ಪರಿಸರ ಪ್ರೇಮ ಬೆಳೆಸಿಕೊಳ್ಳಿ: ತಂಗಡಗಿ
Team Udayavani, Aug 9, 2020, 2:23 PM IST
ಕನಕಗಿರಿ: ಪರಿಸರ ಸ್ನೇಹಿ ವಾತಾವರಣ ಬೆಳೆಸಿಕೊಂಡಿರುವ ತಾಲೂಕಿನ ನವಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯ ಶ್ಲಾಘನೀಯ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನವೀಕರಣಗೊಂಡ ಕಟ್ಟಡ ಆವರಣದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು, ನವಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಿಲ್ಲೆಯಲ್ಲೇ ಮಾದರಿಯಾಗಿದೆ. ಸಸಿ ನೆಡುವ ಸಂಘದ ಕಾರ್ಯಅತ್ಯುತ್ತಮವಾದದ್ದು, ಪ್ರತಿಯೊಬ್ಬರು ಪರಿಸರಪ್ರೇಮಿಯಾಗಬೇಕಾಗಿದೆ. ಜೀವ ಸಂಕುಲ ಉಳಿಯಬೇಕಾದರೆ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಪಣ ತೊಡಬೇಕಾಗಿದೆ.
ಈ ಸಂಘವು ಪರಿಸರ ಪ್ರೇಮ ಬೆಳೆಸುವ ಜೊತೆಗೆ, ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಕಾರ್ಯವನ್ನು ಪ್ರಾಮಾಣಿಕತೆಯಿಂದ ಮಾಡುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬೆಳವಣಿಗೆಗೆ ಬೇಡಿಕೆಗಳು ಇದ್ದರೆ ಅದನ್ನು ನನ್ನ ಗಮನಕ್ಕೆ ತಂದರೆ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಪ್ರಾ.ಕೃ.ಪ.ಸ.ಸಂ. ಅಧ್ಯಕ್ಷ ಭೀಮನಗೌಡ ಹರ್ಲಾಪುರ, ಉಪಾಧ್ಯಕ್ಷ ಚಂದ್ರಪ್ಪ ಹಿರೇಕುರುಬರ, ಪ್ರಮುಖರಾದ ಜಡಿಯಪ್ಪ ಮುಕ್ಕುಂದಿ, ರಾಮನಗೌಡ ಬುನ್ನಟ್ಟಿ, ದುರಗೇಶ ಪ್ಯಾಟಾಳ, ಮೃತ್ಯುಂಜಯಸ್ವಾಮಿ, ಹುಲಗಪ್ಪ ಭೋವಿ, ದೇವಮ್ಮ ಭಿಧೂ°ರ ಮಠ, ತಿಮ್ಮರಡ್ಡೆಪ್ಪ ಆದಾಪುರ, ವೆಂಕಟೇಶ ಆದಾಪುರ, ಶರಣಪ್ಪ ಸಾಹುಕಾರ, ಸಣ್ಣ ಭೀಮಣ್ಣ ನರಹರಿ, ಪ್ಯಾಟೆಪ್ಪ ನಾಯ್ಕ,ಶಿವಯ್ಯ ಸ್ವಾಮಿ, ಖಾಜಾಸಾಬ್, ಮಂಜು ಹಿರೇಮಠ, ಈರಪ್ಪ ಭಜೆಂತ್ರಿ, ಮರಿಯಮ್ಮ ಸಂಕನಾಳ, ಗಿರಿಯಪ್ಪ, ನಿಂಗಪ್ಪ ನಾಯಕ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.