ಶಿಕ್ಷಣ -ನೀರಾವರಿಗೆ ಮೊದಲಾದ್ಯತೆ: ಆಚಾರ್
ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ; ಕಾಂಗ್ರೆಸ್ಸಿನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು
Team Udayavani, Nov 23, 2022, 5:12 PM IST
ಯಲಬುರ್ಗಾ: ಕಳೆದ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ತಮ್ಮ ಮತವನ್ನು ಪಡೆಯುವಾಗ ಶಿಕ್ಷಣ,ನೀರಾವರಿ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದ್ದೆ, ಅದೇ ರೀತಿ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅವಧಿಯಲ್ಲಿ ಎರಡಕ್ಕೂ ಪ್ರಮುಖ ಆದ್ಯತೆ ನೀಡಿರುವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಯಲಬುರ್ಗಾ ಪಟ್ಟಣಕ್ಕೆ ಪ್ರತ್ಯೇಕ ಮಹಿಳಾ ಪಪೂ ಕಾಲೇಜು ಮಂಜೂರು ಮಾಡಿಸಿರುವೆ. ಕುಕನೂರು ಪಟ್ಟಣದಲ್ಲಿ ಇದುವರೆಗೂ ಒಂದು ಸರಕಾರಿ ಕಾಲೇಜುಗಳು ಇರಲಿಲ್ಲ. ಅಲ್ಲಿಯೂ ಒಂದು ಕಾಲೇಜು ಮಂಜೂರು ಮಾಡಿಸಿದ್ದೇನೆ. ಯಲಬುರ್ಗಾ ಪಿಜಿ ಸೆಂಟರ್‌ಗೆ ಸುಸ್ಸಜ್ಜಿತ ಜಾಗ ಹುಡುಕಿ ಕಟ್ಟಡ ನಿರ್ಮಿಸಿ ರಸ್ತೆಯನ್ನು ಸಹ ಮಾಡಲಾಗಿದೆ. ಗ್ರಾಮದ ಪ್ರೌಢಶಾಲೆಗೆ ಕಟ್ಟಡಗಳ ಸಮಸ್ಯೆ ಇರುವುದನ್ನು ಮನಗಂಡು 15 ಶಾಲಾ ಕಟ್ಟಡಗಳಿಗೆ ಅನುದಾನ ನೀಡಿದ್ದೇ ಅವುಗಳು ಸಕಾಲಕ್ಕೆ ಪೂರ್ಣಗೊಂಡು ಇಂದು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಿವೆ. ಗ್ರಾಮದ ಕೆರೆಯ ಅಭಿವೃದ್ಧಿ 40 ಲಕ್ಷ ರೂ. ಅನುದಾನ ನೀಡಿದ್ದೇನೆ. ಈ ಹಿಂದೆ ಕೆರೆ ಅಭಿವೃದ್ಧಿಗೆ ಹಣ ನೀಡಿ ಅದನ್ನು ಕಳಪೆ ಕಾಮಗಾರಿಯನ್ನಾಗಿ ಮಾಡಿದ ಹಿನ್ನೆಲೆಯಲ್ಲಿ ಒಡೆದು ಹೋಯಿತು. ಇದು ಕಾಂಗ್ರೆಸ್‌ನವರ ಆಡಳಿತದ ಹಣೆಬರಹ ಎಂದು ಟೀಕಿಸಿದರು.
ಕಾಂಗ್ರೆಸ್ಸಿನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ನೀರಾವರಿ ಯೋಜನೆಯ ಫೈಲ್‌ಗೆ ಸಹಿ ಹಾಕದೇ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಿಜೆಕ್ಟ್ ಮಾಡಿದೆ. ಇದೀಗ ನನ್ನ ಪ್ರಯತ್ನದಿಂದ ಯೋಜನೆ ಯಶಸ್ವಿಯಾಗುತ್ತಿದ್ದಂತೆ ಈಗ ಕಾಂಗ್ರೆಸ್ ನಾಯಕ ಉಲ್ಟಾ ಹೊಡೆಯುತ್ತಿದ್ದಾರೆ. ವಿಪರೀತ ಮಳೆಗಾಲದಿಂದ ಕೆರೆ ತುಂಬಿಸುವ ಯೋಜನೆ ಸ್ವಲ್ಪ ವಿಳಂಬವಾಯಿತು. ಈಗಾಗಲೇ ಪೈಪ್ ಲೈನ್ ಆಗಿದ್ದು ವಿದ್ಯುತ್ ಕಾಮಗಾರಿಗಳು ಬಾಕಿ ಇವೆ. ಚುನಾವಣೆಗೂ ಮುನ್ನ ಕೃಷ್ಣಾ ನೀರು ಹಾಕುವುದು ಶತಸಿದ್ಧ ಎಂದರು.
