ಅದ್ಧೂರಿ ದಸರಾ ಜಂಬೂಸವಾರಿ
Team Udayavani, Oct 20, 2018, 3:44 PM IST
ಗಂಗಾವತಿ: ಶರನ್ನವರಾತ್ರಿ ಹಬ್ಬದ ಕೊನೆಯ ದಿನ ತಾಲೂಕಿನ ಆನೆಗೊಂದಿ ಕಿಷ್ಕಿಂದಾ ವಾಲೀಕಿಲ್ಲಾದ ಆದಿಶಕ್ತಿ ಜಂಬೂಸವಾರಿ ಬ್ರಹ್ಮನಂದ ಸ್ವಾಮಿ ನೇತೃತ್ವದಲ್ಲಿ ಅದ್ಧೂರಿಯಾಗಿ ಜರುಗಿತು. ಅಂಬಾರಿ ಮೆರವಣಿಗೆಗೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು. ಅವರು ಈ ಸಂದರ್ಭದಲ್ಲಿ ಮಾತನಾಡಿ, ಆನೆಗೊಂದಿ ವಿಜಯನಗರ ಸಾಮ್ರಾಜ್ಯದ ತೊಟ್ಟಿಲು. ಮೈಸೂರು ದಸರಾ ಹಬ್ಬಕ್ಕೆ ಹಂಪಿ ಮೂಲ ಪ್ರೇರಣೆಯಾಗಿದೆ. ಕಿಷ್ಕಿಂದಾ ವಾಲೀಕಿಲ್ಲಾದಲ್ಲಿರುವ ಆದಿಶಕ್ತಿ ದೇವತೆ ವಿಜಯನಗರ ಅರಸರ ದೇವತೆ. ಅದೇ ಪರಂಪರೆಯಂತೆ ಬ್ರಹ್ಮನಂದ ಸ್ವಾಮಿ ದಸರಾ ಹಬ್ಬವನ್ನು ಆನೆಗೊಂದಿ ರಾಜಮನೆತನದವರ ನೇತೃತ್ವದಲ್ಲಿ ನಡೆಸುತ್ತಿದ್ದಾರೆ ಎಂದರು. ಅಂಬಾರಿ ಮೆರವಣಿಗೆಯಲ್ಲಿ ನಾಡಿನ ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದವು.
ಹೇಮಗುಡ್ಡ ಆನೆಅಂಬಾರಿ: ಶರನ್ನವರಾತ್ರಿ ಹಬ್ಬ ವಿಜಯನಗರ ಸಾಮ್ರಾಜ್ಯದ ಸಾಂಸ್ಕೃತಿಕ ಪರಂಪರೆಯಾಗಿದ್ದು, ಇದನ್ನು ಶ್ರದ್ಧೆಯಿಂದ ಆಚರಣೆ ಮಾಡಬೇಕೆಂದು ಮಾಜಿ ಸಂಸದ ಎಚ್.ಜಿ. ರಾಮುಲು ಹೇಳಿದರು. ಅವರು ತಾಲೂಕಿನ ಹೇಮಗುಡ್ಡದಲ್ಲಿ ಗುರುವಾರ ಸಂಜೆ ಆನೆ ಅಂಬಾರಿ ಶ್ರೀದುರ್ಗಾಪರಮೇಶ್ವರಿ ಮೂರ್ತಿ ಮೆರವಣಿಗೆ ಚಾಲನೆ ನೀಡಿ ಮಾತನಾಡಿದರು. ದಕ್ಷಿಣ ಭಾರತದಲ್ಲಿ ಶರನ್ನವರತ್ರಿ ದಸರಾ ಹಬ್ಬವನ್ನು ಆರಂಭ ಮಾಡಿದ್ದು ವಿಜಯನಗರ ಅರಸರು. ಪ್ರಸ್ತುತ ಮೈಸೂರು ದಸರಾ ಅಂಬಾರಿ ಕುಮ್ಮಟ ದುರ್ಗಾ ನಂತರ ವಿಜಯನಗರ ಸಾಮ್ರಾಜ್ಯದ ಕೊಡುಗೆಯಾಗಿದೆ. ಸರಕಾರ ಪರಂಪರೆಯಾಗಿ ದಸರಾ ಹಬ್ಬವನ್ನು ಆಚರಣೆ ಮಾಡುತ್ತಿದೆ. ಕಳೆದ 28 ವರ್ಷಗಳಿಂದ ಕಮ್ಮಟದುರ್ಗದ ಪಕ್ಕದದಲ್ಲಿರುವ ಹೇಮಗುಡ್ಡ ಶ್ರೀದುರ್ಗಾ ಪರಮೇಶ್ವರಿ ಶರನ್ನವರಾತ್ರಿ ಹಬ್ಬವನ್ನು 9 ದಿನಗಳ ಕಾಲ ದೇವಿ ಪುರಾಣ ಜರುಗಿ ಕೊನೆಯ ದಿನ ಆದಿಶಕ್ತಿಯ ಆನೆಯ ಮೇಲೆ ಅಂಬಾರಿ ಮೆರವಣಿಗೆಯಲ್ಲಿ ನಾಡಿನ ಕಲಾ ತಂಡ ಪಾಲ್ಗೊಳ್ಳುವ ಮೂಲಕ ಹಳೆಯ ದಸರಾ ನೆನಪಿಸುವ ಕಾರ್ಯನಡೆಯುತ್ತಿದೆ ಎಂದರು.
ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಜಿಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನಿರಲೂಟಿ, ಎಪಿಎಂಸಿ ಅಧ್ಯಕ್ಷ ನೀಲಪ್ಪ ಸಣ್ಣಕ್ಕಿ, ಮಾಜಿ ಶಾಸಕ ಗವಿಯಪ್ಪ, ಎಚ್.ಆರ್. ಶ್ರೀನಾಥ, ಶ್ರೀನಿವಾಸಗೌಡ, ವಿಠಲಾಪೂರ ಯಮನಪ್ಪ, ಎಸ್. ರಾಘವೇಂದ್ರಶೆಟ್ಟಿ, ಇಲಿಯಾಸಬಾಬಾ ಸೇರಿ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.