ಶಿಕ್ಷಣದಿಂದ ಸಮಾಜ ಅಭಿವೃದ್ಧಿ
•ಬಸವಣ್ಣನ ಆದರ್ಶ ಪಾಲಿಸುತ್ತಿದೆ ಬಣಜಿಗ ಸಮಾಜ•ಬಡ ಮಕ್ಕಳಿಗೆ ಸಹಾಯ ಮಾಡಿ
Team Udayavani, Sep 2, 2019, 12:56 PM IST
ಕೊಪ್ಪಳ: ಮಹಾವೀರ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕು ಬಣಜಿಗ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು.
ಕೊಪ್ಪಳ: ಯಾವುದೇ ಒಂದು ಸಮಾಜದ ಅಭಿವೃದ್ಧಿ ಶಿಕ್ಷಣದಲ್ಲಿ ಅಡಗಿದೆ. ಬಣಜಿಗ ಸಮಾಜ ಕಾಯಕ ಬಂಧು ಸಮಾಜವಾಗಿದೆ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕೆಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ಮಹಾವೀರ ಕಲ್ಯಾಣ ಮಂಟದಲ್ಲಿ ತಾಲೂಕು ಬಣಜಿಗ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಮಾವೇಶದಲ್ಲಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಣಜಿಗ ಸಮಾಜ ಕಾಯಕವೇ ಕೆೈಲಾಸ ಎಂದು ಬಸವಣ್ಣನ ತತ್ವದಡಿ ಜೀವನ ನಡೆಸಿದೆ. ಇಲ್ಲಿನ ಜನತೆ ಅರ್ಥಶಾಸ್ತ್ರದಂತೆ ಲೆಕ್ಕಾಚಾರ, ಚಾಣಿಕ್ಯನ ನೀತಿಯಂತೆ ಕೆಲಸ ಮಾಡುತ್ತಿದ್ದಾರೆ. ಸಮಾಜವು ತಕ್ಕಡಿಯಲ್ಲಿ ಹೇಗೆ ಲೆಕ್ಕಾಚಾರ ಮಾಡುವರೋ ಅದೇ ರೀತಿ ನ್ಯಾಯಯುತವಾಗಿ ಜೀವನ ನಡೆಸಿ ಇತರರಿಗೆ ಮಾದರಿಯಾಗಿದೆ. ಕರ್ನಾಟಕ ರಾಜ್ಯಕ್ಕೆ ಬಣಜಿಗ ಸಮಾಜವು 7 ಮುಖ್ಯಮಂತ್ರಿಗಳನ್ನು ಕೊಟ್ಟ ಕೀರ್ತಿ ಹೊಂದಿದೆ. ವಿಜಯ ಸಂಕೇಶ್ವರ ಅವರಂತ ವ್ಯಕ್ತಿ ಇಂದು ಬಹು ದೊಡ್ಡ ಉದ್ಯಮ ಸ್ಥಾಪನೆ ಮಾಡಿ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಇವರೊಟ್ಟಿಗೆ ಹಲವು ಮುಖಂಡರು ಉದ್ಯಮದಲ್ಲಿ ತಮ್ಮ ಜೀವನ ಕಂಡುಕೊಂಡಿದ್ದಾರೆ. ಬಡ ಕುಟುಂಬಕ್ಕೆ ಉದ್ಯೋಗ ನೀಡಿ ಅವರ ಜೀವನಕ್ಕೂ ದಾರಿಯಾಗಿದ್ದಾರೆ. ಈ ಸಮಾಜದ ಅಭಿವೃದ್ಧಿಗೆ ಶಿಕ್ಷಣಕ್ಕೆ ಒತ್ತು ನೀಡಿದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದರು.
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಬಣಜಿಗ ಸಮಾಜ ಕಾಯಕವೇ ಕೆೈಲಾಸ ಎಂದು ನಂಬಿ ಕೆಲಸ ಮಾಡುವ ಸಮಾಜವಾಗಿದೆ. ಬಸವಣ್ಣನ ತತ್ವ ಆದರ್ಶದಲ್ಲಿ ಬದುಕಿದ ಸಮಾಜವಾಗಿದೆ. ಇಲ್ಲಿಯೂ ಬಡವರು ತುಂಬ ಜನ ಇದ್ದಾರೆ. ಶ್ರೀಮಂತರು ಸಮಾಜದ ಬಡ ಮಕ್ಕಳಿಗೆ ನೆರವಾಗಿ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು. ಅವರನ್ನು ಮೇಲೆತ್ತುವ ಕೆಲಸ ಎಲ್ಲರಿಂದ ನಡೆಯಬೇಕು. ಜೊತೆಗೆ ಒಕ್ಕಟ್ಟಿನಿಂದ ಕೆಲಸ ಮಾಡಿದರೆ ಸಮಾಜ ರಾಜ್ಯದಲ್ಲಿಯೇ ಮಾದರಿಯಾಗಲಿದೆ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಬಣಜಿಗ ಸಮಾಜವು ಬಸವಣ್ಣನ ಆದರ್ಶಗಳಂತೆ ನಡೆದು ಜೀವನ ನಡೆಸುತ್ತಿದೆ. ಇಲ್ಲಿ ಸಮಾಜಕ್ಕೆ ನಮ್ಮ ಕೊಡುಗೆ ಏನು ಎನ್ನುವುದು ಮುಖ್ಯ. ಹಾಗಾಗಿ ಸಮಾಜದ ಮುಖಂಡರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅಭಿವೃದ್ಧಿಯತ್ತ ಸಾಗುವಂತೆ ಕರೆ ನೀಡಿದರು. ಬಣಜಿಗ ಸಮಾಜದ ರಾಜ್ಯಾಧ್ಯಕ್ಷ ಡಾ| ಶಿವಬಸಪ್ಪ ಹೆಸರೂರು ಮಾತನಾಡಿದರು. ಶ್ರೀಶೈಲ ಅಂಗಡಿ, ಶಿವಬಸಪ್ಪ, ರುದ್ರಣ್ಣ ಹೊಸಕೇರಿ, ಪ್ರೇಮಕ್ಕ ಅಂಗಡಿ, ಅಂದಣ್ಣ ಜವಳಿ, ವಿಶ್ವನಾಥ ಬಳೊಳ್ಳಿ, ರೇಣುಕಾ ಪಾಟೀಲ, ವೀರಣ್ಣ ಬುಳ್ಳಾ, ರಾಜಶೇಖರ ಅಂಗಡಿ, ಮಂಜುನಾಥ ಅಂಗಡಿ, ಅಪರ್ಣಾ ಬಳ್ಳೊಳ್ಳಿ, ಚನ್ನಬಸಪ್ಪ ಬಳ್ಳೊಳ್ಳಿ, ಶೇಖರಪ್ಪ, ಎಸ್.ಎಸ್. ಪಟ್ಟಣಶೆಟ್ಟರ್, ಬಸಟ್ಟೆಪ್ಪ, ವಿರೇಶ ಚಿನಿವಾರ, ಶರಣ ಬಸವರಾಜ, ರಾಜೇಶ ವಾಲಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.