ಮಾಜಿ ಸಚಿವ ಕ್ಷೇತ್ರದಲ್ಲಿ ಹೇಳವರ ರೀತಿ ಪುಸ್ತಕ ತಂದು ಜನತೆ ದಿಕ್ಕು ತಪ್ಪಿಸುವ ಕೆಲಸ ಮಾಡಲು ಮುಂದಾಗಿದ್ದು, ಅವರಿಗೆ ಶೋಭೆ ತರುವಂತಹದಲ್ಲ. ಈ ಹಿಂದೆ ಭೂ ಸೇನಾ ನಿಗಮದಲ್ಲಿ 70 ಕೋಟಿ ಅವ್ಯವಹಾರ ಆಗಿದೆ. ನನ್ನ ಆಡಳಿತಾವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ನಾನೊನº ರೈತನ ಮಗ ಇಂದಿಗೂ ದನದ ಪಡಸಾಲೆಯಲ್ಲಿ ಮಲಗುತ್ತೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಜನಪರ ಆಡಳಿತ ನೀಡಲು ಮುಂದಾಗಿದ್ದಾರೆ. ಇಡೀ ವಿಶ್ವವೇ ಭಾರದತ್ತ ನೋಡುವಂತಾಗಿದೆ. ದೇಶ ಆರ್ಥಿಕವಾಗಿ ಶಿಸ್ತಿನಿಂದ ಕೂಡಿದೆ. ಮನೆಮನೆಗ ಕುಡಿಯುವ ನೀರು ಪೂರೈಕೆ, ಮಹಿಳೆಯರಿಗೆ ಉಜ್ವಲ ಯೋಜನೆಯ ಗ್ಯಾಸ್ ನೀಡಲಾಗಿದೆ. ಭಾರತ ಜೋಡೋ ಯಾತ್ರೆ ರಾಜಕೀಯ ಗಿಮಿಕ್ ಆಗಿದೆ. ಕಾಂಗ್ರೆಸ್ಸಿನವರು ಒಂದುಗೂಡಿಸುವ ಕೆಲಸ ಮೊದಲು ಮಾಡಲಿ, ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಡ್ರೇಸ್ ಇಲ್ಲದಂತಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಕೆಂಚಮ್ಮ ಹಿರೇಮನಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶರಣಪ್ಪ ಕುಡಗುಂಟಿ, ಗ್ರೇಡ್-2 ತಹಶೀಲ್ದಾರ್ ನಾಗಪ್ಪ ಸಜ್ಜನ, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ, ಸಣ್ಣನೀರಾವರಿ ಇಲಾಖೆಯ ಮುರಳಿಧರ ಪಾಟೀಲ, ಲೋಕೋಪಯೋಗಿ ಇಲಾಖೆಯ ಶರಣಬಸಪ್ಪ, ಮಹಾದೇವಪ್ಪ ಪತ್ತಾರ, ಮುಖಂಡರಾದ ಬಸವ ಲಿಂಗಪ್ಪ ಭೂತೆ, ಶಿವಶಂಕರಾವ್ ದೇಸಾಯಿ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ವೀರಣ್ಣ ಹುಬ್ಬಳ್ಳಿ, ಕಳಕಪ್ಪ ಕಂಬಳಿ, ವಿಶ್ವನಾಥ ಮರಿಬಸಪ್ಪನವರ, ಕೊಟ್ರಪ್ಪ ತೋಟದ, ಕಳಕಪ್ಪ ತಳವಾರ, ಶಿವಪ್ಪ ವಾದಿ, ರತನ ದೇಸಾಯಿ, ಮಂಜುನಾಥ ಗಟ್ಟೆಪ್ಪನವರ, ಸುಧಾಕರ ದೇಸಾಯಿ, ಬಸಯ್ಯ ಮ್ಯಾಗಳಮಠ, ಶರಣಕುಮಾರ ಅಮರಗಟ್ಟಿ, ಕರಿಯಪ್ಪ ಗುರಿಕಾರ, ಪಿಡಿಒ ವೆಂಕಟೇಶ ನಾಯಕ, ಪ್ರಾಚಾರ್ಯ ಶಿವಪ್ಪ ಬೇಲೇರಿ, ಕುಮಾರಗೌಡ ಪಾಟೀಲ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.