ ಸ್ವಾಮೀಜಿ ಮಹಾಂತ ದೇವರು ತಮ್ಮ ತಾಯಿ ಕಮಲಮ್ಮ (82) ಅವರ ಮೃತದೇಹವನ್ನು ವೈದ್ಯಕೀಯ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ಅಧ್ಯಯನಕ್ಕೆ ದಾನ ಮಾಡಿದ್ದಾರೆ. ಮಹಾಂತ ದೇವರು ಅವರ ತಾಯಿ ಕಮಲಮ್ಮ ಜ.22ರಂದೇ ಮೃತಪಟ್ಟಿದ್ದಾರೆ. ಸ್ವಾಮೀಜಿಗಳು ತಮ್ಮ ತಾಯಿಯ ಮೃತದೇಹವನ್ನು ಬೈಲಹೊಂಗದಲ್ಲಿನ ಡಾ| ರಾಮಣ್ಣವರ್ ಪ್ರತಿಷ್ಠಾನಕ್ಕೆ ಹಸ್ತಾಂತರ ಮಾಡಿದ್ದಾರೆ. ಈ ಪ್ರತಿಷ್ಠಾನವು ಹಲವು ವರ್ಷಗಳಿಂದ ಮೃತದೇಹ ದಾನದ ಕುರಿತು ಜಾಗೃತಿ ಮೂಡಿಸುತ್ತಿದೆ. ದೇಹ ಮಣ್ಣಲ್ಲಿ ಮಣ್ಣಾಗುವ ಬದಲು ನಾಲ್ಕಾರು ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲಿದೆ ಎಂದು ವೈಜ್ಞಾನಿಕ ತಿಳಿವಳಿಕೆ ನೀಡುತ್ತಿದೆ. ಪ್ರತಿಷ್ಠಾನದ ಕಾರ್ಯದರ್ಶಿ ಡಾ| ಮಹಾಂತೇಶ ರಾಮಣ್ಣವರ್ ಅವರು ಆ ದೇಹವನ್ನು ಬೈಲಹೊಂಗಲದ ಎಸ್.ಜಿ.ವಿ. ಆರ್ಯುವೇದ ಕಾಲೇಜಿಗೆ ಹಸ್ತಾಂತರ ಮಾಡಿದ್ದಾರೆ.
ಕಿಮ್ಸ್‌ಗೆ ಮೃತದೇಹ ಬಂದಿದ್ದು ಹೇಗೆ?: ಕೊಪ್ಪಳ ಮೆಡಿಕಲ್ ಕಾಲೇಜಿನಲ್ಲಿ ಮೃತದೇಹದ ಕೊರತೆ ಇದೆ. ಎಂಸಿಐ ನಿಯಮದ ಪ್ರಕಾರ 10 ವಿದ್ಯಾರ್ಥಿಗಳಿಗೆ ಒಂದು ಮೃತದೇಹದ ಅಧ್ಯಯನಕ್ಕೆ ಬೇಕು. ಆದರೆ ಕಿಮ್ಸ್‌ನಲ್ಲಿ 5 ಮೃತದೇಹಗಳು ಮಾತ್ರ ಇವೆ. ಹಾಗಾಗಿ ವಿದ್ಯಾರ್ಥಿಗಳಿಗೆ ಮೃತದೇಹದ ಕೊರತೆಯಾದ ಕಾರಣ ಕಿಮ್ಸ್ ಬೈಲಹೊಂಗಲದ ಆರ್ಯುವೇದ ಕಾಲೇಜಿಗೆ ಹಾಗೂ ಪ್ರತಿಷ್ಠಾನವನ್ನು ಸಂಪರ್ಕಿಸಿ ಮೃತದೇಹ ದಾನಕ್ಕಾಗಿ ಮನವಿ ಮಾಡಿತ್ತು. ಕಿಮ್ಸ್‌ಗೆ ಸ್ವಾಮೀಜಿ ಅವರ ತಾಯಿ ಮೃತದೇಹವೇ ರವಾನೆಯಾಗಿರುವುದು ವಿಶೇಷವಾಗಿದೆ. ಅದು ಈ ಭಾಗದ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪುಣ್ಯವೇ ಸರಿ. ಮಂಗಳವಾರದಂದೇ ಮೃತದೇಹ ಆಗಮಿಸಿದ್ದು, ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಮೃತದೇಹಕ್ಕೆ ನಮನ ಸಲ್ಲಿಸಿ, ಅಂಗರಚನಾ ವಿಭಾಗಕ್ಕೆ ದೇಹವನ್ನು ರವಾನೆ ಮಾಡಲಾಗಿದೆ.
