25 ವರ್ಷ ಬಳಿಕ ಒಂದಾದ ಗೆಳೆಯರು
Team Udayavani, Jul 28, 2019, 12:11 PM IST
ಕೊಪ್ಪಳ: ಭಾಗ್ಯನಗರದ ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಜರುಗಿದ ರಜತ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಕೊಪ್ಪಳ: ಶಿಕ್ಷಕನಾದವ ವಿದ್ಯಾರ್ಥಿಗಳಿಗೆ ಕಲಿಸುವ ಜೊತೆಗೆ ತಾನು ಕೂಡ ನಿರಂತರವಾಗಿ ಕಲಿಯುತ್ತಾ ಸಾಗುತ್ತಾನೆ. ಯಾವುದೇ ಮತ್ಸರ ಭಾವಗಳಿಗೆ ಅವಕಾಶವಿಲ್ಲದ ಏಕೈಕ ವೃತ್ತಿ ಶಿಕ್ಷಕರದ್ದಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎ.ಎಂ. ಮದರಿ ಹೇಳಿದರು.
ತಾಲೂಕಿನ ಭಾಗ್ಯನಗರದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ 1994-95ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶನಿವಾರ ಏರ್ಪಡಿಸಿದ್ದ ರಜತ ಮಹೋತ್ಸವ ಹಾಗೂ ಗುರು ವಂದನಾ ಕಾರ್ಯಕ್ರಮಲ್ಲಿ ಅವರು ಮಾತನಾಡಿದರು.
25 ವರ್ಷಗಳ ನಂತರ ಅಂದಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಂದೇ ವೇದಿಕೆಯಲ್ಲಿ ಸಮಾಗಮವಾಗಿರುವುದು ಭಾವುಕ ಸಂದರ್ಭವಾಗಿದೆ. ಭಾಗ್ಯನಗರದಲ್ಲಿ 4 ದಶಕಗಳ ಹಿಂದೆ ಸರಕಾರಿ ಪ್ರೌಢಶಾಲೆ ಆರಂಭವಾದಾಗ ಶಿಕ್ಷಣ ಗುಣಮಟ್ಟದ ಬಗ್ಗೆ ಉದಾಸೀನ ಭಾವನೆ ಹೊಂದಿದ್ದವರೇ ಹೆಚ್ಚಾಗಿದ್ದರು. ಶಾಲೆಯ ಮೊದಲ ಮುಖ್ಯೋಪಾಧ್ಯಾಯ ಚನ್ನಬಸವಯ್ಯ ಹಾಗೂ ಸಿಬ್ಬಂದಿ ಬಿ.ಜಿ. ಮಡಿವಾಳರ್ ಅಂತಹವರ ಶ್ರಮದಿಂದ ಕ್ರಮೇಣ ಈ ಶಾಲೆಗೆ ಉತ್ತಮ ಹೆಸರು ಪ್ರಾಪ್ತಿಯಾಯಿತು. ಕೊಪ್ಪಳ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಹುಡುಕಿಕೊಂಡು ಈ ಶಾಲೆಯಲ್ಲಿ ಪ್ರವೇಶ ಪಡೆಯಲು ತುದಿಗಾಲಲ್ಲಿ ನಿಲ್ಲುವ ಮಟ್ಟಕ್ಕೆ ಬೆಳೆಯಲು ಇಲ್ಲಿನ ಅಂದಿನ ಶಿಕ್ಷಕರ ಕೊಡುಗೆ ಕಾರಣ ಎಂದರು.
