ಕೆರೆ ದಡದಲ್ಲಿ ವನ್ಯ ಜೀವಿಗಳಿಗೆ ಅರವಟಿಗೆ


Team Udayavani, May 25, 2019, 3:27 PM IST

kopp-5

ಕುಷ್ಟಗಿ: ಮನುಷ್ಯರಿಗೆ ಕೇಳಿದರೆ ನೀರು ಸಿಗಬಹುದು, ಆದರೆ ಅರಣ್ಯ ಪ್ರದೇಶದಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ನೀರಿನ ಕೊರತೆಯಾದರೆ ಜೀವ ಕಳೆದು ಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಇದನ್ನು ಅರಿತ ಯುವಕ ಪ್ರಭು ತಾಳದ್‌ ನಿಡಶೇಸಿ ಕೆರೆ ಪ್ರದೇಶದ ದಡದಲ್ಲಿ ನೀರಿನ ತೊಟ್ಟಿಗಳನ್ನು ಇಟ್ಟು ಪಶು ಪಕ್ಷಿ ದಾಹ ಇಂಗಿಸುವ ಕೆಲಸ ಮಾಡುತ್ತಿದ್ದಾರೆ.

ಕಳೆದ ಬೇಸಿಗೆಯ ಆರಂಭದಲ್ಲಿ ಯುವಪಡೆ ಸ್ವಯಂ ಪ್ರೇರಣೆಯಿಂದ ಸದ್ದಿಲ್ಲದ ಸೇವೆ ಮಾಡುತ್ತಿದೆ. ಸ್ನೇಹಿತರಲ್ಲಿ ತಾವೇ ಹಣ ಸಂಗ್ರಹಿಸಿಕೊಂಡು ಒಂದು ಅಡಿ ಎತ್ತರವಿರುವ ಐದಾರು ಸಿಮೆಂಟ್ ತೊಟ್ಟಿಗಳನ್ನು ಖರೀದಿಸಿ, ನಿಡಶೇಸಿ ಕೆರೆ ದಡದಲ್ಲಿ ಇರಿಸಿದ್ದಾರೆ. ಪ್ರತಿ ಎರಡ್ಮೂರು ದಿನಕ್ಕೊಮ್ಮೆ ಪಕ್ಕದ ತೋಟದ ಕೊಳವೆಬಾವಿಯ ನೀರನ್ನು ತುಂಬಿಸುವ ಕಾರ್ಯ ನಡೆದಿದ್ದು, ಈ ತೊಟ್ಟಿಯಲ್ಲಿನ ನೀರನ್ನು ಕುರಿಗಾಯಿ, ದನಗಾಯಿಗಳು ಕುರಿ, ದನಗಳಿಗೆ ಕುಡಿಸುತ್ತಿದ್ದಾರೆ. ಅಲ್ಲದೇ ಅಳಿಲು, ನವಿಲು, ನರಿ, ತೋಳ, ಮುಂಗಸಿ, ಕಾಡುಹಂದಿ ಮೊದಲಾದ ಪಕ್ಷಿ, ಪ್ರಾಣಿಗಳು ಬಂದು ಇಲ್ಲಿ ನೀರು ಕುಡಿಯುತ್ತಿವೆ.

ಅಲ್ಲದೇ ತಮ್ಮ ತೋಟದ ತಂತಿ ಬೇಲಿಗೆ ನೀರಿನ ಪ್ಲಾಸ್ಟಿಕ್‌ ಬಾಟಲಿ ಇಳಿ ಬಿಟ್ಟು ಅದರಲ್ಲಿ ನೀರು ತುಂಬಿಸುವುದು ದಿನಚರಿಯಾಗಿದೆ. ತೋಟಕ್ಕೆ ಹಣ್ಣು, ಕ್ರಿಮಿ-ಕೀಟ ತಿನ್ನಲು ಬರುವ ಪಕ್ಷಿಗಳು ನೀರು ಕುಡಿಯುತ್ತಿವೆ. ಇಲ್ಲಿ ನೀರು ಹಾಕುತ್ತಿರುವುದರಿಂದ ಪಕ್ಷಿಗಳ ಕಲರವ ಕೇಳಿ ಬರುತ್ತಿದ್ದು, ಈ ಸೇವೆ ಸಾರ್ಥಕವೆನಿಸಿದೆ. ಮೇ ತಿಂಗಳಾದರೂ ನಿಡಶೇಸಿ ಕೆರೆ ಪ್ರದೇಶದಲ್ಲಿ ನೀರಿಲ್ಲ. ನೀರಿಗಾಗಿ ಬರುವ ಅದೆಷ್ಟೋ ಪ್ರಾಣಿ ಪಕ್ಷಿಗಳಿಗೆ ನಿರಾಸೆಯಾಗುವುದನ್ನು ತಪ್ಪಿಸಲು ನಮ್ಮದು ಅಳಿಲು ಸೇವೆ ಎನ್ನು ಮಹಾಲಿಂಗಪ್ಪ ತಾಳದ.

ಅಂತರ್ಜಲ ಕ್ಷೀಣಿಸಿದ್ದರಿಂದ ತೋಟಗಳಲ್ಲೂ ನೀರಿನ ಅಭಾವ ಕಂಡು ಬಂದಿದೆ. ಪಕ್ಷಿಗಳು ಅನ್ಯಮಾರ್ಗವಿಲ್ಲದೇ ಚಪಡಿಸುವುದುಂಟು ಈ ಪರಿಸ್ಥಿತಿ ಅರಿತು ತೊಟ್ಟಿ ಇಡಲಾಗಿದೆ. ಪ್ರಾಣಿ, ಪಕ್ಷಿಗಳಿಗೆ ನೀರಿನ ತೊಟ್ಟಿ ಆಸರೆಯಾಗುತ್ತಿದೆ. ನೀರಿನ ಸಂಪನ್ಮೂಲ ಇದ್ದವರು ಈ ಸೇವೆಗೆ ಮುಂದಾಗಬೇಕಿದೆ.
•ಪ್ರಭು ತಾಳದ, ಪಕ್ಷಿ ಪ್ರೇಮಿ

ಟಾಪ್ ನ್ಯೂಸ್

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

1-kushtagi

Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

kuladalli keelyavudo kannada movie

Kannada Cinema: ಕ್ಲೈಮ್ಯಾಕ್ಸ್‌ ನತ್ತ ʼಕುಲದಲ್ಲಿ ಕೀಳ್ಯಾವುದೋʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.