ಗಂಗಾವತಿಗೆ 11 ತಾಪಂ ಕ್ಷೇತ್ರ ಸೃಷ್ಟಿ
Team Udayavani, Mar 27, 2021, 4:36 PM IST
ಗಂಗಾವತಿ: ಅಖಂಡ ಗಂಗಾವತಿ ತಾಲೂಕು ಒಡೆದ ನಂತರ ಗಂಗಾವತಿ ತಾಲೂಕು ವ್ಯಾಪ್ತಿ ಕಡಿಮೆಯಾಗಿದೆ. ಅಖಂಡ ಗಂಗಾವತಿಯಲ್ಲಿಒಟ್ಟು 7 ಜಿಪಂ, 31 ತಾಪಂ ಕ್ಷೇತ್ರಗಳಿದ್ದವು. ಆದರೆ ಕಾರಟಗಿ ಹಾಗೂ ಕನಕಗಿರಿ ಪ್ರತ್ಯೇಕ ತಾಲೂಕು ರಚನೆ ನಂತರ ಆಯಾ ತಾಲೂಕಿನಲ್ಲಿ ತಾಪಂ ಹಾಗೂ ಜಿಪಂಗಳು ರಚನೆ ಮಾಡಲಾಗಿದ್ದು,ಗಂಗಾವತಿ ತಾಲೂಕಿನಲ್ಲಿ ಅಭಿವೃದ್ಧಿಗೆ ಪೂರಕವಾಗಿ ನಾಲ್ಕು ಜಿಪಂ, 11 ತಾಪಂ ಸ್ಥಾನಗಳನ್ನು ರಚನೆ ಮಾಡಲಾಗಿದೆ.
ನೂತನವಾಗಿ ರಚನೆಯಾದ ಜಿಪಂಕ್ಷೇತ್ರಗಳ ಜನಸಂಖ್ಯೆಯನ್ನು ಮಿತಗೊಳಿಸಿಕ್ಷೇತ್ರ ರಚನೆ ಮಾಡಲಾಗಿದ್ದು, ಸಣ್ಣಕ್ಷೇತ್ರಗಳಿಂದ ಪ್ರಗತಿಯ ವೇಗ ಹೆಚ್ಚಾಗುತ್ತದೆ ಎಂದು ಪರೋಕ್ಷವಾಗಿತಿಳಿಸಲಾಗಿದೆ. ನೂತನವಾಗಿ ಆನೆಗೊಂದಿ, ವೆಂಕಟಗಿರಿ, ಮರಳಿ,ಹೇರೂರು ಜಿಪಂ ಕ್ಷೇತ್ರಗಳಾಗಿವೆ.ಆನೆಗೊಂದಿ, ಚಿಕ್ಕಜಂತಗಲ್, ಜಂಗಮರಕಲ್ಗುಡಿ, ಶ್ರೀರಾಮನಗರ, ಹೇರೂರು, ಮರಳಿ, ವಡ್ಡರಹಟ್ಟಿ, ಬಸಾಪಟ್ಟಣ, ಕೇಸರಟ್ಟಿ,ವೆಂಕಟಗಿರಿ ಮತ್ತು ಹಿರೇಬೆಣಕಲ್‌ತಾಪಂ ಕ್ಷೇತ್ರಗಳಾಗಿವೆ. ಪ್ರಸ್ತುತ ಎರಡು ತಾಪಂಗಳು ಕಡಿಮೆಯಾಗಿವೆ.
ಆನೆಗೊಂದಿ ಜಿಪಂ ಕ್ಷೇತ್ರದಲ್ಲಿಸಾಣಾಪೂರ, ಆನೆಗೊಂದಿ,ಮಲ್ಲಾಪೂರ, ಸಂಗಾಪೂರಚಿಕ್ಕಜಂತಗಲ್ ಗ್ರಾಪಂಗಳು, ವೆಂಕಟಗಿರಿಜಿಪಂ ಕ್ಷೇತ್ರದಲ್ಲಿ ಬಸಾಪಟ್ಟಣ, ವೆಂಕಟಗಿರಿ,ಆಗೋಲಿ ಮತ್ತು ಚಿಕ್ಕಬೆಣಕಲ್ ಗ್ರಾಪಂಗಳು,ಹೇರೂರು ಕ್ಷೇತ್ರದಲ್ಲಿ ವಡ್ಡರಹಟ್ಟಿ, ಹೇರೂರು,ಹಣವಾಳ ಮತ್ತು ಕೇಸರಟ್ಟಿ ಗ್ರಾಪಂಗಳು, ಮರಳಿಜಿಪಂ ಕ್ಷೇತ್ರದಲ್ಲಿ ಢಣಾಪೂರ, ಜಂಗಮರ ಕಲ್ಗುಡಿ,ಮರಳಿ ಶ್ರೀರಾಮನಗರ ಮತ್ತು ಹೊಸ್ಕೇರಾ ಗ್ರಾಪಂಗಳು ಬರುತ್ತವೆ.