ಭಾಗ್ಯನಗರ ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ರಾಜಶೇಖರ ಪಾಟೀಲ ಮಾತನಾಡಿ, ಜಿಲ್ಲಾದ್ಯಂತ ಕಳೆದ ಏಳೆಂಟು ವರ್ಷಗಳಿಂದ ಗುರುವಂದನಾ ಕಾರ್ಯಕ್ರಮಗಳು ನಡೆಯುತ್ತಿರುವುದನ್ನು ನೋಡಿದಾಗ ನಮ್ಮಲ್ಲಿ ಸಂಸ್ಕಾರ ಮತ್ತೇ ಜಾಗೃತವಾಗುತ್ತಿರುವುದು ಸ್ಪಷ್ಟ. ಶಿಕ್ಷಣ ಎಂದರೆ ಕಲಿಯುವ ಅವಧಿಯ ನಂತರ ನಮ್ಮಲ್ಲಿ ಉಳಿಯುವ ಭಾವನೆಗಳಾಗಿವೆ. ಗಟ್ಟಿಯಾದ ನೆನಪುಗಳು ಬಿಡದೇ ಕಾಡುತ್ತವೆ ಎಂದರು.ನಿವೃತ್ತ ಉಪನ್ಯಾಸಕ ಡಿ.ಎಂ. ಬಡಿಗೇರ ಮಾತನಾಡಿದರು.
ಪ್ರಭಾರಿ ಮುಖ್ಯೋಪಾಧ್ಯಾಯೆ ಭಾರತಿ ಅರಳಿಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದಿನ ಶಿಕ್ಷಕರಾಗಿದ್ದ ನಿಂಗಪ್ಪ ಬ್ಯಾಳಿಶೆಟ್ಟರ್, ವೀರಣ್ಣ ಶಿಗೇನಹಳ್ಳಿ, ಶಿವಪ್ಪ ತೊಂಡಿಹಾಳ, ಸೋಮಣ್ಣ ಚಿತ್ರಗಾರ, ಬಿ.ಜೆ. ಮಡಿವಾಳರ್, ಎ.ವಿ. ಉಪಾಧ್ಯಾಯ, ಶರಣಬಸಪ್ಪ ಹಳ್ಳಿಕೇರಿ, ಖಾಜಾಸಾಬ್ ಬೂದಗುಂಪಿ, ಈಶ್ವರಪ್ಪ ನಾಲವಾಡ ಸೇರಿದಂತೆ ಇತರರಿಗೆ ಗುರುವಂದನೆ ಸಲ್ಲಿಸಲಾಯಿತು.
ರೇಣುಕಾ ಮಣ್ಣೂರ, ಜಗದೀಶ ಹನುಮನಾಳ, ಜ್ಯೋತಿ ತುಂಬಳದ, ಗುರುರಾಜ ಬನ್ನಿಗೋಳ, ಶರಣು ತಿಳಿಗೋಳ ಮತ್ತಿತರರು ಅನಿಸಿಕೆ ವ್ಯಕ್ತಪಡಿಸಿದರು. ಪ್ರಭಾಕರ ಪಟವಾರಿ, ಮಾರುತಿ ಚಿತ್ರಗಾರ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗಾಯತ್ರಿ ಹಾಗೂ ಸುಮಿತ್ರಾ ಬೆಟಗೇರಿ ಪ್ರಾರ್ಥಿಸಿದರು. ಪರಶುರಾಮ ನಾಯಕ ಸ್ವಾಗತಿಸಿದರು. ಡಿ.ಗುರುರಾಜ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಡೊಳ್ಳಿನ್ ಆಶಯ ನುಡಿಗಳನ್ನಾಡಿದರು. ರವಿ ಕುರಗೋಡ ವರದಿ ವಾಚಿಸಿದರು. ಬಸವರಾಜ ಕರುಗಲ್ ನಿರೂಪಿಸಿದರು. ಗಿರೀಶ್ ಪಾನಘಂಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Burhan Wani; ಬುರ್ಹಾನ್ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್
IED explodes: ನಕ್ಸಲರು ಇರಿಸಿದ್ದ ಐಇಡಿ ಸ್ಫೋಟ: ಮೂರು ಕರಡಿಗಳು ಸಾವು
Formula E race; ಫಾರ್ಮುಲಾ-ಇ ರೇಸ್ ಪ್ರಕರಣ: ಕೆಟಿಆರ್ ಮೇಲೆ ಎಸಿಬಿ ಎಫ್ಐಆರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.