ಗಂಗಾವತಿ: ಭೂಸೇನೆಯ ಲೆಫ್ಟಿನೆಂಟ್ ಆಗಿ ನೇಮಕಗೊಂಡ ಬಾಲನಗೌಡಗೆ ಬಸಾಪಟ್ಟಣದಲ್ಲಿ ಸ್ವಾಗತ
Team Udayavani, Dec 20, 2022, 9:21 AM IST
ಗಂಗಾವತಿ: ತಾಲೂಕಿನ ಬಸಾಪಟ್ಟಣ ಗ್ರಾಮದ ಬಾಲನಗೌಡ ಎಂಬವರಿಗೆ ಪುಣೆಯ ಸೈನಿಕ ತರಬೇತಿ ಕೇಂದ್ರದಲ್ಲಿ ಯಶಸ್ವಿಯಾಗಿ ಭೂಸೇನೆಯ ತರಬೇತಿ ಮುಗಿಸಿ ಜಮ್ಮು ಕಾಶ್ಮೀರದಲ್ಲಿ ಭೂಸೇನೆಯ ಲೆಫ್ಟಿನೆಂಟ್ ಆಗಿ ನೇಮಕಗೊಂಡು ಪ್ರಥಮ ಬಾರಿ ಸ್ವಗ್ರಾಮ ಬಸಾಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.
ಗ್ರಾ.ಪಂ.ಕಚೇರಿ, ನಂಜುಂಡೇಶ್ವರ ಮಠ, ಗಂಗಾವತಿ ಕೋಟೆ ಹಾಗೂ ಕುಟುಂಬದವರೆಲ್ಲರೂ ಸೇರಿ ವಿವಿಧ ಸ್ಥಳಗಳಲ್ಲಿ ಸೇನಾಧಿಕಾರಿ ಬಾಲನಗೌಡ ಹಾಗೂ ಅವರ ಪಾಲಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಾಲನಗೌಡ ಮಾತನಾಡಿ, ಯುವಕರು ದೇಶ ಭಕ್ತಿ ಮೈಗೂಡಿಸಿಕೊಂಡು ಪಾಲಕರ ಕನಸು ನನಸು ಮಾಡಲು ಶ್ರಮವಹಿಸಿ ಓದಬೇಕು. ಉನ್ನತ ಹುದ್ದೆಯ ಕನಸನ್ನು ಚಿಕ್ಕಂದಿನಿಂದಲೇ ಕಂಡು ನನಸು ಮಾಡಲು ನಿತ್ಯವೂ ಪರಿಶ್ರಮಪಡಬೇಕು. ಸೇನೆಗೆ ಸೇರಿ ಜಮ್ಮು ಕಾಶ್ಮೀರದಲ್ಲಿ ಲೆಫ್ಟಿನೆಂಟ್ ಆಗಿ ಸೇವೆ ಮಾಡುವ ಅವಕಾಶ ದೊರಕಿರುವುದು ನಮ್ಮಕುಟುಂಬ ಮತ್ತು ಗುರು ಹಿರಿಯ ಆಶೀರ್ವಾದ. ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೇ ಮೊಬೈಲ್ ಗೀಳಿಗೆ ಬೀಳದೆ ಉತ್ತಮ ಭವಿಷ್ಯದ ಕಡೆ ಗಮನ ಹರಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಪೂಜ್ಯ ಸಿದ್ದಯ್ಯ, ಸಿದ್ದರಾಮಯ್ಯ ಗುರುವಿನ್, ಶರಣೇಗೌಡ, ಶೇಖರಗೌಡ, ಮಹೆಬೂಬಸಾಬ, ಬಸಾಪಟ್ಟಣದ ಗ್ರಾಮಸ್ಥರು, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವೀರಶೈವ ಲಿಂಗಾಯತ ಸಮಾಜದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.