ದುರುಗಮ್ಮನಹಳ್ಳ ಕಾಯಕಲ್ಪ ಅಂತಿಮ ಹಂತಕ್ಕೆ
•ನಮ್ಮೂರು ನಮ್ಮ ಹಳ್ಳ ಸಮಿತಿಗೆ ಉತ್ತಮ ಸ್ಪಂದನೆ•ಜಿಲ್ಲಾಧಿಕಾರಿಗಳ ಮಾರ್ಗದರ್ಶನಕ್ಕೆ ಸಿಕ್ಕಿತು ಫಲ
Team Udayavani, Jul 1, 2019, 10:36 AM IST
ಗಂಗಾವತಿ: ಹಳ್ಳ ಹೂಳೆತ್ತುವ ಕಾರ್ಯವನ್ನು ವೀಕ್ಷಿಸಿದ ಶಾಸಕ ಪರಣ್ಣ ಮುನವಳ್ಳಿ.
ಗಂಗಾವತಿ: ನಗರದ ಮಧ್ಯೆ ಭಾಗದಲ್ಲಿರುವ ದುರುಗಮ್ಮನಹಳ್ಳದ ಕಾಯಕಲ್ಪ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ನಮ್ಮೂರು ನಮ್ಮ ಹಳ್ಳ ಸ್ವಚ್ಛತಾ ಸಮಿತಿಯ ಶ್ರಮ ಇದೀಗ ಸಾರ್ಥಕವಾಗುತ್ತಿದೆ. ನಗರದ ಎಸ್‌ಬಿಐ ಬ್ಯಾಂಕ್‌ನಿಂದ ಗುಂಡಮ್ಮನಕ್ಯಾಂಪ್ ಬಾಲಾಜಿ ಗ್ಯಾಜ್ ಕಂಪನಿವರೆಗೆ ಇಡೀ ಹಳ್ಳವನ್ನು ಸ್ವಚ್ಛಗೊಳಿಸುವ ಜತೆಗೆ ಇದೇ ಪ್ರಥಮಬಾರಿ ಹೂಳು ತೆಗೆದು ಸುಂದರವಾಗಿಸಲಾಗಿದೆ. ದುರುಗಮ್ಮನಹಳ್ಳವೋ ಚರಂಡಿಯೋ ಎಂದು ಅನುಮಾನ ಮೂಡಿಸುತ್ತಿದ್ದ ಹಳ್ಳ ಇದೀಗ ಘನತ್ಯಾಜ್ಯ, ನಗರದ ಕಸವನ್ನು ಸ್ವಚ್ಛಗೊಳಿಸಿ ಸುಂದರವಾಗಿ ಕಾಣುವಂತೆ ಮಾಡಲಾಗಿದೆ.
ಹಳ್ಳಕ್ಕೆ ಸಂತೆಯಲ್ಲಿ ಉಳಿದ, ಕೊಳೆತ ತರಕಾರಿ ಮತ್ತು ಹೋಟೆಲ್ನಲ್ಲಿ ಉಳಿದ ಆಹಾರ ಸುರಿಯುವ ಮೂಲಕ ಚರಂಡಿಯನ್ನಾಗಿಸಿದ ಪರಿಣಾಮ ಇಡೀ ದುರುಗಮ್ಮನಹಳ್ಳ ಗಬ್ಬೆದ್ದು ನಾರುತ್ತಿತ್ತು. ಹಳ್ಳದ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ಮೂಗು ಮುಚ್ಚಿಕೊಂಡು ಹೋಗುವಂತಹ ಸ್ಥಿತಿಯುಂಟಾಗಿತ್ತು. ಜತೆಗೆ ಪೌರಕಾರ್ಮಿಕರು ನಗರದಲ್ಲಿ ಉತ್ಪಾದನೆಯಾಗುತ್ತಿದ್ದ ಹಸಿ ಮತ್ತು ಒಣ ತ್ಯಾಜ್ಯವನ್ನು ಹಳ್ಳಕ್ಕೆ ಸುರಿದು ಬೆಂಕಿ ಹಚ್ಚುತ್ತಿದ್ದರು. ಈ ಗಾಳಿಯನ್ನು ಸೇವಿಸುವ ಜನರಿಗೆ ಅಲರ್ಜಿ, ಅಸ್ತಮಾ ಸೇರಿ ಉಸಿರಿನ ತೊಂದರೆಯಾಗುತ್ತಿತ್ತು. ಈ ಎಲ್ಲಾ ಸಮಸ್ಯೆಗಳ ಕುರಿತು ‘ಉದಯವಾಣಿ’ ಪತ್ರಿಕೆಯಲ್ಲಿ ವರದಿ ಪ್ರಕಟಿಸಿತ್ತು.
