ವಾಟ್ಸ್‌ಆ್ಯಪ್ ಫ್ರೆಂಡ್ಸ್‌ನಿಂದ ವಂಚನೆ: ಇಬ್ಬರ ಬಂಧನ
Team Udayavani, Apr 22, 2021, 11:15 PM IST
ಕೊಪ್ಪಳ: ತಾಲೂಕಿನ ಬೆಳವಿನಾಳ ಗ್ರಾಮದ ಬಸವರಾಜ ಕನಕಗಿರಿ ಅವರಿಗೆ ಬೆಂಗಳೂರಿನ ಇಬ್ಬರು ವ್ಯಕ್ತಿಗಳು ವಾಟ್ಸ್ ಆ್ಯಪ್‌ನಲ್ಲಿ ಪರಿಚಯವಾಗಿ ಅವರಿಂದ 30,600 ರೂ. ಪಡೆದು ಮೋಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಸೈಬರ್ ಠಾಣೆಯ ತಂಡ ಎಸ್‌ಪಿ ಮಾರ್ಗದರ್ಶನದಲ್ಲಿ ಹಣ ಪಡೆದು ವಂಚಿಸಿದ ಆರೋಪಿಗಳನ್ನು ಬಂಧಿಸಿದೆ.
ಬಂಧಿತರಿಂದ 21 ಲಕ್ಷ ರೂ. ಮೌಲ್ಯದ ವಸ್ತು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಹಾಗೂ ಶಿವಮೊಗ್ಗಾದ ಟಿ.ಸಿ. ಚನ್ನಬಸಪ್ಪ, ಚೇತನಾ ಬಂ ಧಿತ ಆರೋಪಿಗಳು. ಈ ಆರೋಪಿಗಳು ಬೆಳವಿನಹಾಳ ಗ್ರಾಮದ ಬಸವರಾಜ ಕನಕಗಿರಿ ಅವರೊಂದಿಗೆ ವಾಟ್ಸ್‌ಆ್ಯಪ್ ಮೂಲಕ ಪರಿಚಯವಾಗಿ ಮೆಸೆಜ್ ಕಳಿಸಿದ್ದಾರೆ. ಈ ಪರಿಚಯದಿಂದ ಬಸವರಾಜ ಅವರಿಂದ ಹಂತ ಹಂತವಾಗಿ ಗೂಗಲ್ ಪೇ ಮೂಲಕ 30,600 ರೂ. ಹಣ ಪಡೆದಿದ್ದಾರೆ.
ವಂಚನೆಗೆ ಒಳಗಾದ ಬಸವರಾಜ ದೂರು ನೀಡಿದ ಹಿನ್ನೆಲೆಯಲ್ಲಿ ಕೊಪ್ಪಳ ಸೈಬರ್ ಪೊಲೀಸ್ ಠಾಣೆಯು ಎಸ್ಪಿ ಟಿ. ಶ್ರೀಧರ್, ಅಧಿ ಕಾರಿಗಳಾದ ಚಂದ್ರಶೇಖರ ಹರಿಹರ ಅವರು ತಾಂತ್ರಿಕ ಹಾಗೂ ವೈಜ್ಞಾನಿಕವಾಗಿ ಪ್ರಕರಣ ಬೇಧಿಸಿದ್ದು ಇಬ್ಬರು ಆರೋಪಿಗಳನ್ನು ಬಂ ಧಿಸಿದ್ದಾರೆ. ಬಂತರನ್ನು ವಿಚಾರಣೆಗೆ ಒಳಪಡಿಸಿದಾಗ ಇದಲ್ಲದೇ ಇನ್ನಿತರ ಪ್ರಕರಣಗಳಲ್ಲೂ ತಾವು ಭಾಗಿಯಾಗಿರುವ ಕುರಿತು ತಿಳಿಸಿದ್ದಾರೆ.
ಮೋಸ ಮಾಡಿದವರ ಹಣದಿಂದ ಕಾರು, ಬಂಗಾರ ಹಾಗೂ ಮೊಬೈಲ್ ಖರೀದಿಸಿದ್ದಾರೆ. ಇವರ ಬಳಿಯಿದ್ದ 2 ಮೊಬೈಲ್, 177 ಗ್ರಾಂ ಚಿನ್ನ, 1 ಕಾರು, 2.25 ಲಕ್ಷ ರೂ. ನಗದು ಸೇರಿದಂತೆ ಒಟ್ಟು 21 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Politics: ಮಗನ ಪರ ನಿಲ್ಲಬೇಡಿ: ಬಿಎಸ್‌ವೈಗೆ ರಮೇಶ್ ಜಾರಕಿಹೊಳಿ; ಬಿವೈವಿ ಆಕ್ರೋಶ
Gangavathi: ಸಂಕ್ರಾಂತಿ: ತುಂಗಭದ್ರಾ ನದಿಯಲ್ಲಿ ಸಾವಿರಾರು ಜನರಿಂದ ಪುಣ್ಯ ಸ್ನಾನ
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
MUST WATCH
ಹೊಸ ಸೇರ್ಪಡೆ
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ
ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.