ರಸ್ತೆ ಪಕ್ಕದ ಗಿಡಕ್ಕೆ ನೀರುಣಿಸುವ ಯುವಕರು

ದ್ವಾರಕಾಮಯಿ ಸೇವಾ ಟ್ರಸ್ಟ್‌ ಯುವಕರ ಸೇವೆ! ­ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

Team Udayavani, Apr 4, 2021, 7:51 PM IST

dggee

ಮಂಜುನಾಥ ಮಹಾಲಿಂಗಪುರ

ಕುಷ್ಟಗಿ: ಪ್ರಾದೇಶಿಕ ವಲಯ ಅರಣ್ಯ ಇಲಾಖೆ ರಸ್ತೆ ಬದಿ ನೆಡುತೋಪಿನ ಗಿಡಗಳು ಬೇಸಿಗೆಯಲ್ಲಿ ನೀರಿಲ್ಲದೇ ಒಣಗುವುದನ್ನು ತಪ್ಪಿಸಲು ಹಾಗೂ ಗಿಡಗಳ ಸಂರಕ್ಷಣೆಗೆ ಸ್ಥಳೀಯ ದ್ವಾರಕಾಮಯಿ ಸೇವಾ ಟ್ರಸ್ಟ್‌ ಯುವಕರು ನಿಸ್ವಾರ್ಥ ಸೇವೆಗೆ ಮುಂದಾಗಿದ್ದಾರೆ.

ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಕುಷ್ಟಗಿ ಸಂಪರ್ಕಿಸುವ ವಿವಿಧ ಮಾರ್ಗದಲ್ಲಿ ವಿವಿಧ ಯೋಜನೆಗಳಲ್ಲಿ ಸಸಿಗಳನ್ನು ನೆಟ್ಟಿದೆ. ಬೇಸಿಗೆ ಹಂತದಲ್ಲಿ ಈ ನೆಡುತೋಪಿನ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಕೊರತೆಯಿಂದ ಈ ಹಂತದಲ್ಲಿ ನಿರ್ವಹಿಸುವುದು ಸಹ ಕಷ್ಟ ಸಾಧ್ಯವಾಗುತ್ತಿದೆ. ಈ ಸಂದರ್ಭದಲ್ಲಿ ಸ್ಥಳೀಯ ದ್ವಾರಕಾಮಯಿ ಸೇವಾ ಟ್ರಸ್ಟ್‌ನ ಸಮಾನ ಮನಸ್ಕ ಯುವಕರು, ಸ್ವಯಂ ಪ್ರೇರಣೆಯಿಂದ ಅರಣ್ಯ ಇಲಾಖೆ ನೆಟ್ಟ ಗಿಡಗಳಿಗೆ ಬಿಸಿಲು ಲೆಕ್ಕಿಸದೇ ನೀರುಣಿಸುತ್ತಿದ್ದಾರೆ.

ಈಗಾಗಲೇ ಕೊಪ್ಪಳ ರಸ್ತೆ ಪಕ್ಕದ ಗಿಡಗಳಿಗೆ ನೀರುಣಿಸಿದ್ದು, ಇದೀಗ ಗಜೇಂದ್ರಗಡ ರಸ್ತೆಯಲ್ಲಿನ ಗಿಡಗಳಿಗೆ ನೀರುಣಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಪ್ರತಿ ಟ್ಯಾಂಕರ್‌ನಿಂದ 25 ಗಿಡಗಳಿಗೆ ನೀರುಣಿಸಲಾಗುತ್ತಿದ್ದು, ದಿನಕ್ಕೆ ನಾಲ್ಕು ಟ್ಯಾಂಕರ್‌ ನೀರು ಬಳಕೆಯಾಗುತ್ತಿವೆ. ಒಂದು ಟ್ಯಾಂಕರ್‌ಗೆ 350 ರೂ. ನಂತೆ ನಿತ್ಯ 1,400 ರೂ. ವೆಚ್ಚವನ್ನು ಟ್ರಸ್ಟ್‌ ಬಳಗದ ಕೃಷ್ಣ ಕಂದಕೂರು, ಸತ್ಯನಾರಾಯಣ ಕಂದಗಲ್‌, ರಾಜು ಕತ್ರಿ, ಹನುಮೇಶ ಕಂದಕೂರು, ಶ್ರೀಕಾಂತ್‌ ಮೊದಲಾದವರು ತಾವೇ ಭರಿಸುತ್ತಿದ್ದು, ಈ ಸೇವೆಯಿಂದ ಸಂತೃಪ್ತಿ ಕಾಣುತ್ತಿದ್ದಾರೆ.

