ಆಸ್ಪತ್ರೆಗಳಿಗೆ ಗವಿಮಠದಿಂದ “ದಾಸೋಹ’
ಮಠದಿಂದ 200 ಬೆಡ್ ಕಾಳಜಿ ಕೇಂದ್ರ ಆರಂಭ ! ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಯೋಗ-ಧ್ಯಾನ
Team Udayavani, May 19, 2021, 6:36 PM IST
ಕೊಪ್ಪಳ: ದಾಸೋಹ, ಕಾಯಕಕ್ಕೆ ಹೆಸರಾದ ಗವಿಮಠವು ಸೋಂಕಿತರಿಗೆ ಆಕ್ಸಿಜನ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಆರಂಭಿಸುವ ಮೂಲಕ ಸಂಜೀವಿನಿಯಾಗುವ ಜತೆಗೆ ಜನರ ಹಸಿವು ನೀಗಿಸಲು ದಾಸೋಹ ಸೇವೆಗೂ ಮುಂದಾಗಿದೆ.
ಕಳೆದ ವರ್ಷ ಕೋವಿಡ್ ಸಂದರ್ಭದಲ್ಲೂ ಖಾಸಗಿ-ಸರ್ಕಾರಿ ಆಸ್ಪತ್ರೆಗಳಿಗೆ ನಿತ್ಯ ಊಟ ತಲುಪಿಸಿತ್ತು. ಈ ವರ್ಷವೂ ಮತ್ತೆ ದಾಸೋಹ ಸೇವೆ ಆರಂಭ ಮಾಡಿದೆ. ನಗರದಲ್ಲಿ ಸರ್ಕಾರಿ ಜಿಲ್ಲಾ ಕೋವಿಡ್ ಆಸ್ಪತ್ರೆ-ನಾಲ್ಕು ಖಾಸಗಿ ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರ ಆರೈಕೆಯಲ್ಲಿ ತೊಡಗಿರುವವರಿಗೆ ಹಾಗೂ ಸೋಂಕಿತರ ಸಂಬಂಧಿಕರಿಗೆ ಊಟದ ವ್ಯವಸ್ಥೆ ಮಾಡಿದೆ. ಕೋವಿಡ್ ಉಲ್ಬಣದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಣೆಯಾದ ಪರಿಣಾಮ ನಗರ ಪ್ರದೇಶದಲ್ಲಿ ಕುಡಿಯಲು ನೀರೂ ಸಿಗದ ಪರಿಸ್ಥಿತಿ ಇದೆ. ಈ ವೇಳೆ ಸೋಂಕಿತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುವ ಸಂಬಂಧಿಕರು ನಿತ್ಯ ಊಟಕ್ಕೆ ತೊಂದರೆ ಎದುರಿಸುವಂತಾಗಿದೆ.
ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಊಟ ಕೊಟ್ಟರೂ ಅವರ ಸಂಬಂಧಿ ಕರು ಅಥವಾ ಆರೈಕೆ ಮಾಡುವವರಿಗೆ ಊಟದ ಸಮಸ್ಯೆಯಾಗದಿರಲೆಂಬ ಕಾರಣಕ್ಕೆ ನಿತ್ಯ ಗವಿಮಠದಿಂದ 600-700 ಊಟದ ಪ್ಯಾಕೆಟ್‌ಗಳನ್ನು ಆಸ್ಪತ್ರೆಯ ಸ್ಥಳಕ್ಕೆ ಹೋಗಿ ವಿತರಿಸಲಾಗುತ್ತಿದೆ. ಸೋಂಕಿತರು ಆಟವಾಡಲು ಕೇರಂ ವ್ಯವಸ್ಥೆ: ಬಿ.ಎಸ್. ಗುಡಿ ಕುಟುಂಬವು ಗವಿಮಠದಲ್ಲಿನ ಸೋಂಕಿತರು ಸಮಯವನ್ನು ಖುಷಿಯಿಂದ ಕಳೆಯಲು, ಆರೋಗ್ಯವಂತ ಸೋಂಕಿತರು ಎಲ್ಲರೊಟ್ಟಿಗೆ ಬೆರೆಯಲು ಎರಡು ಕೇರಂ ಬೋರ್ಡ್‌ಗಳನ್ನು ಗವಿಮಠಕ್ಕೆ ನೀಡಿದೆ.
ಕೇರಂ ಆಟ ಆಡುವ ಮೂಲಕ ಅವರು ಸಮಯ ಖುಷಿಯಿಂದ ಕಳೆಯಲಿ ಎನ್ನುವುದು ಅವರ ಉದ್ದೇಶ. ಅಲ್ಲದೇ, ಪಗಡೆ ಆಟ, ಹಾವು-ಏಣಿ ಆಟ, ಹ್ಯಾಂಡ್ ಬಾಲ್ ಸೇರಿ ಇತರೆ ಆಟಿಕೆ ಸಾಮಗ್ರಿಗಳನ್ನೂ ಕೊಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.