ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
ರಾಷ್ಟಧ್ವಜ ಅರ್ಧಕ್ಕೇರಿಸದೇ ನಿರ್ಲಕ್ಷ್ಯ; ಎಸ್.ಎಫ್.ಐ. ಕಾರ್ಯಕರ್ತರಿಂದ ಖಂಡನೆ; ಸರಕಾರಕ್ಕೆ ದೂರು
Team Udayavani, Dec 11, 2024, 12:30 PM IST
ಗಂಗಾವತಿ: ರಾಜ್ಯದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ನಿಧನದ ಹಿನ್ನೆಲೆ ರಾಜ್ಯ ಸರ್ಕಾರ ಮೂರು ದಿನಗಳ ಕಾಲ ಶೋಕಾಚರಣೆ ಆದೇಶವನ್ನು ಜಾರಿ ಮಾಡಿದ್ದು, ಸರ್ಕಾರಿ ಕಚೇರಿಗಳಲ್ಲಿ 3 ದಿನಗಳ ಕಾಲ ನಿತ್ಯವೂ ಅರ್ಧಕ್ಕೆ ಧ್ವಜಾರೋಹಣ ಮಾಡುವಂತೆ ಸೂಚನೆ ನೀಡಿದೆ.
ಗಂಗಾವತಿ ನಗರದ ಮತ್ತು ತಾಲೂಕಿನ ಬಹುತೇಕ ಸರಕಾರಿ ಕಚೇರಿಗಳಲ್ಲಿ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಏರಿಸಲಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಾತ್ರ ಅರ್ಧಕ್ಕೆ ರಾಷ್ಟ್ರ ಧ್ವಜಾರೋಹಣ ಮಾಡದೇ ಬಿಇಓ ಅವರು ನಿರ್ಲಕ್ಷ್ಯ ತೋರಿದ್ದಾರೆ.
ಇದನ್ನು ಪ್ರತಿಭಟಿಸಿ ಎಸ್.ಎಫ್.ಐ. ಕಾರ್ಯಕರ್ತರು ಕಚೇರಿ ಎದುರು ಪ್ರತಿಭಟನೆ ನಡೆಸಿ ಬಿಇಓ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ರಾಷ್ಟ್ರಧ್ವಜವನ್ನು ಅರ್ಧಕ್ಕೇರಿಸುವ ಮೂಲಕ ಗೌರವ ಸಲ್ಲಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್.ಎಫ್.ಐ. ಮುಖಂಡ ಗ್ಯಾನೇಶ್ ಕಡಗದ ಮಾತನಾಡಿ, ಎಸ್.ಎಂ. ಕೃಷ್ಣ ಅವರು ರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿಯಾಗಿದ್ದರು. ಸರಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವ ದೃಷ್ಟಿಯಿಂದ ಮಧ್ಯಾಹ್ನದ ಬಿಸಿ ಊಟ ಆರಂಭಿಸಿದ ಕ್ರಾಂತಿಕಾರಕ ಮುಖಂಡರಾಗಿದ್ದು, ಅವರ ಗೌರವಾರ್ಥವಾಗಿ ಇಡೀ ರಾಷ್ಟ್ರದಲ್ಲಿ ಗೌರವ ಸಲ್ಲಿಸಲಾಗುತ್ತಿದ್ದು, ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ನಡೆಸಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಏರಿಸಲಾಗಿದೆ. ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಭಾರಿ ಬಿಈಓ ಮಂಜುನಾಥ ವಸ್ತ್ರದ್ ಅವರು ತಮಗೆ ಆದೇಶ ಬಂದಿಲ್ಲ ಎಂದು ರಾಷ್ಟ್ರಧ್ವಜವನ್ನು ಅರ್ಧಕ್ಕೆ ಏರಿಸದೆ ಅಗೌರವ ತೋರಿಸಿರುವುದು ಖಂಡನೀಯವಾಗಿದೆ. ಕೂಡಲೇ ಶಿಕ್ಷಣ ಇಲಾಖೆಯ ಸಚಿವರು ವಸ್ತ್ರದ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಕೂಡಲೇ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಏರಿಸಿ ಎಸ್ಎಂ ಕೃಷ್ಣ ಅವರಿಗೆ ಗೌರವ ಸಮರ್ಪಣೆ ಮಾಡುವಂತೆ ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
Tawargera: ಪತ್ನಿಯನ್ನೇ ಕೊಲೆ ಮಾಡಿದ ಪತಿ; ಶಂಕೆ
ಗಂಗಾವತಿ, ಕೊಪ್ಪಳಕ್ಕೆ ಎಸ್.ಎಂ.ಕೃಷ್ಣ ಕೊಡುಗೆ ಅಪಾರ: ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ
Gangavathi:ಗೊಂದಲದ ಮಧ್ಯೆ ಕೃಷಿಕ ಸಮಾಜಕ್ಕೆ 15 ಜನ ನಿರ್ದೇಶಕರ ಅವಿರೋಧ ಆಯ್ಕೆ
Dotihal: ದೀರ್ಘಕಾಲದ ಬೆಳೆ, ಅಧಿಕ ಲಾಭ… ಸೀತಾಫಲ ಕೃಷಿಯಲ್ಲಿ ಯಶಸ್ಸು ಕಂಡ ರೈತ
MUST WATCH
ಹೊಸ ಸೇರ್ಪಡೆ
S.M.Krishna: ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತ್ಯಸಂಸ್ಕಾರ… ಹುಟ್ಟೂರಲ್ಲಿ ನೀರವ ಮೌನ
Arrested: ಶವವಾಗಿ ಪತ್ತೆಯಾದ ಖ್ಯಾತ ನಟಿಯ ಪುತ್ರ.. ಸ್ನೇಹಿತರಿಂದಲೇ ಘೋರ ಕೃತ್ಯ
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
Udupi: ಗೀತಾಜಯಂತಿ ಅಂಗವಾಗಿ ಚಿನ್ನದ ರಥದಲ್ಲಿ ಗೀತಾ ಪುಸ್ತಕವನ್ನಿಟ್ಟು ರಥೋತ್ಸವ
Udupi: ಗೀತಾ ಜಯಂತಿ : ಸಭಾ ಕಾರ್ಯಕ್ರಮ ಉದ್ಘಾಟಿಸಿದ ಸಾಧು ಶ್ರೀ ಭದ್ರೇಶ ದಾಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.