ಮೀಸಲಾತಿ ಕರಾಮತ್ತು: ತಾಲೂಕಿನಲ್ಲಿ ಪ್ರಸ್ತುತ ರಚನೆಯಾದ ನಾಲ್ಕು ಜಿಪಂ ಕ್ಷೇತ್ರಗಳ ಪೈಕಿಆನೆಗೊಂದಿ, ವೆಂಕಟಗಿರಿ ಕ್ಷೇತ್ರಗಳು ಈ ಬಾರಿಸಾಮಾನ್ಯ ಅಥವಾ ಬಿಸಿಎ ಕೆಟಗರಿ ಬರುವ ಸಾಧ್ಯತೆಇದ್ದು ಮರಳಿ ಹೇರೂರು ಎಸ್ಸಿ, ಎಸ್ಟಿ ಪುರುಷಅಥವಾ ಮಹಿಳಾ ಮೀಸಲಾತಿ ಬರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಈ ಮಧ್ಯೆ ಆನೆಗೊಂದಿ ಮತ್ತುವೆಂಕಟಗಿರಿ ಜಿಪಂ ಕ್ಷೇತ್ರದಲ್ಲಿ ಮೀಸಲಾತಿಯ ಅನುಕೂಲವಾದರೆ ಶಾಸಕ ಪರಣ್ಣ ಮುನವಳ್ಳಿಪುತ್ರ ಸಾಗರ ಮುನವಳ್ಳಿ, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ ಪುತ್ರ ಇಮ್ತಿಯಾಜ್ ಅನ್ಸಾರಿ ಮತ್ತು ಮಲ್ಲಿಕಾರ್ಜುನ ನಾಗಪ್ಪ ಪುತ್ರ ಸರ್ವೇಶಮಾಂತಗೊಂಡ ಮತ್ತು ಶ್ರೀರಂಗದೇವರಾಯಲು ಕುಟುಂಬದ ಸದಸ್ಯರೊಬ್ಬರು ತಮ್ಮ ತಮ್ಮ ಪಕ್ಷದಿಂದ ಸ್ಪರ್ಧೆ ಮಾಡಲು ಈಗಾಗಲೇ ತೆರೆಮರೆಯ ಕಸರತ್ತು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರಗಳ ಮೀಸಲಾತಿಯನ್ನು ತಮಗೆ ಅನುಕೂಲವಾಗುವಂತೆ ಮಾಡಿಸಿಕೊಂಡುಬರುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಕೆಲ ಕ್ಷೇತ್ರಗಳಲ್ಲಿ ಜಿಪಂ ಮಾಜಿ ಸದಸ್ಯರು ತಮ್ಮ ಮಕ್ಕಳಿಗೆ ಅವಕಾಶ ಕಲ್ಪಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.
ಸ್ಥಳೀಯರು ಸ್ಪರ್ಧಿಸಲಿ: ಶಾಸಕರು ಮತ್ತು ಮಾಜಿಸಚಿವರ ಮಕ್ಕಳು ಸ್ಪರ್ಧೆ ಮಾಡುವ ಮೂಲಕ ಸ್ಥಳೀಯರಿಗೆ ಅವಕಾಶವಿಲ್ಲದಂತಾಗುತ್ತಿದ್ದು,ನಮ್ಮೂರಿನವರೇ ಸ್ಪರ್ಧೆ ಮಾಡಿದರೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲುಸಾಧ್ಯವಾಗುತ್ತದೆ. ವಿವಿಧ ಪಕ್ಷಗಳ ಜನಪ್ರತಿನಿ ಧಿಗಳ ಮಕ್ಕಳೇ ಸ್ಪರ್ಧೆ ಮಾಡಿದರೆ ಕಾರ್ಯಕರ್ತರಿಗೆ ಅವಕಾಶವಿಲ್ಲದಂತಾಗುತ್ತದೆ.
-ಕೆ. ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.