ನಂತರ ಎಚ್ಚೆತ್ತ ಡಾ| ಶಿವಕುಮಾರ ಮಾಲೀಪಾಟೀಲ್ ನೇತೃತ್ವದ ನಮ್ಮೂರು ನಮ್ಮ ಹಳ್ಳ ಸ್ವಚ್ಛತಾ ಸಮಿತಿ ಸದಸ್ಯರು ಹಳ್ಳ ಸ್ವಚ್ಛತೆ ಬಗ್ಗೆ ಆಗಾಗ ಸಭೆ ನಡೆಸಿ, ವಿವಿಧ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳ, ವೈದ್ಯರ ಸಹಕಾರದಿಂದ ಹಳ್ಳದಲ್ಲಿದ್ದ ಕಸ, ಪ್ಲಾಸ್ಟಿಕ್ ವಿವಿಧ ಅಪಾಯಕಾರಿ ಘನತ್ಯಾಜ್ಯವನ್ನು ನಗರಸಭೆಯ ಸ್ವಚ್ಛತಾ ಸಿಬ್ಬಂದಿ ನೆರವಿನೊಂದಿಗೆ ಸ್ವಚ್ಛಗೊಳಿಸಿ ಮಲಕನಮರಡಿ ಯಾರ್ಡ್‌ಗೆ ಸಾಗಿಸಲಾಯಿತು.
ಈ ಮಧ್ಯೆ ದುರುಗಮ್ಮನಹಳ್ಳಕ್ಕೆ ಎರಡು ಕಡೆ ಗೋಡೆ ನಿರ್ಮಿಸಿ ವಾಹನ ನಿಲುಗಡೆ ಮಾಡಲು ಯೋಜನೆ ಸಿದ್ಧಪಡಿಸಿ ಸರಕಾರ ಟೆಂಡರ್ ಕರೆದು ಗುತ್ತಿಗೆ ನೀಡಿತ್ತು. ಈ ಕಾಮಗಾರಿ ಅವೈಜ್ಞಾನಿಕವಾಗಿದ್ದು ಹಳ್ಳವನ್ನು ಸ್ವಚ್ಛಗೊಳಿಸಿ ಹೂಳೆತ್ತಿದ ನಂತರವೇ ಹಳ್ಳದಲ್ಲಿ ಅಮೃತಸಿಟಿ ಕಾಮಗಾರಿ ನಡೆಯುವಂತೆ ನಮ್ಮೂರು ನಮ್ಮ ಹಳ್ಳ ಸಮಿತಿಯವರು ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ವಚ್ಛತಾ ಕಾರ್ಯದ ನಂತರವೇ ಅಮೃತಸಿಟಿ ಕಾಮಗಾರಿಯನ್ನು ಕೆಲ ಬದಲಾವಣೆ ಮಾಡಿ ನಡೆಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಸೂಚನೆ ನೀಡಿ ಹೂಳೆತ್ತಲು ಜಿಲ್ಲಾಡಳಿತದಿಂದ 5 ಲಕ್ಷ ಮಂಜೂರಿ ಮಾಡಿದರು.
5 ಲಕ್ಷ ರೂ. ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದ್ದರಿಂದ ಸಮಿತಿಯವರು ಶಾಸಕ ಪರಣ್ಣ ಮುನವಳ್ಳಿಗೆ ಮನವಿ ಮಾಡಿದ್ದರಿಂದ ಶಾಸಕರು ಹೂಳೆತ್ತುವ ಕಾಮಗಾರಿ ನಡೆಯಲಿ. ಸರಕಾರ ಮತ್ತು ಸಾರ್ವಜನಿಕರ ವಂತಿಗೆ ಪಡೆದು ಹಳ್ಳವನ್ನು ಸೌಂದರ್ಯ ಮಾಡುವ ಸಂಕಲ್ಪ ಮಾಡಿದರು. ಉದ್ಯಮಿ ಕಳಕನಗೌಡ ತಮ್ಮ ಯಂತ್ರೋಪಕರಣಗಳ ಮೂಲಕ 16 ದಿನಗಳಿಂದ ಹೂಳೆತ್ತಿ ಇಡೀ ಹಳ್ಳವನ್ನು ಸ್ವಚ್ಛ, ಸುಂದರವಾಗಿಸಿದ್ದಾರೆ. ಹೂಳೆತ್ತಿದ ನಂತರ ಹಳ್ಳದ ಎರಡು ಕಡೆ ಗೋಡೆ ನಿರ್ಮಿಸಿ ಬದಿಯಲ್ಲಿ ಸಸಿ ನೆಟ್ಟು ಬೆಳೆಸುವ ಉದ್ದೇಶ ಹೊಂದಿದ್ದಾರೆ.
•ಕೆ.ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಚನ, ದಾಸ ಸಾಹಿತ್ಯ ಮನೆ ಮನೆಗೆ ತಲುಪಿಸೋಣ: ಪೇಜಾವರ ಶ್ರೀ
Yakshagana;ಕಾಲಕ್ರಮೇಣ ಪರಂಪರೆಯ ಸ್ವರೂಪಕ್ಕೆ ಮರಳುವುದು ನಿಶ್ಚಿತ: ಕುರಿಯ ಗಣಪತಿ ಶಾಸ್ತ್ರಿ
Delhi Election: ಆಪ್ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್ ಮೈತ್ರಿ: ಕೇಜ್ರಿವಾಲ್
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.