ಪರಿಸರ ಪ್ರೇಮಿ ಕೃಷ್ಣ ಕಂದಕೂರು ಮಾತನಾಡಿ, ಬೇಸಿಗೆಯಲ್ಲಿ ರಸ್ತೆ ಬದಿಯ ಗಿಡಗಳು ನೀರಿಲ್ಲದೇ ಒಣಗುತ್ತಿವೆ. ಅದರಲ್ಲೂ ಸಣ್ಣ ಗಿಡಗಳಿಗೆ ನೀರಿನ ಅವಶ್ಯಕತೆ ಹೆಚ್ಚಿರುತ್ತದೆ. ಇದನ್ನು ತಪ್ಪಿಸಲು ನಾವೇ ಸ್ನೇಹಿತರು ಸ್ವಂತ ವೆಚ್ಚದಲ್ಲಿ ಗಿಡಗಳಿಗೆ ನೀರುಣಿಸುತ್ತಿದ್ದೇವೆ. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಮಾಡಲು ಸಿದ್ಧರಿದ್ದೇವೆ. ಗಿಡಗಳಿಗೆ ನೀರುಣಿಸುವ ಮೊದಲಿಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ, ರಸ್ತೆ ಬದಿಯ ಗಿಡಗಳಿಗೆ ಪಾತಿ ಮಾಡುವುದು, ಕಸ ತೆರವುಗೊಳಿಸುವುದು, ಬಿದ್ದ ಗಿಡಗಳನ್ನು ನಿಲ್ಲಿಸಲು ಕೇಳಿಕೊಂಡಿದ್ದಕ್ಕೆ ವನಪಾಲಕರು, ಆ ಕೆಲಸ ನಿರ್ವಹಿಸಿದ್ದಾರೆ. ನಾವು ಗಿಡಗಳಿಗೆ ನೀರುಣಿಸುತ್ತಿದ್ದೇವೆ ಎಂದರು.

ಟಾಪ್ ನ್ಯೂಸ್

1-JMM

Jharkhand; ಸೀಟು ಹಂಚಿಕೆ ಪ್ರಕಟಿಸಿದ ಎನ್ ಡಿಎ: ಬಿಜೆಪಿಗೆ 68 ಸ್ಥಾನ

CM-Panchamsali

Reservation: ಪಂಚಮಸಾಲಿ ಮೀಸಲು ವಿಚಾರ ತಜ್ಞರು, ಸಂಪುಟದಲ್ಲಿ ಚರ್ಚಿಸಿ ಕ್ರಮ: ಸಿಎಂ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

ISREL-3

Israel ಗಾಜಾದಲ್ಲಿ ಕಾರ್ಯಾಚರಣೆ ನಿಲ್ಲಿಸದೆ ಒತ್ತೆಯಾಳುಗಳ ಬಿಡುಗಡೆ ಇಲ್ಲ: ಹಮಾಸ್!

1-a-cm-bai

ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ

3

La Tomatina: ಏನಿದು ಲಾ ಟೊಮಾಟಿನಾ ಹಬ್ಬ…ಈ ಹಬ್ಬದ ವಿಶೇಷತೆ ಏನು ಗೊತ್ತಾ?

1-dog

Police dog; ರೈತನ ಮನೆಯಿಂದ ಕಳವಾಗಿದ್ದ 1.07 ಕೋಟಿ ರೂ.ಹಣ ಪತ್ತೆಗೆ ನೆರವಾದ ಶ್ವಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭತ್ತದ ಬೆಳೆಗೆ ಕೊಳವೆ ರೋಗ; ರೈತರಿಗೆ ಸಿಗದ ಸೂಕ್ತ ಮಾರ್ಗದರ್ಶನ

ಭತ್ತದ ಬೆಳೆಗೆ ಕೊಳವೆ ರೋಗ; ರೈತರಿಗೆ ಸಿಗದ ಸೂಕ್ತ ಮಾರ್ಗದರ್ಶನ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

100 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ: ಶಿವರಾಜ್‌ ತಂಗಡಗಿ

100 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ: ಶಿವರಾಜ್‌ ತಂಗಡಗಿ

Minister Shivaraj Tangadagi: ಶೈಕ್ಷಣಿಕ, ಆರ್ಥಿಕ ಗಣತಿಗೆ ವಿರೋಧ ಸಲ್ಲ

Minister Shivaraj Tangadagi: ಶೈಕ್ಷಣಿಕ, ಆರ್ಥಿಕ ಗಣತಿಗೆ ವಿರೋಧ ಸಲ್ಲ

Minister; ಸತೀಶ್ ಜಾರಕಿಹೊಳಿ ಸಿಎಂ‌ ಆಗಲಿ: ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ

Minister; ಸತೀಶ್ ಜಾರಕಿಹೊಳಿ ಸಿಎಂ‌ ಆಗಲಿ ಎಂದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

POlice

Panambur ಮಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣ ಆರೋಪಿಗಳ ಮಹಜರು, ಮುಂದುವರಿದ ತನಿಖೆ

Kannada Habba: ನ.1-7: ಕುಂದಾಪುರದಲ್ಲಿ ಕನ್ನಡ ಹಬ್ಬ

Kannada Habba: ನ.1-7: ಕುಂದಾಪುರದಲ್ಲಿ ಕನ್ನಡ ಹಬ್ಬ

1-JMM

Jharkhand; ಸೀಟು ಹಂಚಿಕೆ ಪ್ರಕಟಿಸಿದ ಎನ್ ಡಿಎ: ಬಿಜೆಪಿಗೆ 68 ಸ್ಥಾನ

Mangaluru: ಡಿಜಿಟಲ್‌ ಸ್ವರೂಪದ ತುಳು ಮಕ್ಕಳಿಗೆ ಆಪ್ತ: ತಾರಾನಾಥ್‌ ಗಟ್ಟಿ ಕಾಪಿಕಾಡ್‌

Mangaluru: ಡಿಜಿಟಲ್‌ ಸ್ವರೂಪದ ತುಳು ಮಕ್ಕಳಿಗೆ ಆಪ್ತ: ತಾರಾನಾಥ್‌ ಗಟ್ಟಿ ಕಾಪಿಕಾಡ್‌

fraudd

Kasaragod: ಉದ್ಯೋಗ ಭರವಸೆ ನೀಡಿ ವಂಚನೆ; ಸಚಿತಾ ರೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.