ಹುಯ್ಯೋ ಹುಯ್ಯೋ ಮಳೆರಾಯ
Team Udayavani, Jun 18, 2019, 8:17 AM IST
ಕೊಪ್ಪಳ: ಕೃಷಿ ಭೂಮಿ ಹಸನ ಮಾಡಿಕೊಳ್ಳುತ್ತಿರುವ ಗೊಂಡಬಾಳ ರೈತ
ಕೊಪ್ಪಳ: ಬರದ ನಾಡಿನ ಜನತೆಗೆ ವರುಣ ಮತ್ತೆ ಬೆಂಕಿ ಇಟ್ಟಂತೆ ಕಾಣುತ್ತಿದೆ. ಮುಂಗಾರು ಆರಂಭವಾದರೂ ಮಳೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ವರುಣನ ಆಗಮನಕ್ಕಾಗಿ ರೈತ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾನೆ. ಜಿಲ್ಲೆಯಲ್ಲಿ ಆರು ತಿಂಗಳಿಂದ ಶೇ.25ರಷ್ಟು ಮಳೆಯ ಕೊರತೆ ಎದುರಾಗಿದೆ.
ಹೌದು. ಕೊಪ್ಪಳ ಜಿಲ್ಲೆಗೆ ಪದೇ ಪದೆ ಬರದ ಛಾಯೆ ಆವರಿಸುತ್ತಿದೆ. ಕಳೆದ 18 ವರ್ಷದಲ್ಲಿ 12 ವರ್ಷಗಳ ಕಾಲ ಬರ ಕಂಡಿರುವ ಜನ ಸಮೂಹವು ಇತ್ತೀಚಿನ ವರ್ಷಗಳಲ್ಲಿ ಸಮೃದ್ಧಿ ಮಳೆಯನ್ನೇ ಕಂಡಿಲ್ಲ. ಜನ ಹನಿ ನೀರಿಗೂ ಪರಿತಪಿಸುವಂತ ಪರಿಸ್ಥಿತಿ ಉದ್ಭವಿಸುತ್ತಿದೆ.
ಕಳೆದ ವರ್ಷ ಬರದ ಬಿಸಿ ಅನುಭವಿಸಿದ್ದ ಅನ್ನದಾತ ಈ ವರ್ಷ ಕೃಷಿ ಬದುಕು ಕೈ ಹಿಡಿಯಲಿದೆ ಎಂದು ಖುಷಿಯಿಂದಲೇ ಭೂಮಿ ಹಸನು ಮಾಡಿಕೊಂಡಿದ್ದಾನೆ. ಆದರೆ ಇಲ್ಲಿಯ ತನಕ ಉತ್ತಮ ಮಳೆಗಳೇ ಸುರಿದಿಲ್ಲ. ಜಿಲ್ಲೆಯಲ್ಲಿ ಕುಷ್ಟಗಿ, ಯಲಬುರ್ಗಾ ತಾಲೂಕಿನ ಕೆಲ ಹೋಬಳಿ ಬಿಟ್ಟರೆ ಮತ್ತ್ಯಾವ ಹೋಬಳಿಯಲ್ಲೂ ಸಮೃದ್ಧ ಮಳೆಗಳೇ ಆಗಿಲ್ಲ. ಮುಂಗಾರು ಪೂರ್ವಗಳ ಮಳೆಗಳು ಕೂಡ ಮುನಿಸಿಕೊಂಡಿವೆ.
ಕೃಷಿ ಇಲಾಖೆ ಲೆಕ್ಕಾಚಾರದ ಪ್ರಕಾರ, 2019ರ ಜನವೆರಿಯಿಂದ ಜೂ. 15ರ ವರೆಗೂ ವಾಡಿಕೆಯ ಪ್ರಕಾರ 120.05 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 89.8 ಮಿ.ಮೀ ಮಳೆಯಾಗಿದೆ. ಅಂದರೆ 25.5 ಮಿ.ಮೀ. ಮಳೆ ಕೊರತೆಯಾಗಿದೆ. ಅದರಲ್ಲೂ ಗಂಗಾವತಿ ತಾಲೂಕಿನಲ್ಲಿ 100 ಮಿ.ಮೀ. ಪೈಕಿ 74 ಮಿ.ಮೀ. ಮಳೆಯಾಗಿದ್ದು 25 ಮಿ.ಮೀ. ಮಳೆ ಕೊರತೆಯಿದೆ. ಕೊಪ್ಪಳ ತಾಲೂಕಿನಲ್ಲಿ 128 ಮಿ.ಮೀ. ವಾಡಿಕೆ ಮಳೆ ಪೈಕಿ 61 ಮಿ.ಮೀ. ಮಳೆಯಾಗಿದ್ದು, 52 ಮಿ.ಮೀ. ಮಳೆ ಕೊರತೆಯಾಗಿದೆ. ಇನ್ನೂ ಕುಷ್ಟಗಿ ತಾಲೂಕಿನಲ್ಲಿ ಮಾತ್ರ ವಾಡಿಕೆಯಂತೆ 128 ಮಿ.ಮೀ. ಮಳೆಯಾಗಿದೆ. ಇನ್ನೂ ಯಲಬುರ್ಗಾ ತಾಲೂಕಿನಲ್ಲಿ 124 ಮಿ.ಮೀ ವಾಡಿಕೆ ಪೈಕಿ, 93 ಮಿ.ಮೀ ಮಳೆಯಾಗಿದ್ದರೆ 25 ಮಿ.ಮೀ ಮಳೆ ಕೊರತೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 128 ಮಿ.ಮೀ. ಮಳೆ ಪೈಕಿ 89 ಮಿ.ಮೀ ಮಳೆಯಾಗಿದ್ದು, ಉಳಿದಂತೆ 25 ಮಿ.ಮೀ ಮಳೆ ಕೊರತೆಯಾಗಿದೆ.
