ಕುಷ್ಟಗಿ: ಕಲ್ಲಂಗಡಿ ಬೆಳೆದ ಪ್ರದೇಶಕ್ಕೆ ದಾಳಿಯಿಟ್ಟ ಕರಡಿಗಳ ಹಿಂಡು: ಆತಂಕದಲ್ಲಿ ರೈತರು
Team Udayavani, Dec 29, 2021, 12:42 PM IST
ಕುಷ್ಟಗಿ: ಕುಷ್ಟಗಿ ತಾಲೂಕಿನ ಗಡಿ ಗ್ರಾಮ ಹೊನಗಡ್ಡಿ ಸೀಮಾದಲ್ಲಿ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದವರಿಗೆ ಬುಧವಾರ ರೈತರಿಗೆ ಬೆಳ್ಳಂ ಬೆಳಗ್ಗೆ ಕರಡಿಗಳ ಹಿಂಡು ಶಾಕ್ ನೀಡಿವೆ.
ಗ್ರಾಮದ ಹೊರವಲಯದಲ್ಲಿರೈತ ಶರಣಪ್ಪ ಮ್ಯಾದನೇರಿ ಎರಡು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದರು. ಈ ಬೆಳೆಗ್ಗೆ ಬೀಜ, ಗೊಬ್ಬರ, ಪ್ಲಾಸ್ಟಿಕ್ ಮಲ್ಚಿಂಗ್ ಸೇರಿದಂತೆ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂ ಸಾವಿರಾರು ರೂ. ಖರ್ಚು ಮಾಡಿಕೊಂಡಿದ್ದರು.ಕಲ್ಲಂಗಡಿ ಹಣ್ಣಾಗುವ ಹಂತದಲ್ಲಿ ಕರಡಿಗಳ ಹಿಂಡು ದಾಳಿ ಇಟ್ಟಿದ್ದು, ಕರಡಿ ತಿಂದಿರುವುದಕ್ಕಿಂತ ಹಣ್ಣು, ಬಳ್ಳಿ ಕೆಡಿಸಿದ್ದೇ ಜಾಸ್ತಿಯಾಗಿದೆ. ಪ್ರತಿ ವರ್ಷ ಈ ಸೀಜನ್ ನಲ್ಲಿ ಕರಡಿ ದಾಳಿ ನಡೆಸುತ್ತಿರುವುದು ರೈತರನ್ನು ಕಂಗಾಲಾಗಿಸಿದೆ.
ಕರಡಿ ಬರದಂತೆ ಎಷ್ಟೇ ಮುನ್ನೆಚ್ಚರಿಕೆವಹಿಸಿದರೂ ಸಹ, ಈ ಪ್ರದೇಶದಲ್ಲಿ ಕರಡಿ ದಾಳಿ ನಿಂತಿಲ್ಲ. ಅರಣ್ಯ ಇಲಾಖೆ ಕರಡಿ ದಾಳಿ ಸಂಧರ್ಭದಲ್ಲಿ ಭೇಟಿ ನೀಡಿ, ಕರಡಿ ಭೋನು ಅಳವಡಿಸುವುದು ಹೊರತು ಪಡಿಸಿದರೆ ವನ್ಯಜೀವಿ ಕರಡಿಗಳ ನಿಯಂತ್ರಣ ಸಾದ್ಯವಾಗಿಲ್ಲ. ಕುಷ್ಟಗಿ,ಯಲಬುರ್ಗಾ, ಗಂಗಾವತಿ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಹೊನಗಡ್ಡಿ, ಗಾಣದಾಳ, ಗೌರಿಪುರ ಪ್ರದೇಶದಲ್ಲಿ ಗುಡ್ಡಗಾಡು ಪ್ರದೇಶವಿದೆ.
ಇಲ್ಲಿ ಕರಡಿಗಳ ಚಲನವಲನವಿದ್ದು ಇಲ್ಲಿ ಕರಡಿಗಳ ಬೋನು ಅಳವಡಿಸಿ ಕರಡಿಗಳ ಹಾವಳಿ ನಿಯಂತ್ರಿಸಬೇಕೆನ್ನುವುದು ರೈತರ ಆಗ್ರಹವಾಗಿದೆ. ಕಳೆದ ವರ್ಷವೂ ಕರಡಿಗಳು ಕಲ್ಲಂಗಡಿ ಫಸಲು ಹಾಳು ಮಾಡಿದ್ದವು ಪದೇ ಪದೇ ಇವುಗಳ ಹಾವಳಿಗೆ ರೈತಾಪಿ ವರ್ಗ ದಿಕ್ಕುತೋಚಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.