ಜನಸೇವೆಯ ನಾಟಕವಾಡುವ ಗಾಲಿ ರೆಡ್ಡಿ ರಾಜ್ಯದ ಜನತೆಯ ಕೆಲ ಪ್ರಶ್ನೆಗೆ ಉತ್ತರಿಸಲಿ: ಜೆ. ಭಾರಧ್ವಾಜ್
Team Udayavani, Dec 28, 2022, 3:30 PM IST
ಗಂಗಾವತಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಸ್ತಿತ್ವಕ್ಕೆ ತಂದ ಜನಾರ್ಧನ ರೆಡ್ಡಿ ತಮ್ಮ ಬಗ್ಗೆ ತಾವು ಪ್ರಾಮಾಣಿಕರು. ಜನಸೇವೆಯ ನಾಟಕವಾಡುತ್ತಿದ್ದಾರೆ.
ಪ್ರಾಮಾಣಿಕತೆ ಮತ್ತು ಜನಸೇವಕರೆಂದು ಹೇಳಿಕೊಳ್ಳುವ ಮೊದಲು ಜನಸಾಮಾನ್ಯರಲ್ಲಿರುವ ಕೆಲ ಪ್ರಶ್ನೆಗಳಿಗೆ ಉತ್ತರ ಕೊಡುವ ಧೈರ್ಯ ತೋರಿಸಬೇಕಿದೆ ಎಂದು ಕಾರ್ಮಿಕ ಮುಖಂಡ ಜೆ. ಭಾರಧ್ವಾಜ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಕಲ್ಯಾಣ ಕರ್ನಾಟಕ ಎಂಬ ಪ್ರದೇಶದ ಹೆಚ್ಚಿನ ಭಾಗ ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿದ್ದಿತು. ಇಲ್ಲಿಯ ಜನರು 1944 ರಿಂದ 1948 ರವರೆಗೆ ಯುದ್ಧ ಮಾಡಿ ನಿಜಾಮ ಸರ್ಕಾರವನ್ನು ರಜಾಕಾರರನ್ನು ಸೋಲಿಸಿದ್ದಾರೆ. ರೆಡ್ಡಿ ನಿಜಾಮ ಸರ್ಕಾರದ ವಿರುದ್ಧ ರೈತರ ದಂಗೆಯ ಬಗ್ಗೆ ಓದಲಿ. ಬಸವಣ್ಣನ ಬಗ್ಗೆ ಹೊಗಳಿ ಮಾತನಾಡಿದ್ದಾನೆ. ಬಸವಣ್ಣ ಹಾಗೂ ಶರಣರನ್ನು ಕೊಂದವರು, ವಚನಗಳನ್ನು ಸುಟ್ಟವರು ಯಾರು ಎಂಬುದನ್ನು ಸ್ಪಷ್ಪಪಡಿಸಿ. ಏನೇನೋ ಸುಳ್ಳು ಇತಿಹಾಸವನ್ನು ಹೇಳುವುದನ್ನು ಕೈಬಿಡಿ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಸಮಸ್ಯೆಗಳು, ಪ್ರಶ್ನೆಗಳನ್ನು ಕೇಳುವವರು ಈ ಪ್ರದೇಶದಲ್ಲಿದ್ದಾರೆ.
ಒಂದನೇ ಪ್ರಶ್ನೆ, ಗಣಿಗಾರಿಕೆಗಾಗಿ 200 ವರ್ಷ ಹಳೆಯ ಇತಿಹಾಸವಿರುವಂತಹ ಸುಂಕಲಮ್ಮ ದೇವಸ್ಥಾನ ಕೆಡವಿದ್ದು ಯಾರು? ಹಿಂದೂಪರ ಯುದ್ಧ ಮಾಡುವ ಹಿಂದೂ ಮುಖಂಡರು ಕೆಡವಿದ ದೇವಸ್ಥಾನದ ಬಗ್ಗೆ ಚಕಾರ ಶಬ್ದ ಎತ್ತದಿರುವುದಕ್ಕೆ ಕಾರಣವೇನು?
ಎರಡನೇ ಪ್ರಶ್ನೆ, ಜಾಮೀನಿಗಾಗಿ ಹೈದರಾಬಾದ್‌ನ ನ್ಯಾಯಾಧೀಶರಿಗೆ ಲಂಚ ನೀಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ನ್ಯಾಯಾಧೀಶರೂ ಸಹಿತ ನಂತರದ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇದು ಸತ್ಯವೋ, ಸುಳ್ಳೊ?
