ತೊಗರಿ ಹಾನಿಯ ಪರಿಹಾರದ ಮೊತ್ತ ದ್ವಿಗುಣಗೊಳಿಸಲು ತಹಶೀಲ್ದಾರಿಗೆ ರೈತರ ಮನವಿ
Team Udayavani, Jan 24, 2022, 4:25 PM IST
ಕುಷ್ಟಗಿ: ಅಕಾಲಿಕ ಮಳೆಯಿಂದ ತೊಗರಿ ಸೇರಿದಂತೆ ಇತರೇ ಬೆಳೆಗಳು ಹಾನಿಯಾಗಿದ್ದು ಸರ್ಕಾರ ತೊಗರಿ ಬೆಳೆಗೆ ಅತ್ಯಲ್ಪ ಪರಿಹಾರ ನೀಡಿದೆ. ತೊಗರಿ ಹಾನಿಯ ಪರಿಹಾರದ ಮೊತ್ತ ದ್ವಿಗುಣಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಅಕಾಲಿಕ ಮಳೆಯಿಂದ ಶೇ.50 ರಷ್ಟು ತೊಗರಿ ಹಾಳಾಗಿದೆ. ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಪೇರಲ, ದ್ರಾಕ್ಷಿ ಸೇರಿದಂತೆ ಮಣಸಿಕಾಯಿ, ನೀರಾವರಿ ಅಶ್ರೀತ ಭತ್ತದ ಬೆಳೆಗೆ ಹಾನಿಯಾಗಿದ್ದರೂ ಪರಿಗಣಿಸಿಲ್ಲ. ಕುಷ್ಟಗಿ, ಹನುಮಸಾಗರ, ತಾವರಗೇರಾ ದಲ್ಲಿ ಬೆಂಬಲ ಬೆಲೆ ತೊಗರಿ ಖರೀಧಿ ಕೇಂದ್ರ ಕಾಟಾಚಾರ ಎನ್ನುವಂತಾಗಿದ್ದು ರೈತರಿಗೆ ಅನಕೂಲ ಆಗಿಲ್ಲ. ಮೊದಲ ಎರಡು ದಿನ ಆರಂಭಿಸಿ ನಂತರ್ ಬಂದ್ ಮಾಡುವುದು ನಡೆದಿದ್ದು ಸಮರ್ಪಕವಾಗಿ ನಡೆದಿಲ್ಲ. ತೊಗರಿ ಗುಣಮಟ್ಟದ ನೆಪದಲ್ಲಿ ತೊಗರಿಯನ್ನು ಖರೀದಿಸದೇ ನಿರಾಕರಿಸುತ್ತಿದ್ದಾರೆ ಎಂದು ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷ ನಜೀರಸಾಬ್ ಮೂಲಿಮನಿ ಆರೋಪಿಸಿದರು.
ಕುಷ್ಟಗಿಯಿಂದ ತಾವರಗೇರಾಕ್ಕೆ ಕೆಪಿಸಿಎಲ್ ಬೃಹತ್ ವಿದ್ಯುತ್ ಟಾವರ್ ಹಾಗೂ ಕಾರಿಡಾರ್ ಅಳವಡಿಸುವ ಕಾರ್ಯ ನಡೆದಿದೆ. ವಿದ್ಯುತ್ ಟಾವರ್ ಅಳವಡಿಸಿದ ಜಮೀನುಗಳ ರೈತರಿಗೆ ಯಾವೂದೇ ಪರಿಹಾರ ಇಲ್ಲ. ಸುಜಲಾನ್ ಪವರ್ ಕಂಪನಿ ರೈತರ ಜಮೀನುಗಳನ್ನು ಭೂ ಪರಿವರ್ತನೆ ಇಲ್ಲದೇ ಕಾಮಗಾರಿ ನಡೆಸಿದ್ದು ಸದರಿ ಕಾಮಗಾರಿಗೆ ತಡೆಗೆ ಆಗ್ರಹಿಸಿದರು.
ಇದೇ ವೇಳೆ ತಹಶೀಲ್ದಾರ ಎಂ.ಸಿದ್ದೇಶ ಅವರಿಗೆ ಮನವಿ ಸಲ್ಲಿಸಲಾಯಿತು. ಶಂಕರಗೌಡ ಪಾಟೀಲ ಬೀಳಗಿ, ಬಸಪ್ಪ ಅಮ್ಮಣ್ಣನವರ್, ಮಹಿಳಾ ಘಟಕದ ಅಧ್ಯಕ್ಷೆ ಮಹಾಂತಮ್ಮ ಪಾಟೀಲ, ನಾಗರಾಜ ಇಟಗಿ, ವೆಂಕಟೇಶ್ ರಾಠೋಡ್,ಯಮನೂರಪ್ಪ ಮಡಿವಾಳ, ಉಮೇಶ ಬಾಚಲಾಪೂರ, ಶರಣಪ್ಪ ಬಾಚಲಾಪೂರ, ಮಲ್ಲಪ್ಪ ಹವಾಲ್ದಾರ್, ಪ್ರವೀಣ್ ಕುಮಾರ ಕೊರಡಕೇರಾ,ಯಂಕಣ್ಣ ಉಪ್ಪಳೆರ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.