ಶೌಚಾಲಯಕ್ಕಾಗಿ ಅಲೆದು ಸುಸ್ತಾದ ಶಿಕ್ಷಕ : ಶಾಲಾ ಮಕ್ಕಳಿಗೆ ಮೂತ್ರ ವಿಸರ್ಜನೆಗೆ ಬಯಲೇ ಗತಿ
ಶೌಚಾಲಯ ಕಟ್ಟಿಸಲು ಮುಂದಾಗದ ಗ್ರಾಪಂ ಇಲಾಖೆ.
Team Udayavani, Aug 6, 2022, 8:14 AM IST
ದೋಟಿಹಾಳ: ಸಾರ್ವಜನಿಕರು ಪತ್ರಿ ಒಬ್ಬರು ವೈಯಕ್ತಿಕ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಿ. ನಮ್ಮ ದೇಶ, ರಾಜ್ಯ ಮತ್ತು ಜಿಲ್ಲೇಯನ್ನು ಬಯಲು ಮುಕ್ತ ಶೌಚಾಲಯನಾಗಿ ಮಾಡೋಣ ಎಂದು ಘೋಷಣೆ ಮಾಡುವ ಅಧಿಕಾರಿಗಳೇ ಇತ್ತ ಕಡೆ ಗಮನಹರಿಸಿ ಈ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿರ ಗೊಳ್ಳು ಕೇಳಿ…!!
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಶಿರಗುಂಪಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಶಾಲಾ ಮಕ್ಕಳಿಗೆ ಬಯಲೇ ಶೌಚಾಲಯವಾಗಿದೆ. ಈ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಒಟ್ಟು 205 ಮಕ್ಕಳು ಓದುತ್ತಿದ್ದಾರೆ. 7ಜನ ಶಿಕ್ಷಕರೂ ಇದ್ದಾರೆ. ಇದರಲ್ಲಿ 4ಜನ ಶಿಕ್ಷಕರಿಯರು ಇದ್ದಾರೆ. 100ಕ್ಕೂ ಹೆಚ್ಚು ವಿದ್ಯಾರ್ಥಿನಿರು ಇದ್ದಾರೆ. ಆದರೆ ಶಾಲೆಯಲ್ಲಿ ಮೂತ್ರ ವಿಸರ್ಜನೆಗೆ ವ್ಯವಸ್ಥೆ ಇಲ್ಲದೇ ಇರುವುದರಿಂದ ಇಲ್ಲಿಯ ಮಕ್ಕಳು ಅನಿವರ‍್ಯವಾಗಿ ಬಯಲಿಗೆ ಹೋಗಬೇಕು. ಆದರೆ ಈ ಶಾಲೆಯ ವಿದ್ಯಾರ್ಥಿನಿಯರ ಪಾಡು ಹೇಳತ್ತಿರದು.
ಹೆಣ್ಣು ಮಕ್ಕಳಿಗೂ ಸಮಸ್ಯೆ: ಶಾಲೆಯಲ್ಲಿ 1 ರಿಂದ 7 ನೇ ತರಗತಿಯವರೆಗೆ ಒಟ್ಟು 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿನಿಯರಿಗೆ ಶೌಚಾಲಯಗಳ ಸಮಸ್ಯೆ ಇದೆ. ಇವರು ಶೌಚಾಲಯಕ್ಕೆ ಹೋಗಬೇಕಾದರೆ ಮನೆ ಹೋಗಿ ಬರುತ್ತಾರೆ. ಇದೊಂದು ದುರದೃಷ್ಟಕರ ಸಂಗತಿ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾರ್ವಜನಿಕರ ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಸಾರ್ವಜನಿಕರಿಗೆ ಹೇಳುತ್ತಾರೆ. ಆದರೆ ಈ ಶಾಲೆಯಲ್ಲಿ ಶೌಚಾಲಯ ಇಲ್ಲದೆ ಇರುವುದರಿಂದ ಇಲ್ಲಿಯ ವಿದ್ಯಾರ್ಥಿನಿಯರಿಗೆ ಮತ್ತು ಶಿಕ್ಷಕಿಯರ ತೊಂದರೆಗಳು ಅನುಭವಿಸುತ್ತಿದ್ದಾರೆ. ಇದು ಒಂದು ಗೌರವದ ಪ್ರಶ್ನೆಯಾಗಿದೆ.