ಮೂರನೇ ಪ್ರಶ್ನೆ, ನೀವು ಮೊದಲು ಕೊಲ್ಕತ್ತಾ ಮೂಲದ ಪೀಯರ್‌ಲೆಸ್ ಇನ್ಸೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡಿದಾಗಿನಿಂದಲೂ ನಿಮ್ಮ ಹಗರಣಗಳು ನಮ್ಮ ಬಳಿ ಸಾಕಷ್ಟಿವೆ. ಎನ್ನೋಬಲ್ ಇಂಡಿಯಾ ಕಂಪನಿ ಮಾಡಿ ಜನರ ದುಡ್ಡನ್ನು ಮುಚ್ಚಿ ಹಾಕಿದ್ದೀರಿ. ಆದರೆ ತಾವು ಹೇಳುವ ಪ್ರಕಾರ ಎಲ್ಲರ ಮನೆಗೆ ಹೋಗಿ ಬಡ್ಡಿ ಸಹಿತ ಮರುಪಾವತಿ ಮಾಡಿರುತ್ತೀರಿ ಎಂದು. ಆದರೂ ಇವತ್ತಿನವರೆಗೆ ಕೆಲವು ಮುಗ್ಧರು ನಿಮ್ಮ ಗೂಂಡಾಗಿರಿಗೆ ಹೆದರಿಕೊಂಡು ತಾವು ಹೂಡಿದ ದುಡ್ಡನ್ನು ಹಿಂಪಡೆದಿಲ್ಲ. ಯೆನ್ನೋಬಲ್ ಇಂಡಿಯಾದಲ್ಲಿ ಕೆಲಸ ಮಾಡುವ ಅನೇಕರನ್ನು ಕಿಡ್ಯಾಪ್ ಮಾಡಿ ಹಿಂಸಿಸಿದ್ದೀರಿ. ಗಂಗಾವತಿಯಲ್ಲಿಯೂ ಸಹ ಒಂದು ಪ್ರಕರಣದಲ್ಲಿ ನಮ್ಮ ಸಂಘಟನೆ ನಿಮ್ಮ ಹತ್ತಿರ ಪಂಚಾಯತಿ ಮಾಡಿದ್ದೇವೆ. ನಿಮ್ಮ ಹಿಂಬಾಲಕರು ಅನೇಕ ನೌಕರಿಗೆ ಬಂದ ಮುಗ್ಧ ಹುಡುಗಿಯರ ಮೇಲೆ ಅತ್ಯಾಚಾರ ಮಾಡಿದ ಉದಾಹರಣೆಗಳು ಇವೆ. ಇವುಗಳನ್ನು ಸಮರ್ಥಿಸಿಕೊಳ್ಳುವಿರೇ?
ನಾಲ್ಕನೇ ಪ್ರಶ್ನೆ, ತಮ್ಮ ಗಣಿಗಾರಿಕೆ ನಿಂತ ಮೇಲೆ ಸಾವಿರಾರು ಕಾರ್ಮಿಕರು ಬೀದಿಪಾಲಾಗಿದ್ದಾರೆ. ಅವರಿಗೆ ತಮ್ಮಿಂದ ಸಿಕ್ಕ ಭದ್ರತೆ ಮತ್ತು ಪರಿಹಾರಗಳ ಬಗ್ಗೆ ತಿಳಿಸುವಿರಾ?
ಐದನೇ ಪ್ರಶ್ನೆ, ತಮ್ಮ ಆಡಳಿತ ಅವಧಿಯಲ್ಲಿ ಆದ ಹತ್ಯೆಗಳನ್ನು ಮಾಡಿದವರಿಗೆ ಇಂದಿಗೂ ಶಿಕ್ಷೆಯಾಗಿಲ್ಲ. ಜನರು ತಾವು ಹಂತಕರನ್ನು ರಕ್ಷಿಸಿದ್ದೀರೆಂದು ಹೇಳುತ್ತಾರೆ. ನಿಜವೇ?
ಇನ್ನೂ ನೂರಾರು ಪ್ರಶ್ನೆಗಳು ತಮ್ಮ ಜೀವನದ ಬಗ್ಗೆ ಕೇಳುವ ತಿಳುವಳಿಕೆ ನಮ್ಮ ಸಂಘಟನೆಗಿದೆ. ತಾವು ನಿಜಾಮ ಸರ್ಕಾರದ ವ್ಯಾಪ್ತಿಯ ಜನರನ್ನು ಹಗುರವಾಗಿ ತೆಗೆದುಕೊಂಡಿದ್ದೀರಿ. ನಾವು ನಿಜಾಮರ ಹಾಗೂ ರಜಾಕಾರರ ವಿರುದ್ಧ ಹೋರಾಟ ಮಾಡಿ ಒಂದೂವರೆ ಲಕ್ಷ ಎಕರೆ ಭೂಮಿಯನ್ನು ದಲಿತರಿಗೆ, ಬಡವರಿಗೆ ಹಂಚಿದ ಜನ. ನಿಜಾಮ ಪ್ರದೇಶದ ಇತಿಹಾಸ ತಿಳಿದುಕೊಳ್ಳದೇ ನೀವು ಮಾತನಾಡುವುದು ನಮ್ಮಿಂದ ಸಹಿಸಲಾಗುವುದಿಲ್ಲ. ಧೈರ್ಯವಿದ್ದರೆ ಚರ್ಚೆ ಮಾಡೋಣ, ದಿನಾಂಕ ನಿಗದಿಪಡಿಸಿ, ನಾವು ಸಿದ್ಧರಿದ್ದೇವೆಂದು ಕ್ರಾಂತಿಚಕ್ರ ಬಳಗ ಜನಾರ್ಧನರೆಡ್ಡಿಗೆ ಒತ್ತಾಯಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.