Environmental awareness ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಯುವ ತಂಡದಿಂದ ಸಾರ್ಥಕ ಸೇವೆ
ಬೆಟ್ಟದಲ್ಲಿದ್ದ ಟನ್ ಗಟ್ಟಲೆ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಸಂಗ್ರಹ
Team Udayavani, Jun 11, 2023, 8:02 PM IST
ಗಂಗಾವತಿ:ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದಲ್ಲಿ ಕಿಷ್ಕಿಂಧಾ ಯುವ ಚಾರಣ ಬಳಗ ಯುವಕರ ತಂಡ ಇಡೀ ಅಂಜನಾದ್ರಿಯಲ್ಲಿ ಎಸೆಯಲಾಗಿದ್ದ ಪ್ಲಾಸ್ಟಿಕ್, ತ್ಯಾಜ್ಯ, ಬಟ್ಟೆ,ಗುಟ್ಕಾಚೀಟಿ ಸೇರಿ ತೆಂಗಿನಕಾಯಿ ಚಿಪ್ಪು ಇಡೀ ದಿನ ಸಂಗ್ರಹಿಸಿ ಒಂದೆಡೆ ಹಾಕಿ ತ್ಯಾಜ್ಯವನ್ನು ಬೆಟ್ಟದಿಂದ ಕೆಳಗೆ ಇಳಿಸಿ ಮರು ಬಳಕೆಗೆ ಅನುಕೂಲವಾಗುವಂತೆ ರವಾನೆ ಮಾಡಲಾಯಿತು.
ಅಂಜನಾದ್ರಿ ಬೆಟ್ಟಕ್ಕೆ ನಿತ್ಯವೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಪ್ಲಾಸ್ಟಿಕ್ ಬಾಟಲ್,ಬಟ್ಟೆ ಹಾಗೂ ತೆಂಗಿನಕಾಯಿ ಚಿಪ್ಪುಗಳನ್ನು ಎಲ್ಲಂದರಲ್ಲಿ ಬಿಸಾಡುವ ಮೂಲಕ ಇಡೀ ಬೆಟ್ಟವನ್ನು ಕಸದ ಕುಪ್ಪೆಯಾಗಿಸಿದ್ದರು. ಇದನ್ನು ಮನಗಂಡ ವಿಜಯ ಬಳ್ಳಾರಿ ,ಅರ್ಜುನ, ಆನಂದ,ಸಂತೋಷ, ಹರನಾಯಕ,ಸೌಮ್ಯ ,ಮಂಜುಳಾ ಸೇರಿ 25 ಕ್ಕೊ ಹೆಚ್ಚಿನ ಕಿಷ್ಕಿಂದಾ ಯುವ ಚಾರಣ ಬಳಗದ ಯುವಕ , ಯುವತಿಯರು ಅಂಜನಾದ್ರಿ ಸ್ವಚ್ಚತಾ ಕಾರ್ಯ ಮಾಡಿ ಯುವ ಜನತೆಗೆ ಮಾದರಿಯಾಗಿದ್ದಾರೆ.
ನಿರ್ಲಕ್ಷ್ಯ
ಪ್ಲಾಸ್ಟಿಕ್ ಬಳಕೆ ದೇವಾಲಯಗಳಲ್ಲಿ ನಿಷೇಧವಿದ್ದರೂ ಇಲ್ಲಿಗೆ ಆಗಮಿಸುವ ಭಕ್ತರು ನೀರಿನ ಬಾಟಲ್, ಪ್ಲಾಸ್ಟಿಕ್ ಪಾಕೆಟ್ ಗಳಲ್ಲಿರುವ ಕುರುಕಲು ತಿಂಡಿಗಳನ್ನು ತಂದು ತಿಂದು ಎಲ್ಲಂದರಲ್ಲಿ ಎಸೆಯುವ ಮೂಲಕ ಕಿಷ್ಕಿಂಧಾ ಅಂಜನಾದ್ರಿ ಪ್ರದೇಶವನ್ನು ಮಲೀನ ಮಾಡುತ್ತಿದ್ದು ದೇವಾಲಯದಲ್ಲಿ ಇರುವ ಸಿಬಂದಿಗಳು ಸಹ ಅದನ್ನು ತಡೆಯುವಲ್ಲಿ ವಿಫಲವಾಗಿದ್ದಾರೆ. ತೆಂಗಿನಕಾಯಿ ಒಡೆಯುವ ಸ್ಥಳದಲ್ಲಿ ದೇಗುಲದ ಯಾವ ಸಿಬಂದಿ ಇರದೇ ಇರುವುದರಿಂದ ಭಕ್ತರು ಇಡೀ ಪ್ರದೇಶವನ್ನು ಕಾಯಿ ಎಸೆದು ಕೆಡಿಸಿದ್ದಾರೆ. ಇದನ್ನು ತಡೆಯಲು ಸೂಕ್ತ ನಿಯಮಗಳನ್ನು ರೂಪಿಸಿ ಅನುಷ್ಠಾನ ಮಾಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.