ಮುಂಗಾರು ಪೂರ್ವ ಮಳೆ ಮಾಯ: ಪ್ರತಿ ವರ್ಷ ಮುಂಗಾರು ಪೂರ್ವ ಮಳೆಗಳು ಮೇ ತಿಂಗಳಲ್ಲಿ ಆರ್ಭಟಿಸುತ್ತಿದ್ದವು. ಆದರೆ ಪ್ರಸಕ್ತ ವರ್ಷ ಎಲ್ಲಿಯೂ ಆ ಲಕ್ಷಣಗಳೇ ಕಂಡಿಲ್ಲ. ಕಳೆದ ತಿಂಗಳಲ್ಲೂ 63 ಮಿ.ಮೀ. ಮಳೆ ಕೊರತೆಯಾಗಿದೆ. ಇನ್ನೂ ಜೂನ್ ತಿಂಗಳಲ್ಲಿ ಜಿಲ್ಲೆಗೆ ಮುಂಗಾರು ಪ್ರವೇಶಿಸಿದ್ದು, ಮುಂಗಾರಿನ ಮಳೆಗಳ ಸುಳಿವೇ ರೈತರಿಗೆ ಸಿಗುತ್ತಿಲ್ಲ. ಕೇವಲ ಹೋಬಳಿಯಲ್ಲಿ ಮಾತ್ರ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಸುರಿಯುತ್ತಿದ್ದು ರೈತರಿನ್ನು ತೃಪ್ತಿದಾಯಕವಾಗಿಲ್ಲ.
5ನೇ ಮಳೆಯೂ ಆಗುತ್ತಿಲ್ಲ: ಅಶ್ವಿನಿ, ಭರಣಿ ಮಳೆಗೆ ಭೂಮಿ ಹಸನ ಮಾಡಿಕೊಳ್ಳುವ ರೈತರು ಕೃತಿಕಾ ಮಳೆಗೆ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಕೆಲವು ಹೋಬಳಿಯಲ್ಲಿ ಸ್ವಲ್ಪ ಮಳೆಯಾಗಿದ್ದು ಹೆಸರು ಬಿತ್ತನೆ ಮಾಡಿದ್ದು ಬಿಟ್ಟರೆ ಮುಂದೆ ರೋಹಿಣಿ ಮಳೆಯೂ ಆಗಿಯೇ ಇಲ್ಲ. ಮೃಗಶಿರ ಮಳೆಯೂ 4ನೇ ಪಾದ ಆರಂಭವಾಗುವ ಹಂತದಲ್ಲಿದ್ದರೂ ಮಳೆಯ ಸುಳಿವು ಸಿಗುತ್ತಿಲ್ಲ. ಬಿತ್ತನೆಗೆ ಸಜ್ಜಾಗಿರುವ ಅನ್ನದಾತನಿಗೆ ಈ ವರ್ಷ ಮತ್ತೆ ಬರ ಸಿಡಿಲಿನ ನೋವು ಸದ್ದಿಲ್ಲದೆ ಕಾಣಿಸಿಕೊಳ್ಳುತ್ತಿದೆ. ಮುಂಗಾರಿನ ಐದು ಮಳೆಗಳು ಇಲ್ಲದಂತಾಗಿದ್ದು, ಮುಂದೆ ಆರಿದ್ರ, ಪುಷ್ಯ, ಪುನರ್ವಸು ಮಳೆಗಳು ಮುಗಿದರೆ ಮುಂಗರಿನ ಬಹುತೇಕ ಮಳೆಗಳು ಮುಕ್ತಾಯವಾದಂತಾಗಲಿವೆ. ಆಶ್ಲೇಷ, ಮಘ, ಹುಬ್ಬಿ, ಉತ್ತರ, ಹಸ್ತ, ಚಿತ್ತ, ಸ್ವಾತಿ ಮಳೆಗಳು ಹಿಂಗಾರು ಬೆಳೆಯ ಮಳೆಗಳಾಗಿವೆ.
ಮುಂಗಾರಿನ ಮಳೆಗಳೇ ರೈತರಿಗೆ ಭರವಸೆ ಕೊಡುತ್ತಿಲ್ಲ. ಇನ್ನೂ ಹಿಂಗಾರಿನ ಮಳೆಗಳ ಬಗ್ಗೆ ರೈತನಿಗೆ ಖಾತ್ರಿಯಾಗದಂತಾಗುತ್ತಿವೆ.
ಮೋಡ ಬಿತ್ತನೆ ಮಾಡಲಿದೆಯೇ ಸರ್ಕಾರ?:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.