ಸಾಂಘವಾಗಿ ನೆರವೇರಿದ ಜಾತ್ರೆ
Team Udayavani, Jan 31, 2021, 3:59 PM IST
ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳ ಎಂದೇ ಖ್ಯಾತಿ ಪಡೆದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರಜಾತ್ರಾ ಮಹೋತ್ಸವದ ರಥೋತ್ಸವ ಕೋವಿಡ್ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 8:45ರ ಸುಮಾರಿಗೆ ಸರಳವಾಗಿ ನೆರವೇರಿತು.
ಮಹಾ ರಥೋತ್ಸವ ಪ್ರತಿವರ್ಷ ಸಂಜೆ ಲಕ್ಷಾಂತರ ಭಕ್ತರ ಮಧ್ಯೆ ಸಾಂಘವಾಗಿ ನೆರವೇರುತ್ತಿತ್ತು. ಆದರೆ ಕೋವಿಡ್ ಕಾರಣ ಸರ್ಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಗೊಳಪಟ್ಟು, ಸಂಪ್ರದಾಯವನ್ನೂ ಮೀರದೆ ಭಕ್ತರ ಮನಕ್ಕೂ ನೋವಾಗದಂತೆ ಕೆಲವೇ ಭಕ್ತರ ಸಮ್ಮುಖದಲ್ಲಿ ಸಾಂಘವಾಗಿ ನೆರವೇರಿತು. ಕೋವಿಡ್ ಹಿನ್ನೆಲೆಯಲ್ಲಿ ನಾಡಿನ ಪ್ರಸಿದ್ಧ ಮಠಮಾನ್ಯಗಳು ಜಾತ್ರಾ ಮಹೋತ್ಸವ ರದ್ದುಪಡಿಸಿದ್ದರೆ, ಕೊಪ್ಪಳ ಗವಿಮಠವು ಎಲ್ಲರಿಗೂ ಮಾದರಿ ಎಂಬಂತೆ ಭಕ್ತರ ಹಿತ ಕಾಪಾಡುವುದರ ಜತೆಗೆ ಸರಳವಾಗಿ ಜಾತ್ರೆ ನೆರವೇರಿಸಿತು.
ಮಹಾ ರಥೋತ್ಸವ ಶನಿವಾರ ಬೆಳಗ್ಗೆ 8:45 ಗಂಟೆಗೆ ನೆರವೇರಲಿದೆ ಎಂಬ ಸಂದೇಶ ಗವಿಮಠದಿಂದ ಶುಕ್ರವಾರ ರಾತ್ರಿ ಪ್ರಕಟಗೊಳ್ಳುತ್ತಿದ್ದಂತೆ, ಭಕ್ತರು ರಾತ್ರಿಯೇ ಗವಿಸಿದ್ದೇಶ್ವರನನ್ನು ನೆನೆಯುತ್ತ, ಹಾಕುತ್ತ ಗ್ರಾಮದಿಂದ ಕಾಲ್ನಡಿಗೆ ಮೂಲಕ ಗವಿಮಠಕ್ಕೆ ಬಂದು ಜಮಾಯಿಸಿದರು. ಮಠದ ಆವರಣದಿಂದ ದೂರವೇ ನಿಂತು ಮಹಾ ರಥೋತ್ಸವವನ್ನು ಕಣ್ಮನತುಂಬಿಕೊಂಡರು.
ಬಿಜಕಲ್ ಶ್ರೀಗಳಿಂದ ರಥೋತ್ಸವಕ್ಕೆ ಚಾಲನೆ: ಮಹಾಮಾರಿ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಕೋವಿಡ್ ಗೆದ್ದ 82 ವರ್ಷದ ಕುಷ್ಟಗಿ ತಾಲೂಕಿನ ಬಿಜಕಲ್ ಮಠದ ಶ್ರೀ ಶಿವಲಿಂಗ ಮಹಾ ಸ್ವಾಮಿಗಳು ಈ ಬಾರಿಯ ಶ್ರೀ ಗವಿಸಿದ್ದೇಶ್ವರ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ:ಲಿಂಗ ಅಸಮಾನತೆ ತೊಲಗಿಸಲು ಶ್ರಮಿಸಿ
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯು ಸಮಾನತೆಯ ಯಾತ್ರೆಯಾಗಿದೆ. ಇಲ್ಲಿ ಜಾತಿ-ಬೇಧ, ಮೇಲು-ಕೀಳೆಂಬ ಭಾವನೆಯಿಲ್ಲ. ಭಕ್ತರ ಮನಸ್ಸಿನಲ್ಲೂ ಶ್ರೀ ಗವಿಸಿದ್ದೇಶ್ವರರು ನೆಲೆಸಿದ್ದಾರೆ. ಇದೊಂದು ಪುಣ್ಯದ ಜಾತ್ರೆ ಎಂದರು. ನನಗೆ ಇಳಿ ವಯಸ್ಸಿನಲ್ಲಿ ಕೋವಿಡ್ ಸೋಂಕು ತಗುಲಿತ್ತು. ಕೊಪ್ಪಳದ ಶ್ರೀ ಗವಿಸಿದ್ದೇಶ್ವರರ ಆಶೀರ್ವಾದದಿಂದ ಆಸ್ಪತ್ರೆಯಲ್ಲಿ ಸೋಂಕಿನೊಂದಿಗೆ ಹೋರಾಟ ನಡೆಸಿ, ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ. ಗವಿಸಿದ್ದೇಶ್ವರ ಕೃಪೆ, ಆಶೀರ್ವಾದದಿಂದ ಈ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದ್ದು, ಅವರು ನನಗೆ ಪುನರ್ಜನ್ಮ ನೀಡಿದ್ದಾರೆ. ರಥೋತ್ಸವಕ್ಕೆ ಚಾಲನೆ ನೀಡುವಂತೆನನಗೆ ಅವರೇ ಅಪ್ಪಣೆಯನ್ನಿತ್ತ ಹಿನ್ನೆಲೆಯಲ್ಲಿ ಅಪ್ಪಣೆ ಮೀರಬಾರದೆಂದು ಜಾತ್ರೋತ್ಸವಕ್ಕೆ ಚಾಲನೆ ನೀಡಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.