Gangavathi: ಮಲ್ಲಾಪೂರ-ಕುರಿಹಟ್ಟಿಯಲ್ಲಿ ಮೊಸಳೆ ಪ್ರತ್ಯಕ್ಷ; ಜನತೆಯಲ್ಲಿ ಆತಂಕ
ಮಕ್ಕಳು ಮೀನು ಹಿಡಿಯಲು ತೆರಳಿದ ಸಂದರ್ಭದಲ್ಲೇ ಪ್ರತ್ಯಕ್ಷ...
Team Udayavani, Jun 19, 2023, 8:16 PM IST
ಗಂಗಾವತಿ: ತಾಲೂಕಿನ ಮಲ್ಲಾಪೂರ -ಕುರಿಹಟ್ಟಿ ಗ್ರಾಮದ ಹಳ್ಳದಲ್ಲಿ ಸೋಮವಾರ ಮಧ್ಯಾಹ್ನ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು ಕೂಲಿ ಕಾರ್ಮಿಕರು ಮತ್ತು ರೈತರನ್ನು ಆತಂಕಕ್ಕೀಡು ಮಾಡಿದೆ.
ಮಲ್ಲಾಪೂರ ಕುರಿಹಟ್ಟಿ ಗ್ರಾಮದ ಪಕ್ಕದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಇದ್ದು ಪ್ರಸ್ತುತ ಕಾಲುವೆಯಲ್ಲಿ ನೀರು ಹರಿಯುವುದನ್ನು ನಿಲ್ಲಿಸಿರುವುದರಿಂದ ಮೊಸಳೆ ಹಳ್ಳದಲ್ಲಿ ಹರಿದು ಬಂದಿರುವ ಸಾಧ್ಯತೆ ಇದೆ. ಹಳ್ಳದಲ್ಲಿ ಕುರಿಹಟ್ಟಿ ಗ್ರಾಮದ ಮಕ್ಕಳು ಮೀನು ಹಿಡಿಯಲು ತೆರಳಿದ ಸಂದರ್ಭದಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಮಕ್ಕಳು ಭಯದಿಂದ ಹಳ್ಳದಿಂದ ದೂರ ಬಂದಿದ್ದಾರೆ.
View this post on Instagram
ಮೊಸಳೆ ಪ್ರತ್ಯಕ್ಷವಾದ ಬಳಿಕ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಹಳ್ಳದ ಅಕ್ಕಪಕ್ಕ ಹೊಲಗದ್ದೆ ಕೂಲಿ ಕೆಲಸ ಮಾಡಲು ಮತ್ತು ದನಕರು, ಎಮ್ಮೆ ಮೇಯಿಸಲು ಮಕ್ಕಳು ಸೇರಿ ಜನರು ಆಗಮಿಸುವುದರಿಂದ ಮೊಸಳೆ ದಾಳಿ ಮಾಡುವ ಸಾಧ್ಯತೆ ಇದ್ದು ಅರಣ್ಯ ಇಲಾಖೆಯವರು ಸೆರೆ ಹಿಡಿಯುವಂತೆ ಕುರಿಹಟ್ಟಿ ಗ್ರಾಮದ ಗೌರೀಶ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
ಗಂಗಾವತಿ: ಹಳ್ಳದ ಬದಿ ಹೊಸ್ಕೇರಾ-ಡಗ್ಗಿ ದಲಿತರ ಶವ ಸಂಸ್ಕಾರ- ಅಸ್ಪ್ರಶ್ಯತೆ ಇನ್ನೂ ಜೀವಂತ!
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
ದೋಟಿಹಾಳ: ಅನುದಾನವಿಲ್ಲದೆ ಮುಚ್ಚುವ ಹಂತಕ್ಕೆ ತಾಂಡಾ ನಿಗಮದ ಗ್ರಂಥಾಲಯಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.