ಖಾಸಗಿ ಜಮೀನುಗಳಲ್ಲಿ ಶವ ಸಂಸ್ಕಾರ
Team Udayavani, Jan 7, 2020, 4:34 PM IST
ಕನಕಗಿರಿ: ತಾಲೂಕು ವ್ಯಾಪ್ತಿಯಲ್ಲಿ 60 ಗ್ರಾಮಗಳಿದ್ದು ಇದರಲ್ಲಿ 37 ಗ್ರಾಮಗಳಲ್ಲಿ ಇಂದಿಗೂ ಖಾಸಗಿ ಜಮೀನುಗಳಲ್ಲಿ ಶವ ಸಂಸ್ಕಾರ ಮಾಡಲಾಗುತ್ತಿದೆ. ಶವ ಸಂಸ್ಕಾರಕ್ಕೆ ಗ್ರಾಮಸ್ಥರು ಜಗಳವಾಡಬೇಕಾದ ಪರಿಸ್ಥಿತಿ ಇದೆ. ತಾಲೂಕು ವ್ಯಾಪ್ತಿಯಲ್ಲಿರುವ ಸ್ಮಶಾನಗಳು ಒತ್ತುವರಿಯಾಗಿದ್ದು, ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ.
ಇನ್ನು ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ ಸ್ಮಶಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಆದರೆ ಮರಳಿ ಮತ್ತೆ ಮುಳ್ಳಿನ ಗಿಡಗಳು ಬೆಳೆದಿವೆ. ಇದಕ್ಕಿಂತ ಆಂತಕಕಾರಿ ಸಂಗತಿ ಎಂದರೆ ತಾಲೂಕಿನ ವ್ಯಾಪ್ತಿ ಯಲ್ಲಿರುವ ಸ್ಮಶಾನಗಳಿಗೆ ಸರಿಯಾಗಿ ದಾರಿಯೇ ಇಲ್ಲದಂತಾಗಿದೆ.
ಪಟ್ಟಣದಲ್ಲಿರುವ ವಿವಿಧ ಸಮುದಾಯದ ಸ್ಮಶಾನಗಳನ್ನು ಪಪಂ ಅನುದಾನದಡಿ ಹೆಸರಿಗೆ ಮಾತ್ರ ಅಭಿವೃದ್ಧಿ ಮಾಡಲಾಗಿದೆ. ಅಭಿವೃದ್ಧಿ ಮಾಡಿದರು ಕೂಡ ಮತ್ತೆ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ತಾಲೂಕಿನ ವ್ಯಾಪ್ತಿಯಲ್ಲಿರುವ ಸ್ಮಶಾನಗಳನ್ನು ಸಂಬಂಧಿ ಸಿ ಅ ಧಿಕಾರಿಗಳು ಅಭಿವೃದ್ಧಿ ಪಡೆಸಲು ಮುಂದಾಗಬೇಕಿದೆ.
ತಾಲೂಕಿನ ಹಿರೇಖೇಡಾ, ಚಿಕ್ಕಖೇಡಾ, ನೀರಲೂಟಿ, ಮಲ್ಲಿಗೆವಾಡ, ಹಿರೇಮಾದಿನಾಳ, ಜ್ಯಾಲಿಹುಡ, ರಾಮದುರ್ಗಾ, ರಾಂಪೂರ, ಬೊಮ್ಮಸಾಗರ, ಕರಡಿಗುಡ್ಡ, ತಿಪ್ಪನಾಳ, ಬಂಕಾಪೂರ, ಕೆ. ಕಾಟಾಪುರ, ಬೆನಕನಾಳ, ಲಾಯದುಣಿಸಿ, ವರ್ಣಖೇಡಾ, ಹೊಸಗುಡ್ಡ, ದೇವಲಾಪೂರ, ಶಿರವಾರ, ಹನುಮನಾಳ, ಸೋಮಸಾಗರ, ಬಸರಿಹಾಳ, ಬೈಲಕ್ಕಂಪೂರ, ಅಡವಿಬಾವಿ, ಇಂಗಳದಾಳ, ಗುಡದೂರು, ಚಿಕ್ಕವಡ್ರಕಲ್, ನವಲಿ, ಸಂಕನಾಳ, ಕ್ಯಾರಿಹಾಳ, ಜೀರಾಳ ಕಲ್ಗುಡಿ, ಯತ್ನಟ್ಟಿ, ವಡಕಿ, ಆಕಳಕುಂಪಿ, ಜೀರಾಳ, ಚಿರ್ಚನಗುಡ್ಡ ಸೇರಿ 37 ಗ್ರಾಮಗಳಲ್ಲಿ ಸ್ಮಶಾನವಿಲ್ಲ. ಆದ್ದರಿಂದ ಖಾಸಗಿ ಜಮೀನು ಗಳಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ.
ಆದರೆ ಶವಸಂಸ್ಕಾರಕ್ಕೆ ತನ್ ಹೊಲದಲ್ಲಿ ಅವಕಾಶ ನೀಡಿದರೆ, ಆ ಹೊಲಕ್ಕೆ ತಲುಪಲು ದಾರಿಯೇ ಇರುವುದಿಲ್ಲ. ಮಧ್ಯದ ಹೊಲಗಳ ರೈತರು ತಮ್ಮ ಹೊಲದಲ್ಲಿ ತೆರಳಬೇಡಿ ಎಂದು ತಕರಾರು ಮಾಡುತ್ತಿದ್ದಾರೆ. ರುದ್ರಭೂಮಿ ಸ್ಥಾಪನೆಗಾಗಿ ಗ್ರಾಮ ಲೆಕ್ಕಾಧಿಕಾರಿಗಳು ಸರ್ಕಾರಿ ಭೂಮಿ ಗುರುತಿಸಿದ್ದು, ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳು ವರದಿ ತಯಾರಿಸಿದ್ದಾರೆ. ಆದರೆ ಕೆಲಸ ಮಾತ್ರ ಶೀಘ್ರಗತಿಯಲ್ಲಿ ಸಾಗುತ್ತಿಲ್ಲ.
ತಾಲೂಕು ವ್ಯಾಪ್ತಿಯ 37 ಗ್ರಾಮಗಳಲ್ಲಿ ಖಾಸಗಿ ಜಮೀನುಗಳಲ್ಲಿ ಶವ ಸಂಸ್ಕಾರ ಮಾಡಲಾಗುತ್ತಿದೆ. ರುದ್ರಭೂಮಿಗಾಗಿ ಸರ್ಕಾರಿ ಜಮೀನನ್ನು ಮಂಜೂರು ಮಾಡಲು ಈಗಾಗಲೇ ವರದಿ ತಯಾರಿಸಲಾಗಿದೆ. ಕೂಡಲೇ ಜಿಲ್ಲಾ ಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. –ರವಿ ಅಂಗಡಿ, ಕನಕಗಿರಿ ತಹಶೀಲ್ದಾರ್
-ಶರಣಪ್ಪ ಗೋಡಿನಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.