ನಿಡಶೇಸಿ ಕೆರೆಯಲ್ಲಿ ಕಾರ್ಕೋಂಚ್ ಕಲರವ
ಬೀಡುಬಿಟ್ಟಿವೆ 300 ಕ್ಕೂ ಅಧಿಕ ಹಕ್ಕಿಗಳು! ವಿದೇಶಿ ಬಾನಾಡಿಗೆ ನಿಡಶೇಸಿ ಕೆರೆ ಆತಿಥ್ಯ
Team Udayavani, Feb 4, 2021, 6:23 PM IST
ಕುಷ್ಟಗಿ: ಚಳಿಗಾಲದ ಆತಿಥ್ಯವಹಿಸಿಕೊಂಡಿರುವ ತಾಲೂಕಿನ ನಿಡಶೇಸಿ ಕೆರೆಯಲ್ಲೀಗ ಬಾನಾಡಿಗಳ ಕಲರವ ಶುರುವಾಗಿದೆ. ಕೆರೆ ಆವರಣದಲ್ಲಿ ವಿದೇಶಿ ಹಕ್ಕಿಗಳ ಗಲಿಬಿಲಿಗೆ ಪಕ್ಷಿ ಪ್ರೇಮಿಗಳು, ವನ್ಯಜೀವಿ ಛಾಯಾಗ್ರಾಹಕರು ಮನಸೋತಿದ್ದಾರೆ.
2019ರಲ್ಲಿ ನಿಡಸೇಸಿ ಕೆರೆ ಸಾರ್ವಜನಿಕರ ಸಹಯೋಗದಲ್ಲಿ ಪುನಶ್ಚೇತನದ ಬಳಿಕ ಕೆರೆ ಪ್ರದೇಶದಲ್ಲಿ ನೀರು ನಿಂತಿದ್ದು, ಹಕ್ಕಿಗಳು ಬರುತ್ತಿವೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕಿಗಳು ಬಂದಿರುವುದು ಪಕ್ಷಿ ಛಾಯಾಗ್ರಾಹಕರ ಉತ್ಸಾಹ ಇಮ್ಮಡಿಸಿಎ. ಕಳೆದ ವರ್ಷದಲ್ಲಿ ಬೆರಳೆಣಿಕೆ ಪ್ರಮಾಣದಲ್ಲಿದ್ದ ಬಂದಿದ್ದ ಕೊಕ್ಕರೆ ಪ್ರಬೇಧ ಮುಂಗೋಲಿಯ ವಲಸೆ ಹಕ್ಕಿ ಕಾರ್ಕೋಂಚ್ (ಡೆಮೋಯಿಸೆಲ್ ಕ್ರೇನ್) ಸದ್ಯ 300ಕ್ಕೂ ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಂಡಿವೆ. ಈ ಕುರಿತು ಮಾಹಿತಿ ನೀಡಿದ ಪಕ್ಷಿ ಛಾಯಾಗ್ರಾಹಕ, ಕೊಪ್ಪಳ ಜಿಪಂ ಸಿಎಒ ಅಮೀನ್ ಅತ್ತಾರ ಅವರು, ಈಚೆಗೆ ಇಳಿ ಹೊತ್ತಿನಲ್ಲಿ ನಿಡಶೇಸಿ ಕೆರೆ ಪ್ರದೇಶದಲ್ಲಿ ನೂರಕ್ಕೂ ಅಧಿಕ ಕಾರ್ಕೋಂಚ್ ಹಕ್ಕಿಗಳ ಸಮೂಹ ಕಂಡು ಬಂದಿದೆ.
ಗದಗ ಜಿಲ್ಲೆ ಮಾಗಡಿ ಕೆರೆಗೆ ಬಂದಿರುವ ಕಾರ್ಕೋಂಚ್ ಹಕ್ಕಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ನಿಡಶೇಸಿ ಕೆರೆಗೆ ಬಂದಿವೆ. ಚಳಿಗಾಲ ಮುಂದುವರಿದಿರುವ ಹಿನ್ನೆಲೆಯಲ್ಲಿ ಇವುಗಳ ಸಂಖ್ಯೆ ಇನ್ನು ಹೆಚ್ಚುವ ಸಾಧ್ಯತೆಯಿದೆ ಎನ್ನುತ್ತಾರೆ. ಈ ಹಕ್ಕಿಗಳ ಬಗ್ಗೆ ಒಂದಿಷ್ಟು: ಮಧ್ಯೆ ಯುರೇಷಿಯಾ ಕಪ್ಪು ಸಮುದ್ರ, ಮುಂಗೋಲಿಯಾ, ಈಶಾನ್ಯ ಚೀನಾ, ಉಪ ಆಫ್ರಿಕಾದ ಸಹಾರ, ಟರ್ಕಿ, ಉತ್ತರ ಅಮೆರಿಕಾ ಅಟ್ಲಾಸ್ ಪರ್ವತ) ಪ್ರದೇಶಗಳಲ್ಲಿ ಕಂಡು ಬರುತ್ತವೆ. ಇವುಗಳು ಧಾನ್ಯ, ಹಣ್ಣು, ಧಾನ್ಯಗಳ ತ್ಯಾಜ್ಯ, ಬಸವನ ಹುಳು, ಮಿಡತೆ, ಜೀರುಂಡೆ, ಹಲ್ಲಿ, ಹಾವು ಹೀಗೆ ಹುಳ ಹುಪ್ಪಡಿಗಳನ್ನು ತಿನ್ನುವ ಸರ್ವ ಭಕ್ಷಕ. ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತವೆ.
ಇದನ್ನೂ ಓದಿ :ಉಡುಪಿ: ತಪೋವನಿ ಮಾತಾಜಿ ನಿಧನ; ಪೇಜಾವರ ಶ್ರೀ ಸಂತಾಪ
ಸೂಕ್ಷ ¾ ಸಂವೇಧನಾ ಹಕ್ಕಿಗಳಾಗಿದ್ದು,ಸುಮಾರು 30 ಸಾವಿರ ಅಡಿ ಎತ್ತರದವರೆಗೆ ಹಾರಬಲ್ಲವು. ಈ ಹಕ್ಕಿ ಹಿಮಾಲಯ ಪರ್ವತ ಶ್ರೇಣಿ ದಾಟಿ ಭಾರತ ಪ್ರವೇಶಿಸಿಸುತ್ತಿದ್ದು, ಚಳಿಗಾಲದ ಸಂದರ್ಭದಲ್ಲಿ ಭಾರತ, ಪಾಕಿಸ್ತಾನ್ ಅಪಘಾನಿಸ್ತಾನಲ್ಲಿ ಏಪ್ರೀಲ್, ಮೇ ತಿಂಗಳವರೆಗೆ ಇದ್ದು, ಸಂತಾನೋತ್ಪತ್ತಿ ಮಾಡಿಕೊಂಡು ಜೂನ್ ವೇಳೆ ಮುಂಗಾರು ಆರಂಭದ ಹೊತ್ತಿಗೆ ತವರಿಗೆ ಮರಳುತ್ತವೆ. 27 ವರ್ಷ ಜೀವಿತಾವಧಿಯ ಕಾರ್ಕೋಂಚ್ ಹಕ್ಕಿ ಬೂದು ಬಣ್ಣದ್ದಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್ ವೆಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.