ಶಾಲೆಗೆ ಒಂದು ಶೌಚಾಲಯ ಕಟ್ಟಿಸಿ ಕೊಡಿ ಎಂದು ಶಾಲೆಯ ಮುಖ್ಯೋಪಾದ್ಯರು ಗ್ರಾಪಂಗೆ ಕಳೆದ ಒಂದು ವರ್ಷದಿಂದ ಸುಮಾರು 4-5 ಪತ್ರಗಳು ಬರೆದು ಅಲೆದಾಡುತ್ತಿದ್ದಾರೆ ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಶಾಲೆಯ ವಿದ್ಯಾರ್ಥಿನಿಯರೇ ಗ್ರಾಮ ಪಂಚಾಯಿತಿಗೆ ಹೋಗಿ ನಮ್ಮ ಶಾಲೆಗೊಂದು ಶೌಚಾಲಯ ಕಟ್ಟಿಸಿ ಕೂಡಿ ಎಂದು ಕೇಳುವರ ಮಟ್ಟಿಗೆ ಇಲ್ಲಿಯ ಗ್ರಾಪಂ ಅಧಿಕಾರಿಗಳು ಇದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇತ್ತ ಕಡೆಗೆ ಗಮನಹರಿಸುತ್ತಿಲ.್ಲ ಇದರ ಬಗ್ಗೆ ವಿಚಾರಿಸಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂಬ ಹಾರೈಕೆ ಉತ್ತರ ಮಾತ್ರ ನೀಡುತ್ತಾರೆ. ಹೀಗಾಗಿ ಕಳೆದ 2-3 ವರ್ಷದಿಂದ ಇಲ್ಲಿಯ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಶಾಲೆಯಲ್ಲಿ ಶೌಚಾಲಯ ಇಲ್ಲದ ಕಾರಣ ನರಕಾಯಾತನೆ ಪಡುತ್ತಿದ್ದಾರೆ.
ಜಿಲ್ಲಾ ಪಂಚಾಯಿತಿಯ ಸಿಇಓ ಒಬ್ಬ ಮಹಿಳೆಯಾಗಿದ್ದು ಈ ಶಾಲೆಯ ವಿದ್ಯಾರ್ಥಿನಿಯರ ಕಷ್ಟವನ್ನು ಕೇಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ. ಅವರು ಕುಷ್ಟಗಿ ತಾಲೂಕಿನ ಅನೇಕ ಗ್ರಾಪಂಗಳಿಗೆ ಭೇಟಿ ನೀಡಿದ್ದಾರೆ. ಆದರೆ ಈ ಭಾಗದ ಗ್ರಾಪಂಗಳಿಗೆ ಒಮ್ಮೆ ಭೇಟಿ ನೀಡಿಲ.್ಲ ಇನ್ನಾದರೂ ಈ ಕಡೆ ಭೇಟಿ ನೀಡಿ ಇಂಥ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬುವುದು ಪ್ರಜ್ಞಾವಂತರ ಕಳಕಳಿಯಾಗಿದೆ.
ಶಾಲೆಯಲ್ಲಿ ಶೌಚಾಲಯದ ಸಮಸ್ಯೆ ಇದೆ. ಇದರ ಬಗ್ಗೆ ಕಳೆದ 1-2 ವರ್ಷಗಳಿಂದ ಗ್ರಾಪಂ ಇಲಾಖೆಗೆ ಶೌಚಾಲಯ ಕಟ್ಟಿಸಿ ಕೊಡಿ ಎಂದು 4-5 ಬಾರಿ ಮನವಿ ಪತ್ರ ಸಲಿಸಿದರು ಯಾವುದೇ ಪ್ರಯೋಜನವಾಗಿಲ್ಲ, ಗ್ರಾಪಂ ಕಚೇರಿಗೆ ಅಲೇದಾಡಿ ಸಾಕಾಗಿದೆ.
– ಶಿವಪ್ಪ. ಬಿ ಮುಖ್ಯೋಪಾಧ್ಯಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿರಗುಂಪಿ.
ಈಲ್ಲೆಯ ಯಾವು ಶಾಲೆಗಳಲ್ಲಿ ಶೌಚಾಲಯಗಳು ಇಲ್ಲ. ಅಂತ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲು ತಿಳಿಸಲಾಗಿದೆ. ಆದರೆ ಶಿರಗುಂಪಿ ಪ್ರಾಥಮಿಕ ಶಾಲೆಗೆ ಇನ್ನೂ ಶೌಚಾಲಯ ನಿರ್ಮಿಸಿಲ್ಲ ಎಂದರೆ ಕೂಡಲೇ ಶೌಚಾಲಯ ನಿರ್ಮಿಸಲು ಕ್ರಮಕೈಗೋಳ್ಳುತ್ತೇವೆ
– ಬಿ. ಫೌಜಿಯಾ ತರನ್ನುಮ್. ಜಿಪಂ ಸಿಇಒ ಕೊಪ್ಪಳ.
– ಮಲ್ಲಿಕಾರ್ಜುನ ಮೆದಿಕೇರಿ. ದೋಟಿಹಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Transport: ಕೆಎಸ್ಸಾರ್ಟಿಸಿ ದಾಖಲೆ: ಒಂದೇ ದಿನ 1.23 ಕೋಟಿ ಮಂದಿ ಪ್ರಯಾಣ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.