ಮರೆಯಾಗುತ್ತಿವೆ ರೈತರ ಹಗೇವು
| ಧಾನ್ಯ ಸಂಗ್ರಹಕ್ಕೆ ಹಿರಿಯರು ಕಂಡುಕೊಂಡ ಮಾರ್ಗ| ವರ್ಷಗಳ ಕಾಲ ಬೆಳೆ ಕೆಡಲ್ಲ
Team Udayavani, Mar 15, 2021, 3:57 PM IST
ಕೊಪ್ಪಳ: ಆಧುನಿಕತೆ ಬೆಳೆದಂತೆಲ್ಲ ಪೂರ್ವಜರು ಅನುಸರಿಸಿಕೊಂಡು ಬಂದ ಕೃಷಿ ಪದ್ಧತಿಯಲ್ಲಿನ ವೈಜ್ಞಾನಿಕತೆಗಳು ಒಂದೊಂದೇ ಕ್ರಮೇಣ ಕಣ್ಮರೆಯಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ, ರೈತ ಬೆಳೆದ ಉತ್ಪನ್ನವನ್ನು ವರ್ಷಗಟ್ಟಲೇರಕ್ಷಿಸಿಕೊಳ್ಳಲು ನಿರ್ಮಿಸಿಕೊಳ್ಳುತ್ತಿದ್ದಹಗೇವುಗಳು ಇಂದು ಜಿಲ್ಲೆಯಲ್ಲಿ ಮರೆಯಾಗುತ್ತಿವೆ. ರೈತಾಪಿ ವರ್ಗವುತಾವು ಬೆಳೆದ ಉತ್ಪನ್ನಕ್ಕೆ ಉತ್ತಮ ಬೆಲೆಸಿಗಬೇಕೆಂದರೆ ಮತ್ತೆ ಹಗೇವು ಪದ್ಧತಿ ಆರಂಭಿಸಬೇಕಿದೆ.
ಹೌದು.. ಈ ಹಿಂದೆ ನಮ್ಮ ಪೂರ್ವಜರು ಮಳೆಗಾಲದಲ್ಲೇ ಅತಿಹೆಚ್ಚು ಜೋಳ, ಗೋ ಧಿ ಸೇರಿದಂತೆ ಇತರೆಬೆಳೆ ಬೆಳೆಯುತ್ತಿದ್ದರು. ಆಗೆಲ್ಲ ಮಣ್ಣಿನಮನೆಗಳಾಗಿದ್ದರಿಂದ ಮಳೆಗಾಲದಲ್ಲಿ ಮನೆಗಳು ಸೋರುವುದು, ಇಲಿ,ಹೆಗ್ಗಣಗಳ ಕಾಟದಿಂದ ಉತ್ಪನ್ನ ಸಂರಕ್ಷಣೆಮಾಡಿಕೊಳ್ಳುವುದು ಕಷ್ಟವಾಗುತ್ತಿತ್ತು.ಅಲ್ಲದೇ ಉತ್ಪನ್ನಗಳಿಗೆ ಹುಳು ಬಾಧೆ ಹೆಚ್ಚಾಗುತ್ತಿತ್ತು. ಜೊತೆಗೆ ಹಿಂದೆಹೆಚ್ಚು ಬೆಳೆಯುತ್ತಿದ್ದರಿಂದ ಆಗಲೂಮಾರುಕಟ್ಟೆಯಲ್ಲಿ ಜೋಳ, ಗೋಧಿ ಯಂತಹ ಉತ್ಪನ್ನಕ್ಕೆ ಬೆಲೆಯೂ ಸಿಗುತ್ತಿರಲಿಲ್ಲ. ಇದೇ ಉದ್ದೇಶದಿಂದಲೇಈ ಹಿಂದಿನ ರೈತಾಪಿ ವರ್ಗ ಹಗೇವುಸಂಸ್ಕೃತಿಯನ್ನು ಆರಂಭಿಸಿತ್ತು. ಆದರೆಅವು ಮರೆಯಾಗುತ್ತಿರುವುದು ನಿಜಕ್ಕೂ ಬೇಸರ ತರಿಸಿದೆ.
