Ex-Minister ಇಕ್ಬಾಲ್ ಅನ್ಸಾರಿ ನಗರ ಸಂಚಾರದ ವೇಳೆ ಪೊಲೀಸ್ ಬೆಂಗಾವಲು; ತನಿಖೆ
ಕೆಆರ್ ಪಿ ಪಕ್ಷದ ಮುಖಂಡರ ಆಕ್ರೋಶ, ಎಸ್ಪಿಗೆ ದೂರು
Team Udayavani, Nov 4, 2023, 7:39 PM IST
ಗಂಗಾವತಿ: ನಗರದಲ್ಲಿ ಶನಿವಾರ ಜರುಗಿದ ರಾಜ್ಯ ನದಾಫ್,ಪಿಂಜಾರ್ ಸಮಾವೇಶಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಪೊಲೀಸ್ ಬೆಂಗಾವಲಿನಲ್ಲಿ ಆಗಮಿಸುವ ಮೂಲಕ ಸರಕಾರಿ ವ್ಯವಸ್ಥೆ ದುರುಪಯೋಗ ಮಾಡಿಕೊಂಡಿದ್ದು ಈ ವ್ಯವಸ್ಥೆ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಕೆಆರ್ ಪಿ ಪಕ್ಷದ ಯುವ ಮುಖಂಡ ಯಮನೂರ ಚೌಡ್ಕಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಡಿವೈಎಸ್ಪಿ ಅವರನ್ನು ಒತ್ತಾಯಿಸಿದ್ದಾರೆ.
ಹಾಲಿ ಶಾಸಕ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರು ಅನೇಕ ಸಲ ಸಂಚಾರಿ ದಟ್ಟಣೆ ಯಲ್ಲಿ ಸಿಕ್ಕು ಹಾಕಿಕೊಂಡರೂ ಲಕ್ಷ್ಯ ವಹಿಸಿದ ಸ್ಥಳಿಯ ಪೊಲೀಸರು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬಂದಲ್ಲಿ ಹೋದಲು ಪೊಲೀಸ್ ಬೆಂಗಾವಲು ನೀಡುತ್ತಿದ್ದು, ಸರಕಾರಿ ವ್ಯವಸ್ಥೆ ದುರುಪಯೋಗ ಮಾಡುತ್ತಿದ್ದಾರೆ.ಕಾಯ್ದೆ ಕಾನೂನು ಅನುಸರಿಸಬೇಕಾದ ಪೊಲೀಸ್ ಇಲಾಖೆಯ ಯಾರ ಮುಲಾಜಿನಲ್ಲಿ ಇಲ್ಲ.ಸ್ಥಳೀಯ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಮುಂದೆ ಪೊಲಿಸ್ ವ್ಯವಸ್ಥೆ ದುರುಪಯೋಗವಾಗದಂತೆ ಎಸ್ಪಿಯವರು ಎಚ್ಚರಿಕೆ ವಹಿಸುವಂತೆ ಚೌಡ್ಕಿ ಒತ್ತಾಯಿಸಿದ್ದಾರೆ.
ತನಿಖೆ
ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರಿಗೆ ಶನಿವಾರ ಪೊಲೀಸ್ ಬೆಂಗಾವಲು ಹಾಕುವಂತೆ ಆದೇಶವಿರದಿದ್ದರೂ ಯಾಕೆ ಪೊಲೀಸ್ ಬೆಂಗಾವಲಿನಲ್ಲಿ ನದಾಫ್ ಸಮಾವೇಶಕ್ಕೆ ಕರೆ ತರಲಾಯಿತು ಎನ್ನುವ ಕುರಿತು ತನಿಖೆ ನಡೆಸಿ ಎಸ್ಪಿಯವರಿಗೆ ವರದಿ ಮಾಡಲಾಗುತ್ತದೆ ಎಂದು ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಉದಯವಾಣಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.