ಡಾ| ರಾಜಕುಮಾರ ಭಾರತೀಯ ಚಿತ್ರರಂಗ ಕಂಡ ಅದ್ಬುತ ನಟ
ನೆಲ, ಜಲ, ಭಾಷೆಗಾಗಿ ಅವಿರತವಾಗಿ ಶ್ರಮಿಸಿದ ಮಹಾನ್ ಕನ್ನಡ ಪ್ರೇಮಿ
Team Udayavani, Apr 25, 2022, 11:37 AM IST
ಕಾರಟಗಿ: ಡಾ| ರಾಜಕುಮಾರ ಅಭಿಮಾನಿಗಳ ಸಂಘದಿಂದ ಕರ್ನಾಟಕ ರತ್ನ, ಪದ್ಮಭೂಷಣ ಡಾ| ರಾಜಕುಮಾರ ಜನ್ಮದಿನವನ್ನು ರವಿವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಡಾ| ರಾಜಕುಮಾರ ಕಲಾ ಮಂದಿರದಲ್ಲಿ ಡಾ| ರಾಜ್ ಅಭಿಮಾನಿ ಸಂಘದಿಂದ ಆಯೋಜಿಸಲಾದ ಈ ಸಮಾರಂಭದಲ್ಲಿ ವರನಟ ಡಾ| ರಾಜಕುಮಾರ ಹಾಗೂ ಪವರ್ ಸ್ಟಾರ್ ಪುನೀತರಾಜಕುಮಾರ್ ಭಾವಚಿತ್ರಕ್ಕೆ ಅರ್ಚಕ ಮುತ್ತುಸ್ವಾಮಿ ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು.
ನಂತರ ನೆರೆದಿದ್ದ ಅಭಿಮಾನಿಗಳು ಇಬ್ಬರು ಮಹನೀಯರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಅಭಿಮಾನಿಗಳಿಗೆ ಸಿಹಿ ಹಂಚಿದ್ದಲ್ಲದೇ ಸ್ಥಳೀಯ ಕಡು ಬಡವರಾದ ದಂಪತಿಗೆ ಬಟ್ಟೆ ವಿತರಿಸಿದರು.
ಡಾ| ರಾಜ್ ಅಭಿಮಾನಿ ಸಂಘದ ಗೌರವಾಧ್ಯಕ್ಷ ಮಹಾರುದ್ರಯ್ಯ ಸ್ವಾಮಿ ಮಾತನಾಡಿ, ಡಾ| ರಾಜಕುಮಾರ ಕನ್ನಡ ಚಲನಚಿತ್ರರಂಗ ಕಂಡ ಅದ್ಭುತ ನಟ. ಅವರು ಬರೀ ನಟರಷ್ಟೇ ಅಲ್ಲ ರಾಜ್ಯದ ನೆಲ, ಜಲ, ಭಾಷೆಗಾಗಿ ಅವಿರತವಾಗಿ ಶ್ರಮಿಸಿದ ಮಹಾನ್ ಕನ್ನಡ ಪ್ರೇಮಿ ಮತ್ತು ಹೋರಾಟಗಾರರು ಹೌದು. ಸುಮಾರು ಐವತ್ತು ವರ್ಷಗಳ ಕಾಲ ಸುಮಾರು 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ಕೋಟ್ಯಂತರ ಕಲಾಪ್ರೇಮಿಗಳ ಹೃದಯ ಗೆದ್ದಿದ್ದರು. ತಮ್ಮ ಚಿತ್ರಗಳ ಮೂಲಕ ಬರೀ ಮನರಂಜನೆ ನೀಡದೇ ಸಾಮಾಜಿಕ ಮೌಲ್ಯಗಳನ್ನು ಸಾರಿದ್ದು, ಅವರ ಚಿತ್ರ ಜೀವನದ ವಿಶೇಷವಾಗಿತ್ತು. ಇಷ್ಟಲ್ಲದೇ ಇತ್ತೀಚಿಗೆ ತಾನೇ ತೀರಿಕೊಂಡ ಅವರ ಕೊನೆಯ ಪುತ್ರ ಕೂಡ ಅಭಿಜಾತ ಕಲಾವಿದರಾಗಿದ್ದರು. ಜೊತೆಗೆ ಅಂಧ, ಅನಾಥ ಮಕ್ಕಳ ಶಿಕ್ಷಣಕ್ಕೆ, ಗೋಶಾಲೆಗಳಿಗೆ ಕೋಟ್ಯಂತರ ರೂಪಾಯಿ ದಾನ ನೀಡಿದ್ದರು. ಇದಕ್ಕೆಲ್ಲ ಸ್ಫೂರ್ತಿ ವರನಟ ಡಾ| ರಾಜಕುಮಾರ ಆಗಿದ್ದರು ಎಂದರು.
ನಂತರ ಶಿಕ್ಷಕ ಸೂಗುರೇಶ ಬಪ್ಪೂರು ಮಾತನಾಡಿ, ಆರು ಕೋಟಿ ಕನ್ನಡಿಗರ ಆರಾಧ್ಯ ದೈವ ಡಾ| ರಾಜಕುಮಾರ ಅವರು ಈ ನಾಡಿಗೆ ನೀಡಿದ ಕೊಡುಗೆ ಅನುಪಮವಾದುದು. ಅವರು ಬರೀ ಚಿತ್ರರಂಗಕ್ಕೆ ಮಾತ್ರ ಸೇವೆ ಸಲ್ಲಿಸಲಿಲ್ಲ. ನಾಡು-ನುಡಿಗೆ ಧಕ್ಕೆ ಬಂದಾಗ ಬೀದಿಗೆ ಇಳಿದು ಹೋರಾಡಿದರು. ಅವರ ಆದರ್ಶ, ತತ್ವಗಳನ್ನು ಇಂದಿನ ಯುವ ಪೀಳಿಗೆ ಅನುಸರಿಸಬೇಕು. ಆ ಮೂಲಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದರು.
ಡಾ| ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ಮಹಾರುದ್ರಯ್ಯಸ್ವಾಮಿ, ಅಧ್ಯಕ್ಷ ಯಮನೂರಪ್ಪ ಬೇವಿನಾಳ, ನಾಗರಾಜ್ ಬಾಂಢೆ ಅಂಗಡಿ, ವೆಂಕಟೇಶ ಮೂಲಿಮನಿ, ವೆಂಕಟೇಶ ಭೋವಿ, ಅರ್ಜುನ ಸಿಂಗ್, ಖಾಜಾಸಾಬ್ ಪೇಂಟರ್, ವೆಂಕಟೇಶ ಚಿತ್ರಬರಹಗಾರರು, ತಿಪ್ಪಣ್ಣ ಮೂಲಿಮನಿ, ರಾಘವೇಂದ್ರ ಹಡಪದ್, ಕೃಷ್ಣಯ್ಯಶ್ರೇಷ್ಠಿ ಇನ್ನಿತರರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್ ವೆಲ್
ಉದ್ಘಾಟನೆ ಭಾಗ್ಯ ನಿರೀಕ್ಷೆಯಲ್ಲಿ ಅಂಗನವಾಡಿ:4 ಕೇಂದ್ರಗಳು ಬಾಡಿಗೆ ಮನೆಯಲ್ಲಿ ಕಾರ್ಯನಿರ್ವಹಣೆ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.