ಕಿಮ್ಸ್‌ಗೆ ಮೃತದೇಹಗಳ ಕೊರತೆಯಿತ್ತು. ಇದಕ್ಕಾಗಿ ಡಾ| ರಾಮಣ್ಣವರ್ ಪ್ರತಿಷ್ಠಾನವನ್ನು ಸಂಪರ್ಕಿಸಿದ್ದೆವು. ಅವರ ನೆರವಿನಿಂದ ಒಬ್ಬ ಸ್ವಾಮೀಜಿ ಅವರ ತಾಯಿಯ ಮೃತದೇಹವನ್ನು ಬೈಲಹೊಂಗಲದ ಆರ್ಯುವೇದ ಕಾಲೇಜಿನ ಮೂಲಕ ಕೊಪ್ಪಳ ಕಿಮ್ಸ್‌ಗೆ ಕಳುಹಿಸಿದ್ದಾರೆ. ದೇಹ ಮಣ್ಣಲ್ಲಿ ಮಣ್ಣಾಗುವ ಬದಲು ವಿದ್ಯಾರ್ಥಿಗಳ ಅಧ್ಯಯನಕ್ಕೆ ನೆರವಾಗತ್ತದೆ ಎಂದು ಸ್ವಾಮೀಜಿಗಳು ತಮ್ಮ ತಾಯಿ ದೇಹದಾನ ಮಾಡಿರುವುದು ಶ್ಲಾಘನೀಯ.
• ಡಾ| ಚನ್ನಬಸವನಗೌಡ,
ಕಿಮ್ಸ್ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥರು
ಈ ಹಿಂದೆ ಬನಹಟ್ಟಿಯಲ್ಲಿ ಮೃತದೇಹ ದಾನದ ಕುರಿತು ಉಪನ್ಯಾಸ ನೀಡಿ ಜಾಗೃತಿ ಮೂಡಿಸಿದ್ದೆ. ಅದರಿಂದ ಪ್ರೇರೇಪಿತರಾಗಿ ಮಹಾಂತ ದೇವರು ಸ್ವಾಮೀಜಿಗಳು ತಮ್ಮ ತಾಯಿಯ ಮೃತದೇಹ ದಾನ ಮಾಡಿದ್ದಾರೆ. ಅವರ ಒಪ್ಪಿಗೆ ಮೇರೆಗೆ ಬೈಲಹೊಂಗಲ ಕಾಲೇಜು ಮೂಲಕ ಕೊಪ್ಪಳ ಕಿಮ್ಸ್‌ಗೆ ರವಾನೆ ಮಾಡಿದ್ದೇವೆ. ಕಿಮ್ಸ್‌ನಲ್ಲಿ ತುಂಬ ಅವಶ್ಯವಿದ್ದ ಕಾರಣ ಅಲ್ಲಿಗೆ ರವಾನೆ ಮಾಡಿದ್ದೇವೆ. ಭಾವನಾತ್ಮಕತೆ ಬಿಟ್ಟು ತಮ್ಮ ದೇಹ ದಾನ ಮಾಡಲು ಮುಂದೆ ಬರಬೇಕು.
• ಡಾ| ಮಹಾಂತೇಶ ರಾಮಣ್ಣನವರ್,
ಡಾ| ರಾಮಣ್ಣವರ್ ಪ್ರತಿಷ್ಠಾನದ ಕಾರ್ಯದರ್ಶಿ, ಬೈಲಹೊಂಗಲ
•ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Pushpa 2: ಕಿಸಿಕ್ ಎಂದು ಕುಣಿದ ಶ್ರೀಲೀಲಾ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.