ಇಂದು ಗೋದಾಮು, ಅಂದು ಹಗೇವು:ಪ್ರಸ್ತುತ ದಿನದಲ್ಲಿ ಸರ್ಕಾರವು ರೈತರಉತ್ಪನ್ನಗಳನ್ನು ರಕ್ಷಣೆ ಮಾಡಿಕೊಳ್ಳಲುಜಿಲ್ಲಾವಾರು ಗೋದಾಮುನಿರ್ಮಿಸಲಾಗುತ್ತದೆ. ಅವು ಕೆಲವುಸುಸ್ಥಿತಿಯಲ್ಲಿದ್ದರೆ, ಇನ್ನು ಕೆಲವುದುಸ್ಥಿತಿಯಲ್ಲಿವೆ. ವಿಜ್ಞಾನಿಗಳು ಸಹ ರೈತರುಬೆಳೆದ ಉತ್ಪನ್ನವನ್ನು ತಕ್ಷಣವೇ ಮಾರಾಟಮಾಡಬೇಡಿ. ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತ ನೋಡಿಕೊಂಡು ವಹಿವಾಟುನಡೆಸಿ ಅಲ್ಲಿಯವರೆಗೂ ಉತ್ಪನ್ನವನ್ನು ಸಂರಕ್ಷಣೆ ಮಾಡಿಕೊಳ್ಳಿ ಎಂದು ಹೇಳುತ್ತಲೇ ಇದ್ದಾರೆ. ಬೆಳೆದ ಉತ್ಪನ್ನ2-3 ತಿಂಗಳ ತಡವಾಗಿ ಮಾರಾಟ ಮಾಡಿ ಎಂದೆನ್ನುತ್ತಿದ್ದಾರೆ. ಆದರೆ ರೈತರಸ್ಪಂದನೆಯು ಅಷ್ಟಕಷ್ಟೆ ಎನ್ನುವಂತಾಗಿದೆ.
ಇಂದು ರೈತರು ಕಷ್ಟಪಟ್ಟು ಬೆಳೆದರೂಬೆಳೆಗೆ ಬೆಲೆಯೇ ಇಲ್ಲದಂತಾಗಿತುಂಬ ಸಂಕಷ್ಟ ಎದುರಿಸುತ್ತಿದ್ದಾರೆ.ಮಾಡಿದ ಸಾಲವೂ ತೀರದಂತ ಪರಿಸ್ಥಿತಿನಿರ್ಮಾಣವಾಗುತ್ತಿದೆ. ಬೆಲೆ ಬರುವ ತನಕರೈತನು ಕಾಯುತ್ತಿಲ್ಲ. ಮಾರುಕಟ್ಟೆಯಲ್ಲಿಬೆಲೆ ಕುಸಿದಾಗ ಅತ್ಯಂತ ಕಡಿಮೆ ಬೆಲೆಗೆ ಉತ್ಪನ್ನವನ್ನು ಮಾರಾಟ ಮಾಡಿ ಕೃಷಿಯಿಂದಲೇ ವಿಮುಖನಾಗುತ್ತಿದ್ದಾನೆ. ರೈತರು ಈ ಹಿಂದೆ ಪೂರ್ವಜರು ಕೃಷಿಯಲ್ಲಿ ಅಳವಡಿಸಿಕೊಂಡ ಹಗೇವು ಸೇರಿದಂತೆ ಕೆಲವೊಂದು ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡರೆ ಕೃಷಿಯಲ್ಲಿ ಸೋಲೇ ಇಲ್ಲ ಎನ್ನುವಂತೆ ಜೀವನ ಕಟ್ಟಿಕೊಳ್ಳಬಹುದಾಗಿದೆ. ಮತ್ತೆ ಹಗೇವುಗಳಿಗೆ ಮರುಜೀವ ನೀಡಿಬೆಳೆದ ಉತ್ಪನ್ನವನ್ನು ವೈಜ್ಞಾನಿಕತೆಯಿಂದ ಹಗೇವುಗಳಲ್ಲಿ ಸಂಗ್ರಿಸಿ ಭದ್ರವಾಗಿಇಟ್ಟುಕೊಂಡರೆ ರೋಗವೂ ಕಡಿಮೆ,ಬೆಲೆ ಬಂದಾಗ ಅವುಗಳನ್ನು ತೆಗೆದು ಮಾರಾಟ ಮಾಡಿ ಉತ್ತಮ ಲಾಭವನ್ನೂಪಡೆಯಲು ಅವಕಾಶವಿದೆ. ಇಲ್ಲಿ ರೈತರು ಸ್ವಲ್ಪ ಶ್ರಮಿಸಿದರೆ ಬೆಲೆ ಕುಸಿತದಿಂದ ಪಾರಾಗಬಹುದಾಗಿದೆ.
