ರೈತರಲ್ಲಿ ಸಂತಸ ಮೂಡಿಸಿದ ಮಳೆರಾಯ
Team Udayavani, Jun 8, 2019, 10:39 AM IST
ಕುಷ್ಟಗಿ: ವಾರದಲ್ಲಿ ಎರಡು ಬಾರಿ ಮಳೆಯಾಗಿದೆ. ಇದರಿಂದಾಗಿ ರೈತರಲ್ಲಿ ಆವರಿಸಿದ್ದ ಆತಂಕದ ಕಾರ್ಮೋಡ ಕರಗಿದ್ದು, ರೈತರು ಕೃಷಿ ಕಾರ್ಯದಲ್ಲಿ ಖುಷಿಯಿಂದ ನಿರತರಾಗಿದ್ದಾರೆ.
ಜೂ. 2ರಂದು ಮಳೆಯಾಗಿತ್ತು. ಪುನಃ ಜೂ. 6ರಂದು ರಾತ್ರಿ ಮಳೆಯಾಗಿದೆ. ಈ ಐದು ದಿನಗಳ ಅಂತರದಲ್ಲಿ ಭೂಮಿಯ ತೇವಾಂಶ ಹಿಡಿದಿಡಲು ಸಾಧ್ಯವಾಗಿದ್ದು, ಬಿತ್ತನೆಗೆ ಪೂರಕವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ರವಿವಾರ ಸುರಿದ ಮಳೆಯಿಂದ ಬಿತ್ತನೆ ಕಾರ್ಯಗಳು ಬಿರುಸಿನಿಂದ ನಡೆದಿದ್ದು, ಇದೀಗ ಪುನಃ ಮಳೆಯಾಗಿರುವುದು ಬಿತ್ತನೆ ಕ್ಷೇತ್ರಗಳು ವಿಸ್ತರಿಸಿಕೊಳ್ಳಲು ಸಾಧ್ಯವಾಗಿದೆ. ಈಗಾಲೇ ಅಲ್ಪಸ್ವಲ್ಪ ಮಳೆಗೆ ಬಿತ್ತನೆ ನಂತರ ಈ ಮಳೆಯಾಗಿರುವುದು ಸಕಾಲಿಕವಾಗಿದೆ.
ನಿಡಶೇಸಿ ಕೆರೆಗೆ ನೀರು: ಗುರುವಾರ ರಾತ್ರಿ ಯಲಬುರ್ಗಾ ತಾಲೂಕಿನ ಅಲ್ಲಲ್ಲಿ ಮಳೆಯಾಗಿದ್ದು, ನಿಡಶೇಸಿ ಕೆರೆಯತ್ತ ನೀರಿನ ಒಳ ಹರಿವು ಕಂಡು ಬಂದಿದೆ. ಗುರುವಾರ ರಾತ್ರಿ 10:30ಕ್ಕೆ ಶುರುವಾದ ಮಳೆ ಮಧ್ಯರಾತ್ರಿ 1:00 ಗಂಟೆಯಿಂದ ಶುಕ್ರವಾರ ಸಂಜೆಯವರೆಗೂ ನಿಡಶೇಸಿ ಕೆರೆ ಸಂಪರ್ಕಿಸುವ ಶಾಖಾಪುರ, ಯಲಬುರ್ತಿ ಹಳ್ಳದ ನೀರು ಹರಿಯುತ್ತಿರುವುದು ಕಂಡು ಬಂತು. ಹೀಗಾಗಿ ಕೆರೆ ಪ್ರದೇಶದಲ್ಲಿ ಶೇ. 40ರಷ್ಟು ನೀರು ಜಮೆಯಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಒಂದೆರಡು ಮಳೆಯಾದರೆ ಕೆರೆ ಭರ್ತಿಯಾಗುವುದು ಖಾತ್ರಿ ಎನಿಸಿದೆ.
ಜರಿದ ಬಸ್: ಮುದೇನೂರು ಮಾರ್ಗದಲ್ಲಿ ಜಮೀನು ನೀರು ರಸ್ತೆಯ ಮೇಲೆ ಹರಿದ ಪರಿಣಾಮ, ರಸ್ತೆಯ ಮೇಲೆ ಕೆಸರು ಜಮೆಯಾಗಿತ್ತು. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ ಮುಂದೆ ಹೋಗದೇ ಪಕ್ಕಕ್ಕೆ ಜರಿಯಿತು. ಅಪಾಯದ ಸನ್ನಿವೇಶ ಅರಿತ ಚಾಲಕ ಬಸ್ ನಲಿದ್ದ ಪ್ರಯಾಣಿಕರನ್ನು ಅಲ್ಲಿಯೇ ಇಳಿಸಿದರು. ನಂತರ ಬೇರೆ ವಾಹನದ ವ್ಯವಸ್ಥೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.