![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 25, 2020, 5:45 PM IST
ಸಾಂದರ್ಭಿಕ ಚಿತ್ರ
ಕಾರಟಗಿ: ತಮಿಳುನಾಡಿನ ಲಾರಿಗಳು ಕಾರಟಗಿ ಪಟ್ಟಣಕ್ಕೆ ಬಂದರೆ ಯಾರೂ ಭಯ ಪಡಬಾರದು ಎಂದು ತಹಶೀಲ್ದಾರ್ ಕವಿತಾ ಆರ್. ಹೇಳಿದರು.
ಮಂಗಳವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಹೊರ ರಾಜ್ಯಗಳಿಗೆ ಭತ್ತ ಸಾಗಾಟಕ್ಕೆ ಪರವಾನಗಿ ನೀಡಿದ ಹಿನ್ನೆಲೆಯಲ್ಲಿ ತಾಲೂಕಿನಿಂದ ಭತ್ತ ಸಾಗಾಟ ನಡೆದಿತ್ತು. ಆದರೆ ಇತ್ತೀಚೆಗೆ ಕೆಲ ದಿನಗಳ ಹಿಂದೆ ದಲಾಲಿ ವರ್ತಕರು ತಮಿಳುನಾಡಿನಿಂದ ಬರುವ ಲಾರಿ ಚಾಲಕರಿಂದ ಕೋವಿಡ್ 19 ಸೋಂಕು ಹರಡಬಹುದೆಂಬ ಆತಂಕದಿಂದ ಎಲ್ಲ ವರ್ತಕರು ತಮಿಳುನಾಡಿಗೆ ಭತ್ತ ಸಾಗಾಟ ಸ್ಥಗಿತಗೊಳಿಸಿದ್ದರು. ಆದರೆ ಇದರಿಂದಾಗಿ ಭತ್ತ ಖರೀದಿ ಗೆ ಹಿನ್ನಡೆಯಾಗಬಹುದು. ಆ ನಿಟ್ಟಿನಲ್ಲಿ ತಾಲೂಕಾಡಳಿತ ತಮಿಳುನಾಡಿಗೆ ಭತ್ತ ಸಾಗಾಟ ಮುಂದುವರಿಸಲು ಆದೇಶಿಸಿದೆ. ಚೆಕ್‌ಪೋಸ್ಟ್‌ನಲ್ಲಿ ತಮಿಳುನಾಡಿನಿಂದ ಬರುವ, ಹೋಗುವ ಲಾರಿ ಚಾಲಕರ ತಪಾಸಣೆ ನಡೆಸಿ ಮುಂದೆ ತಲುಪುವ ನಗರಕ್ಕೆ ತೆರಳಲು ಪರವಾನಗಿ ನೀಡಲಾಗುತ್ತದೆ. ಆದ್ದರಿಂದ ಕಾರಟಗಿ ಪಟ್ಟಣಕ್ಕೆ ಬರುವ ಲಾರಿಗಳ ಚಾಲಕರನ್ನು ಕಂಡು ಭಯಪಡಬೇಡಿ. ವರ್ತಕರು, ಸಾರ್ವಜನಿಕರು ಕೂಡ ಕೋವಿಡ್ 19 ವೈರಸ್ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದರು.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
You seem to have an Ad Blocker on.
To continue reading, please turn it off or whitelist Udayavani.