ದಾಸವರೇಣ್ಯ ವಿಜಯದಾಸರು ಸಿನೆಮಾ ಚಿತ್ರೀಕರಣಕ್ಕೆ ಚಾಲನೆ
Team Udayavani, Feb 22, 2022, 12:26 PM IST
ಗಂಗಾವತಿ: ನಗರದ ಹಿರೇಜಂತಕಲ್ ಶ್ರೀ ಪ್ರಸನ್ನ ಪಂಪಾ ವಿರುಪಾಕ್ಷೇಶ್ವರ ಪುರಾತನ ದೇವಸ್ಥಾನದಲ್ಲಿ ದಾಸ ವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಚಿತ್ರೀಕರಣಕ್ಕೆ ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್ ಹಾಗೂ ಆನೆಗುಂದಿಯ ರಾಜವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು ಮಂಗಳವಾರ ಬೆಳಿಗ್ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಎಚ್. ಆರ್. ಶ್ರೀನಾಥ್ ಮಾತನಾಡಿ ಅಖಂಡ ರಾಯಚೂರು ಕೊಪ್ಪಳ ಜಿಲ್ಲೆ ದಾಸಸಾಹಿತ್ಯ ಕೀರ್ತನೆಗಳಿಗೆ ಖ್ಯಾತಿಯನ್ನು ಪಡೆದಿದೆ ಹೆಚ್ಚು ದಾಸಪರಂಪರೆಯ ಅನುಕರಣೆ ಮಾಡುವ ಜನರು ಇಲ್ಲಿದ್ದಾರೆ . ವ್ಯಾಸರಾಯ (ರಾಜ ) ವ್ಯಾಸರಾಯ ರಾಜ ರಲ್ಲಿ ಶಿಷ್ಯತ್ವವನ್ನು ಪಡೆದ ಕನಕದಾಸರು ಪುರಂದರದಾಸರು ಸೇರಿದಂತೆ ಅನೇಕ ದಾಸಕೂಟ ಮತ್ತು ವ್ಯಾಸಕೂಟ ಸದಸ್ಯರು ಇಲ್ಲಿಯ ಪರಂಪರೆ ಶ್ರೀಮಂತಗೊಳ್ಳಲು ಕಾರಣರಾಗಿದ್ದಾರೆ .ಜಗನ್ನಾಥರು ಸಿನೆಮಾ ಯಶಸ್ವಿಯಾದ ನಂತರ ಇದೀಗ ಇದೇ ತಂಡ ದಾಸವರೇಣ್ಯ ಶ್ರೀ ವಿಜಯದಾಸರು ಎನ್ನುವ ಸಿನಿಮಾ ತಯಾರು ಮಾಡುತ್ತಿದ್ದು ಈ ಸಿನಿಮಾದಲ್ಲಿ ವಿಜಯದಾಸರ ಜೀವನ ಹಾಗೂ ಕೀರ್ತನೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಗಿದೆ .ಜಗನ್ನಾಥ ಸಿನಿಮಾದಂತೆ ವಿಜಯದಾಸರು ಸಿನಿಮಾ ಸಹ ಚೆನ್ನಾಗಿ ಓಡಲಿ ಕನ್ನಡ ಸಾಹಿತ್ಯ ಶ್ರೀಮಂತ ಗೊಳಿಸಿದ ದಾಸಪರಂಪರೆಯನ್ನು ನಾವೆಲ್ಲೂ ಬೆಂಬಲಿಸಬೇಕಾದರೆ ಈ ಸಿನಿಮಾವನ್ನು ನೋಡಬೇಕು ಎಂದರು.
ಈ ಸಂದರ್ಭದಲ್ಲಿ ಸಿನೆಮಾ ನಿರ್ದೇಶಕ ಜಗನ್ನಾಥ್ ಹವಲ್ದಾರ್ ವಿಜಯದಾಸರು ಪಾತ್ರಧಾರಿ ತ್ರಿವಿಕ್ರಮ ಜೋಶಿ ಯುವ ಮುಖಂಡ ಎಚ್ ಆರ್ ಭರತ್, ಮಂಜುನಾಥ್ ಕುಲಾಲ್ ,ಪತ್ರಕರ್ತರಾದ ರಾಮಮೂರ್ತಿ ನವಲಿ, ಇಂಗಳಗಿ ನಾಗರಾಜ್ ,ಹರೀಶ್ ಕುಲಕರ್ಣಿ, ಸಿ ಮಹಾಲಕ್ಷ್ಮಿ ಸೇರಿದಂತೆ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.