ಭೂಮಿತಾಯಿಗೆ ನಮಿಸಿ ಹಬ್ಬ ಎಳ್ಳು ಅಮವಾಸ್ಯೆ
Team Udayavani, Jan 2, 2022, 6:05 PM IST
ಗಂಗಾವತಿ: ಭೂಮಿತಾಯಿಗೆ ನಮಿಸಿ ಹಬ್ಬ ಎಳ್ಳು ಅಮವಾಸ್ಯೆ ಆಗಿದೆ.ಪ್ರತಿ ವರ್ಷದ ಎಳ್ಳುಅಮವಾಸ್ಯೆಯಂದು ಕೃಷಿಕರು ಬೆಳಿಗ್ಗಿನ ಜಾವ ಬೇಗ ಎದ್ದು ಸ್ನಾನ ಪೂಜಾದಿಗಳನ್ನು ಮಾಡಿಕೊಂಡು ರೊಟ್ಟಿ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ತಯಾರು ಮಾಡಿಕೊಂಡು ತಮ್ಮ ಹೊಲಗದ್ದೆಗಳಿಗೆ ತೆರಳಿ ಅಲ್ಲಿ ಭೂಮಿ ತಾಯಿಗೆ ಪೂಜೆ ಮಾಡಿ ತಾವು ತೆಗೆದುಕೊಂಡು ಹೋದ ಆಹಾರವನ್ನು ಇಡೀ ಹೊಲದ ತುಂಬೆಲ್ಲ ಚೆಲ್ಲುತ್ತಾರೆ ಇದರಿಂದ ಭೂಮಿತಾಯಿ ಸಂತೃಪ್ತಳಾಗುತ್ತಾಳೆ ಎಂಬ ಭಾವನೆ ಕೃಷಿಕರ ಮಕ್ಕಳದ್ದು .ರವಿವಾರ ಎಳ್ಳು ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಕೃಷಿಕರು ಮತ್ತು ಅವರ ಕುಟುಂಬದವರು ತಮ್ಮ ಹೊಲಗಳಿಗೆ ತೆರಳಿ ತಾವು ತಯಾರಿಸಿದ ಆಹಾರದ ನೈವೇದ್ಯವನ್ನು ಇಟ್ಟು ಪೂಜೆ ಮಾಡಿ ಆಹಾರವನ್ನು ಇಡೀ ಹೊಲದ ತುಂಬೆಲ್ಲ ಚೆಲ್ಲುತ್ತಾರೆ .
ಕೃಷಿ ವಿಜ್ಞಾನಿಗಳ ಪ್ರಕಾರ ಪ್ರತಿವರ್ಷ ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥವನ್ನು ಚರಗದ ರೂಪದಲ್ಲಿ ಹೊಲಗದ್ದೆಗಳಿಗೆ ಚೆಲ್ಲುವುದರಿಂದ ರೈತಮಿತ್ರ ಹಕ್ಕಿಗಳು ತಮ್ಮ ಹೊಲಗಳಲ್ಲಿ ಬೀಡು ಬಿಟ್ಟು ರೈತ ಬೆಳೆದ ಬೆಳೆಯನ್ನು ನಾಶ ಮಾಡುವ ಕ್ರಿಮಿ ಕೀಟಗಳನ್ನು ತಿನ್ನಲು ಅನುಕೂಲವಾಗುತ್ತದೆ ಆದ್ದರಿಂದ ಈ ಚರಗ ಚಲ್ಲುವ ಪದ್ಧತಿ ಪುರಾತನ ಕಾಲ ವಾದರೂ ವೈಜ್ಞಾನಿಕವಾಗಿ ಸರಿಯಾಗಿದೆ ಎಂದು ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿ ಡಾಕ್ಟರ್ ಮಹಾಂತ ಶಿವಯೋಗಿಗಳ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ .ಪುರಾತನ ಕಾಲದಿಂದ ಗ್ರಾಮೀಣ ಜನರು ಕೃಷಿಗೆ ಸಂಬಂಧಿಸಿದಂತೆ ಆಚರಿಸಿಕೊಂಡು ಬಂದಿರುವ ಹಬ್ಬಹರಿದಿನಗಳು ಅತ್ಯಂತ ವೈಜ್ಞಾನಿಕವಾಗಿದೆ ಅವುಗಳನ್ನು ಮುಂದುವರಿಸಿಕೊಂಡು ಹೋಗಬೇಕಾದ ಅಗತ್ಯವೂ ಇದೆ .
ಗಂಗಾವತಿ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ರವಿವಾರ ಎಳ್ಳು ಅಮವಾಸ್ಯೆಯ ಚರಗವನ್ನು ತಮ್ಮ ಹೊಲಗದ್ದೆಗಳಿಗೆ ಚೆಲ್ಲಿ ಕೃಷಿಕರು ಸಂತೋಷಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.