Kushtagi: ವಿದ್ಯುತ್ ಶಾರ್ಟ್ ಸರ್ಕ್ಯೂಟ್; 1 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ಹಾನಿ
Team Udayavani, Jan 25, 2024, 1:02 PM IST
ಕುಷ್ಟಗಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ನಿವೃತ್ತ ತಹಶೀಲ್ದಾರ ಸಿ.ಎಂ.ಹಿರೇಮಠ ಅವರ ಮನೆಯಲ್ಲಿ ಜ.25ರ ಗುರುವಾರ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ಅಪಾರ ಹಾನಿ ಸಂಭವಿಸಿದೆ.
ಪಟ್ಟಣದ ಬುತ್ತಿ ಬಸವೇಶ್ವರ ನಗರದ ಪೊಲೀಸ್ ಠಾಣೆಯ ಹಿಂಭಾಗದ ಮಹಾಂತ ನಿವಾಸದಲ್ಲಿ ಸಿ.ಎಂ. ಹಿರೇಮಠ ಅವರು ಸ್ನಾನ ಮಾಡುವ ಸಂದರ್ಭ ಏಕಾಏಕಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಸಿಎಂ ಹಿರೇಮಠ ಕುಟುಂಬದವರು ಹೊರಗೆ ದೌಡಾಯಿಸಿದ್ದಾರೆ.
ಮನೆಯ ಮೇಲಂತಸ್ತಿನಲ್ಲಿ ಎಂಟು ಬಾಡಿಗೆ ಮನೆಯವರು ದಟ್ಟ ಹೊಗೆ, ಗದ್ದಲಕ್ಕೆ ಹೆದರಿ ಅವರೆಲ್ಲರೂ ಕೆಳಗೆ ದೌಡಾಯಿಸಿದ್ದರಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಕಟ್ಟಡದೊಳಗೆ ಬೆಂಕಿ ಧಗ ಧಗಿಸಲಾರಂಭಿಸಿದ್ದರಿಂದ ಅಲ್ಲಿ ಸಂಗ್ರಹಿಸಿಟ್ಟಿದ್ದ ಡ್ರಿಪ್ ಪೈಪ್ ಬಂಡಲ್ ಗಳಿಗೆ ಬೆಂಕಿ ವ್ಯಾಪಿಸಿದ್ದರಿಂದ ಬೆಂಕಿಯ ತೀವ್ರತೆ ಹೆಚ್ಚಲು ಕಾರಣವಾಯಿತು.
ನೋಡು ನೋಡುತ್ತಿದ್ದಂತೆ ಇಡೀ ಮನೆಯೊಳಗಿನಿಂದ ಹೊಗೆ ದಟ್ಟವಾಗಿ ಆವರಿಸಿದೆ. ಸ್ಥಳೀಯರು ಬಕೆಟ್, ಕೊಡಗಳಿಂದ ಬೆಂಕಿ ನಂದಿಸುವ ಹರಸಹಾಸಕ್ಕಿಳಿದರು. ದಟ್ಟ ಹೊಗೆಯಿಂದ ನಿಯಂತ್ರಣ ಸಾದ್ಯವಾಗಲಿಲ್ಲ, ನಂತರ ಕುಷ್ಟಗಿ ಅಗ್ನಿ ಶಾಮಕ ವಾಹನದ ಮೂಲಕ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದರಿಂದ ಬೆಂಕಿ ನಿಯಂತ್ರಿಸಲು ಸಾಧ್ಯವಾಯಿತು.
ಡ್ರಿಪ್ ಬಂಡಲ್, ಟಿವಿ, ಫ್ರಿಡ್ಜ್, ಪೀಠೋಪಕರಣ ಸಾಮಾಗ್ರಿ, ದಾಖಲೆಗಳು ಸುಟ್ಟು ಕರಕಲಾಗಿದ್ದು, ಸೇರಿದಂತೆ 1 ಕೋಟಿಗೂ ಅಧಿಕ ಹಾನಿ ಅಂದಾಜಿಸಲಾಗಿದೆ. ಅಲ್ಮೆರಾದಲ್ಲಿದ್ದ ನಗದು, ಬೆಳ್ಳಿ ಬಂಗಾರಕ್ಕೆ ಏನೂ ಆಗಿಲ್ಲ.
ಘಟನಾ ಸ್ಥಳಕ್ಕೆ ಸಿಪಿಐ ಯಶವಂತ ಬಿಸನಳ್ಳಿ, ಕ್ರೈಂ ಪಿಎಸೈ ಮಾನಪ್ಪ ವಾಲ್ಮೀಕಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.