ದೋಟಿಹಾಳ: ಅಧಿಕಾರಿಗಳ ನಡೆಗೆ ಸದಸ್ಯರ ಅಸಮಾಧಾನ; ಗ್ರಾಮದ ಕಾಮಗಾರಿಗೆ ಏಕಿಲ್ಲ ಅನುಮೋದನೆ
ಅಭಿವೃದ್ಧಿಗೆ ಸಹಕಾರ ನೀಡುವಂತೆ ಸದಸ್ಯರ ಮನವಿ
Team Udayavani, Oct 29, 2022, 10:24 AM IST
ದೋಟಿಹಾಳ: ತಾಲೂಕಿನ ಗ್ರಾಮ ಪಂಚಾಯತ್‌ಗೆ ಒಂದು ನಿಯಮ. ನಮ್ಮ ಗ್ರಾಮ ಪಂಚಾಯತ್‌ಗೆ ಒಂದು ನಿಯಮ. ಇದು ಯಾವು ನ್ಯಾಯ? ಎಂದು ಗ್ರಾ. ಪಂ. ಸದಸ್ಯರು ಸಾಮಾನ್ಯ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ದೋಟಿಹಾಳ ಗ್ರಾಮದ ಪಂಚಾಯತ್‌ನಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ವೇಳೆ ಸದಸ್ಯರು ಮಾತನಾಡಿ, ನಾವು ಗ್ರಾಪಂ ಸದಸ್ಯರಾಗಿ ಎರಡು ವರ್ಷ ಕಳೆದರೂ ಗ್ರಾಮದಲ್ಲಿ ಒಂದು ಕಾಮಗಾರಿಗಳು ಮಾಡಿಲ್ಲ. ಗ್ರಾಮದಲ್ಲಿ ಸಮಸ್ಯೆಗಳಿಂದ ಜನರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇವುಗಳ ಪರಿಹಾರಕ್ಕಾಗಿ ಕ್ರೀಯ ಯೋಜನೆಗಳನ್ನು ಸಿದ್ದಪಡಿಸಿ ಕಳಿಸಿದರೆ ಜಿ.ಪಂ. ಹಿರಿಯ ಅಧಿಕಾರಿಗಳು ನಮ್ಮ ಕಾಮಗಾರಿಗೆ ಅನುಮೋದನೆ ನೀಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಉಳಿದ ಗ್ರಾಮ ಪಂಚಾಯತ್ ಗಳಿಗೆ ಕೋಟಿಗಟ್ಟಲೆ ಕಾಮಗಾರಿಗಳಿಗೆ ಅನುಮೋದನೆ ನೀಡುವ ಅಧಿಕಾರಿಗಳು ನಮ್ಮ ಗ್ರಾ.ಪಂ. ಕಾಮಗಾರಿಗಳಿಗೆ ಯಾಕೆ ಅನುಮೋದನೆ ನೀಡುತ್ತಿಲ್ಲ ಎಂದು ಸದಸ್ಯರು ಪಿಡಿಒ ಅವರನ್ನು ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಪಿಡಿಒ ಮುತ್ತಪ್ಪ ಛಲವಾದಿ, ನಿಮ್ಮ ಕಾಮಗಾರಿಗಳ ಹಾಗೂ ಸಮಸ್ಯೆಗಳ ಬಗ್ಗೆ ನಾನು ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದೇನೆ ಆದರೆ ಅವರು ಯಾಕೆ ಅನುಮೋದನೆ ನೀಡುತ್ತಿಲ್ಲ ಎಂಬುದು ನನಗೂ ಗೊತ್ತಿಲ್ಲ ಎಂದು ಹೇಳಿದರು.