ಯರೆ ಭಾಗದಲ್ಲಿ ಇನ್ನೂ ಇವೆ ಹಗೇವು :
ಜಿಲ್ಲೆಯಲ್ಲಿ ಕೆಲವೊಂದು ಭಾಗದಲ್ಲಿ ಹಗೇವುಗಳು ಮಾಯವಾಗಿದ್ದರೆ,ಇನ್ನು ಕೆಲವು ಭಾಗದಲ್ಲಿ ಇಂದಿಗೂ ಇವೆ. ಯಲಬುರ್ಗಾ ತಾಲೂಕಿನ ಸಿದ್ನೆಕೊಪ್ಪ, ಹರೆ ಹಂಚಿನಾಳ ಸೇರಿದಂತೆ ಹಲವು ಗ್ರಾಮಗಳ ರೈತರುಇಂದಿಗೂ ನೂರಾರು ಚೀಲದ ಜೋಳದ ರಾಶಿಯನ್ನು ಹಗೇವುಗಳಲ್ಲಿಸಂಗ್ರಹಿಸಿಕೊಂಡು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಾಗ ತೆಗೆದು ಮಾರಾಟ ಮಾಡುತ್ತಾರೆ. ಕೊಪ್ಪಳ ತಾಲೂಕಿನ ಬೆಟಗೇರಿ ಸೇರಿದಂತೆ ಇತರೆ ಭಾಗದಲ್ಲೂ ಕೆಲವೊಂದು ಹಗೇವುಗಳು ಸಂರಕ್ಷಿಸಲ್ಪಟ್ಟಿವೆ.ಹಗೇವು ಇರುವ ಸ್ಥಳಗಳಲ್ಲಿ ಭಾರವಾದ ವಾಹನಗಳಿಗೆಓಡಾಟಕ್ಕೆ ಅವಕಾಶವಿಲ್ಲ. ತೇವಾಂಶ ಆಗದಂತೆಯೂ ಅವುಗಳ ಬಗ್ಗೆ ರೈತಾಪಿ ವಲಯ ನಿಗಾ ವಹಿಸಿರುತ್ತದೆ.
ನಮ್ಮ ಹಿರಿಯರು ಮಾಡಿದ ಹಗೇವುಗಳನ್ನು ನಾವು ಇಂದಿಗೂ ಬಳಕೆ ಮಾಡುತ್ತಿದ್ದೇವೆ. ಕಳೆದ ವರ್ಷ ಬೆಳೆದ ಜೋಳವನ್ನು ಹಗೇವುನಲ್ಲಿ ಹಾಕಿದ್ದೇವೆ. ಇನ್ನು ಹೊರ ತೆಗೆದಿಲ್ಲ. ಉತ್ತಮ ಬೆಲೆ ಮಾರುಕಟ್ಟೆಯಲ್ಲಿ ಬಂದಾಗಅವುಗಳನ್ನು ತೆಗೆದು ನಾವು ಮಾರಾಟ ಮಾಡುತ್ತೇವೆ. ಕೆಲವೊಂದು ಭಾಗದಲ್ಲಿ -ಹಗೇವು ಬಳಕೆಯಾಗುತ್ತಿಲ್ಲ. ಬಸಯ್ಯ ಹಿರೇಮಠ, ಸಿದ್ನೆಕೊಪ್ಪದ ರೈತ
ಈ ಹಿಂದೆ ರೈತರು ಅತಿ ಹೆಚ್ಚು ಜೋಳ, ಗೋಧಿ ಬೆಳೆಯುತ್ತಿದ್ದರು. ಎಲ್ಲವನ್ನೂ ಮಾರಾಟ ಮಾಡಲಾಗದೇ ಚೀಲ ಸೇರಿ ರೋಗ, ಮಳೆಯಿಂದ ಉತ್ಪನ್ನ ಸಂರಕ್ಷಿಸಿಕೊಳ್ಳಲು ಹಗೇವಿಗೆ ಜೋಳ ಹಾಕುತ್ತಿದ್ದರು.ವರ್ಷದ ಬಳಿಕ ತೆಗೆದು ಮಾರುಕಟ್ಟೆಯಲ್ಲಿ ಬೆಲೆ ಇದ್ದಾಗ ಮಾರಾಟಮಾಡುತ್ತಿದ್ದರು. ಇಂದು ಹಗೇವುಗಳು ಮರೆಯಾಗಿವೆ. ನಮ್ಮ ಭಾಗದಲ್ಲಿಇಂದಿಗೂ ಹಗೇವುಗಳನ್ನು ನಾವು ಕಾಣಬಹುದು. – ಅಂದಪ್ಪ ಕೋಳೂರು, ರೈತ ಮುಖಂಡ
-ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್ ವೆಲ್
ಉದ್ಘಾಟನೆ ಭಾಗ್ಯ ನಿರೀಕ್ಷೆಯಲ್ಲಿ ಅಂಗನವಾಡಿ:4 ಕೇಂದ್ರಗಳು ಬಾಡಿಗೆ ಮನೆಯಲ್ಲಿ ಕಾರ್ಯನಿರ್ವಹಣೆ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.