ಕೆಲವು ಸದಸ್ಯರು ಸಭೆಯಲ್ಲಿ ಮಾತನಾಡಿ, ಜಿಲ್ಲಾ ಪಂಚಾಯತ್ ಅಧಿಕಾರಿಗಳು ನಮ್ಮ ಗ್ರಾ.ಪಂ. ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ. ಗ್ರಾಮದ ಅಭಿವೃದ್ಧಿಗಾಗಿ ಅನೇಕ ಕ್ರಿಯಾಯೋಜನೆಗಳ ಸಿದ್ಧಪಡಿಸಿಕೊಂಡಿದ್ದರು. ಅವುಗಳಿಗೆ ಅಧಿಕಾರಿಗಳು ಅನುಮೋದನೆ ನೀಡುತ್ತಿಲ್ಲ. ಜೆಜೆಎಂ ಕುಡಿಯುವ ನೀರಿನ ಪೈಪ್ಲೈನ್ ಹೆಸರಿನಲ್ಲಿ ಗ್ರಾಮದ ಬಹುತೇಕ ಎಲ್ಲಾ ಸಿಸಿ ರಸ್ತೆಗಳನ್ನು ಹಾಳು ಮಾಡಿ ಒಂದು ವರ್ಷ ಕಳೆದರೂ ಅದನ್ನು ಇನ್ನೂ ಸರಿಪಡಿಸಲಾಗಿಲ್ಲ ಎಂದರು.
ಈ ಬಗ್ಗೆ ಹಲವಾರು ಬಾರಿ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ರಸ್ತೆ ಹಾಳಗಿ 8-10 ಜನ ಬೈಕ್ ಸವಾರರು ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಇದರ ಬಗ್ಗೆ ಗ್ರಾಮಸ್ಥರು ಊರಿನಲ್ಲಿ ಗ್ರಾ.ಪಂ. ಸದಸ್ಯರಿಗೆ ಚೀಮಾರಿ ಹಾಕುತ್ತಿದ್ದಾರೆ. ಇಷ್ಟಾದರೂ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಯಾಕೆ ಎಂದು ಸದಸ್ಯರು ಆರೋಪಿಸಿದರು.
ಕೂಡಲೇ ಜೆಜೆಎಂ ಕಾಮಗಾರಿಯ ಬಗ್ಗೆ ಕಠಿಣ ಕ್ರಮ ಕೈಗೊಳ್ಳಿ ವಿಫಲವಾದರೆ ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರು ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಸದಸ್ಯರು ಎಚ್ಚರಿಕೆ ನೀಡಿದರು.
ಪಿಡಿಒ ಮತ್ತು ಹಿರಿಯ ಅಧಿಕಾರಿಗಳ ನಡೆಯನ್ನು ಖಂಡಿಸಿದ ಗ್ರಾ.ಪಂ. ಸದಸ್ಯರೊಬ್ಬರು ಸಭೆಯಿಂದ ಅರ್ಧಕ್ಕೆ ಎದ್ದು ಹೊರಟು ಹೋದರು.
ಇದೇ ವೇಳೆ 2020-21 ಸಾಲಿನಲ್ಲಿ ಅಮರೇಶ್ವರ ಟ್ರೇಡರ್ಸ್ ಅವರಿಗೆ 4 ಲಕ್ಷ ರೂ. ಗಳ ಬಾಕಿಯಲ್ಲಿ 3 ಲಕ್ಷ ರೂ.ಗಳನ್ನು ನೀಡಿದ್ದೇವೆ. ಆ ನಂತರ ಆ ಅಂಗಡಿಯಲ್ಲಿ ಯಾವುದೇ ಸಾಮಾಗ್ರಿಗಳನ್ನು ಖರೀದಿ ಮಾಡಿಲ್ಲ. ಹೀಗಿರುವಾಗ ಮತ್ತೆ ಹೀಗೆ 4 ಲಕ್ಷ ರೂ. ಗಳ ಬಾಕಿ ಇದೆ ಎಂದು ಹೇಳುವುದು ಯಾವ ನ್ಯಾಯ ಎಂದ ಅವರು, ಇದರ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ತಿಳಿಸಿದರು.
ಗ್ರಾಮದಲ್ಲಿ ಸ್ವಚ್ಛತೆಯ ಬಗ್ಗೆ ಗ್ರಾ.ಪಂ. ಸಿಬ್ಬಂದಿಗಳ, ಗ್ರಂಥಾಲಯ ಬಗ್ಗೆ ಹಾಗೂ ಸಾರ್ವಜನಿಕರಿಂದ ಬಂದ ಅರ್ಜಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಲಕ್ಷ್ಮವ್ವ ಹನುಮಪ್ಪ ಕುಷ್ಟಗಿ ವಹಿಸಿದ್ದರು. ಸದಸ್ಯರು ಹಾಗೂ ಗ್ರಾ.ಪಂ. ಸಿಬ್ಬಂದಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.